ಲೋಕಾಯುಕ್ತ ಮೆಟ್ಟಿಲೇರಿದ ಮಳೆ ಅನಾಹುತ ಪ್ರಕರಣ: ಬೆಂಗಳೂರು ಮುಳುಗಲು ಕಾರಣರಾದವರ ವಿರುದ್ಧ ಕ್ರಮಕ್ಕೆ ದೂರು | Man filled case in lokayukta to take action against officials who are reason for bengaluru flood


ಮಳೆನೀರು ಚರಂಡಿಗಳು ಅತಿಕ್ರಮಣಗೊಂಡಿವೆ, ಕೆರೆಗಳು ಮತ್ತು ಕೆರೆಗಳ ತಳದಲ್ಲಿ ಕಟ್ಟಡಗಳ ನಿರ್ಮಿಸಲು ಅನುಮತಿ ನೀಡಿದ್ದಕ್ಕಾಗಿ ಅಧಿಕಾರಿಗಳ ವಿರುದ್ಧ ಸುಮೋಟೋ ಕ್ರಮಕ್ಕೆ ಶ್ರೀರಾಮ್ ನಾಯಕ್ ಮನವಿ ಮಾಡಿದ್ದಾರೆ.

ಲೋಕಾಯುಕ್ತ ಮೆಟ್ಟಿಲೇರಿದ ಮಳೆ ಅನಾಹುತ ಪ್ರಕರಣ: ಬೆಂಗಳೂರು ಮುಳುಗಲು ಕಾರಣರಾದವರ ವಿರುದ್ಧ ಕ್ರಮಕ್ಕೆ ದೂರು

ಲೋಕಾಯುಕ್ತ, ಬೆಂಗಳೂರು ಮಳೆ

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ(Bengaluru Rain) ಸಾಕಷ್ಟು ಅನಾಹುತ‌ಗಳು ಸಂಭವಿಸಿದ್ದವು. ಮನೆಗಳಿಗೆ ನೀರು ನುಗ್ಗಿತ್ತು, ರಸ್ತೆಗಳು ಮುಳುಗಿದ್ದವು, ಜನ ಓಡಾಡುವುದೇ ಕಷ್ಟವಾಗಿತ್ತು. ಹೀಗಾಗಿ ಸರ್ಕಾರ ಬಿಬಿಎಂಪಿಯೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಆದ್ರೆ ಮತ್ತೊಂದು ಕಡೆ ಮಳೆ ಅವಾಂತರ ಪ್ರಕರಣ ಲೋಕಾಯುಕ್ತ ಮೆಟ್ಟಿಲೇರಿದೆ. ಈ ಅನಾಹುತಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀರಾಮ್ ನಾಯಕ್ ಎಂಬುವವರು ಲೋಕಾಯುಕ್ತಕ್ಕೆ ಮನವಿ ಮಾಡಿದ್ದಾರೆ.

ಮಳೆನೀರು ಚರಂಡಿಗಳು ಅತಿಕ್ರಮಣಗೊಂಡಿವೆ, ಕೆರೆಗಳು ಮತ್ತು ಕೆರೆಗಳ ತಳದಲ್ಲಿ ಕಟ್ಟಡಗಳ ನಿರ್ಮಿಸಲು ಅನುಮತಿ ನೀಡಿದ್ದಕ್ಕಾಗಿ ಅಧಿಕಾರಿಗಳ ವಿರುದ್ಧ ಸುಮೋಟೋ ಕ್ರಮಕ್ಕೆ ಶ್ರೀರಾಮ್ ನಾಯಕ್ ಮನವಿ ಮಾಡಿದ್ದಾರೆ.

TV9 Kannada


Leave a Reply

Your email address will not be published.