ಲೋಕ ಕಲ್ಯಾಣಕ್ಕಾಗಿ ಸಿಎಂ ಯಾಗ; ಯಡಿಯೂರಪ್ಪಗಾಗಿ ರಾಜ್ಯಾದ್ಯಂತ ಸ್ವಾಮೀಜಿಗಳ ಯಜ್ಞ

ಲೋಕ ಕಲ್ಯಾಣಕ್ಕಾಗಿ ಸಿಎಂ ಯಾಗ; ಯಡಿಯೂರಪ್ಪಗಾಗಿ ರಾಜ್ಯಾದ್ಯಂತ ಸ್ವಾಮೀಜಿಗಳ ಯಜ್ಞ

ಬೆಂಗಳೂರು: ಇತ್ತ ಲೋಕ ಕಲ್ಯಾಣಕ್ಕಾಗಿ ಮುಖ್ಯಮಂತ್ರಿಗಳು ಯಾಗ ನಡೆಸುತ್ತಿದ್ದರೆ, ಅತ್ತ ಸಿಎಂ ಬಿ.ಎಸ್​​ ಯಡಿಯೂರಪ್ಪ ಅವರಿಗಾಗಿಯೇ ಇಡೀ ರಾಜ್ಯಾದ್ಯಂತ ಬೆಂಬಲಿಗರು ಮತ್ತು ಮಠಾಧೀಶರು ಯಜ್ಞ ಮಾಡುತ್ತಿದ್ದಾರೆ. ಇಂತಹದ್ದೊಂದು ಅಪರೂಪದ ಘಟನೆ ನಡೆಯುತ್ತಿರುವುದು ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಬಲವಾಗಿ ಕೇಳಿ ಬರುತ್ತಿರುವ ಹೊತ್ತಲ್ಲೇ ಎಂಬುದು ವಿಶೇಷ.

ಹೌದು ಇಂದು ನಗರದ ಕಾಚರಕನಹಳ್ಳಿಯ ಕೋದಂಡರಾಮ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಸಿಎಂ ಬಿ.ಎಸ್​ ಯಡಿಯೂರಪ್ಪ ಧನ್ವಂತರಿ ಯಾಗ ನಡೆಸುತ್ತಿದ್ದಾರೆ. ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಹಮ್ಮಿಕೊಂಡಿರುವ ಈ ಧನ್ವಂತರಿ ಯಾಗ ಧಾರ್ಮಿಕ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಮತ್ತು ನಿರ್ಮಲಾನಂದ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ಭಾಗಿಯಾಗಿದ್ದಾರೆ.

ಹೀಗಿರುವಾಗಲೇ ಇಡೀ ರಾಜ್ಯದ್ಯಂತ ಸಿಎಂ ಬಿ.ಎಸ್ ಯಡಿಯೂರಪ್ಪ ಹೆಸರಿನಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಸಿಎಂ ಸ್ಥಾನಕ್ಕೆ ಕುತ್ತು ಬಾರದಂತೆ ಕ್ಷೀರಾಭಿಷೇಕ, ಅಷ್ಟೋತ್ತರ, ಏಕರುದ್ರಾಭಿಷೇಕ, ರಾಜೋಪಚಾರ, ಸಂಕಲ್ಪ ಪೂಜೆ ಸಲ್ಲಿಸಲಾಗುತ್ತಿದೆ. ಯಡಿಯೂರು ಅರ್ಚಕರಾದ ರೇಣುಕಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಹಲವರು ಸಿಎಂಗಾಗಿ ಯಜ್ಞ ಹಮ್ಮಿಕೊಂಡಿದ್ದಾರೆ.

The post ಲೋಕ ಕಲ್ಯಾಣಕ್ಕಾಗಿ ಸಿಎಂ ಯಾಗ; ಯಡಿಯೂರಪ್ಪಗಾಗಿ ರಾಜ್ಯಾದ್ಯಂತ ಸ್ವಾಮೀಜಿಗಳ ಯಜ್ಞ appeared first on News First Kannada.

Source: newsfirstlive.com

Source link