ಲೋನ್​​ ನೆಪದಲ್ಲಿ ಯೆಸ್ ಬ್ಯಾಂಕ್​​​​ಗೆ ಖತರ್ನಾಕ್​ ಕಳ್ಳರು ವಂಚಿಸಿದ್ದು ಎಷ್ಟು ಗೊತ್ತೇ?

ಲೋನ್​​ ನೆಪದಲ್ಲಿ ಯೆಸ್ ಬ್ಯಾಂಕ್​​​​ಗೆ ಖತರ್ನಾಕ್​ ಕಳ್ಳರು ವಂಚಿಸಿದ್ದು ಎಷ್ಟು ಗೊತ್ತೇ?

ಬೆಂಗಳೂರು: ಯೆಸ್​​ ಬ್ಯಾಂಕ್​​ಗೆ ಬರೋಬ್ಬರಿ 700 ಕೋಟಿ ರೂ. ವಂಚಿಸಿದ್ದ 11 ಮಂದಿ ಆರೋಪಿಗಳ ವಿರುದ್ಧ ಈಗ ಕಬ್ಬನ್ ಪೊಲೀಸರು ಎಫ್​​ಐಆರ್​​ ದಾಖಲಿಸಿಕೊಂಡಿದ್ದಾರೆ. ಸಾಲದ ನೆಪದಲ್ಲಿ ಯೆಸ್​ ಬ್ಯಾಂಕ್​​ಗೆ 700 ಕೋಟಿ ರೂ. ಪಂಗನಾಮ ಹಾಕಿ ತಲೆಮರೆಸಿಕೊಂಡಿರುವ ಈ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

ಇನ್ನು, ಕಂಪನಿಯ ಹೆಸರಿನಲ್ಲಿ ವಿವಿಧ ಯೋಜನೆಳಿಗಾಗಿ ಎಂದೇಳಿ ಈ ಖತರ್ನಾಕ್​​ ಕಳ್ಳರು ಯೆಸ್​ ಬ್ಯಾಂಕ್​​ನಿಂದ ಸಾಲ ಪಡೆದಿದ್ದರು ಎನ್ನಲಾಗಿದೆ. ಸುಮಾರು ಐದು ವರ್ಷಗಳಿಂದ ಅಂದರೆ 2016ರಿಂದಲೂ ಇವರ ವ್ಯವಹಾರ ಯೆಸ್​ ಬ್ಯಾಂಕ್​​ನಲ್ಲಿ ನಡೆಯುತ್ತಿತ್ತು. ಆದರೆ, 2019 ಡಿಸೆಂಬರ್​​​ ತಿಂಗಳಿಂದ ಸಾಲ ಮರು ಪಾವತಿ ಮಾಡಿಲ್ಲ, ಇಎಂಐ ಕಟ್ಟಿಲ್ಲ ಎಂದು ಆರೋಪಿಸಿ ಯೆಸ್​ ಬ್ಯಾಂಕ್​ ಮ್ಯಾನೇಜರ್ ಆಶೀಶ್ ವಿನೋದ್ ಜೋಶಿ ಕಬ್ಬನ್​​ ಪರ್ಕ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಸದ್ಯ ಆಶೀಶ್​​​ ವಿನೋದ್​ ಜೋಶಿ ದೂರಿನ ಆಧಾರದ ಮೇರೆಗೆ ಪೊಲೀಸರು 11 ಮಂದಿ ಎಫ್​ಐರ್​​ ರಿಜಿಸ್ಟರ್​ ಮಾಡಿದ್ದಾರೆ. ಕೊರೋನಾ ಲಾಕ್ಡೌನ್​ನಿಂದ ನಮ್ಮ ಬಳಿ ಹಣ ಇಲ್ಲ. ಹೀಗಾಗಿ, ಸಾಲ ಮರು ಪಾವತಿ ಮಾಡಲು ಸಾಧ್ಯವಿಲ್ಲ ಎಂದು 11 ಮಂದಿ ಎಸ್ಕೇಪ್​ ಆಗಿದ್ದಾರಂತೆ. ಈ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

The post ಲೋನ್​​ ನೆಪದಲ್ಲಿ ಯೆಸ್ ಬ್ಯಾಂಕ್​​​​ಗೆ ಖತರ್ನಾಕ್​ ಕಳ್ಳರು ವಂಚಿಸಿದ್ದು ಎಷ್ಟು ಗೊತ್ತೇ? appeared first on News First Kannada.

Source: newsfirstlive.com

Source link