ವಂಚನೆಗೆ ತಂದೆಗೆ ಜೈಲು ಶಿಕ್ಷೆ: ನೋವಿನ ನಡುವೆಯೂ 10 ಸಿಕ್ಸ್​ನೊಂದಿಗೆ ಅಬ್ಬರಿಸಿದ ಓಜಾ | Special mention to Naman Ojha his father arrested 2 months ago

Naman Ojha: ವಿಶೇಷ ಎಂದರೆ ಈ ಬಾರಿಯ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿರುವ ನಮನ್ ಓಜಾ 266 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.

Oct 02, 2022 | 11:05 AM

TV9kannada Web Team

| Edited By: Zahir PY

Oct 02, 2022 | 11:05 AM

ಜೀವನದಲ್ಲಿ ಕೆಲವೊಮ್ಮೆ ಏರಿಳಿತಗಳಿರುತ್ತವೆ. ಅಂತಹ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಸಾಧಿಸುವವನೇ ಸಾಧಕ. ಇದೀಗ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ ಮಿಂಚಿರುವ ಇಂಡಿಯಾ ಲೆಜೆಂಡ್ಸ್‌ನ ವಿಕೆಟ್ ಕೀಪರ್ ನಮನ್ ಓಜಾ ಅವರ ಕಥೆ ಕೂಡ ಭಿನ್ನವಾಗಿಲ್ಲ.

ನಮನ್ ಓಜಾ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ  ಫೈನಲ್‌ನಲ್ಲಿ 71 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿ ಇಂಡಿಯಾ ಲೆಜೆಂಡ್ಸ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.  ಅವರ ಈ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್‌ಗಳು ಮೂಡಿಬಂದಿತ್ತು. ವಿಶೇಷ ಎಂದರೆ ಸೆಮಿಫೈನಲ್​ನಲ್ಲೂ ಅರ್ಧಶತಕ ಬಾರಿಸುವ ಮೂಲಕ ಫೈನಲ್ ತಲುಪುವಲ್ಲಿ ಓಜಾ ಮಹತ್ವದ ಪಾತ್ರವಹಿಸಿದ್ದರು.

ವಿಶೇಷ ಎಂದರೆ ಈ ಬಾರಿಯ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿರುವ ನಮನ್ ಓಜಾ 266 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಈ ವೇಳೆ ಅವರ ಬ್ಯಾಟ್​ನಿಂದ ಮೂಡಿಬಂದಿರುವುದು 10 ಸಿಕ್ಸರ್‌ಗಳು ಮತ್ತು 30 ಬೌಂಡರಿಗಳು.

ಆದರೆ ಈ ಟೂರ್ನಿಯು ನಮನ್ ಓಜಾ ಪಾಲಿಗೆ ಸುಲಭವಾಗಿರಲಿಲ್ಲ. ಏಕೆಂದರೆ ತಿಂಗಳ ಹಿಂದೆಯಷ್ಟೇ ಅವರ ತಂದೆ ಜೈಲು ಪಾಲಾಗಿದ್ದರು. ಬ್ಯಾಂಕ್ ಆಫ್ ಮಹಾರಾಷ್ಟ್ರದ ಶಾಖೆಯ ಮ್ಯಾನೇಜರ್ ಆಗಿರುವ ವಿನಯ್ ಓಜಾ ಅವರನ್ನು 1.25 ಕೋಟಿ ರೂಪಾಯಿಗಳ ದುರುಪಯೋಗದ ಆರೋಪದ ಮೇಲೆ ಮಧ್ಯಪ್ರದೇಶ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅಲ್ಲದೆ ವಂಚನೆ ಮತ್ತು ಇತರ ಸೆಕ್ಷನ್‌ಗಳಿಗಾಗಿ ಪ್ರಕರಣಗಳು ದಾಖಲಾಗಿದ್ದವು.

ಈ ಎಲ್ಲಾ ನೋವುಗಳ ನಡುವೆ ಮೈದಾನಕ್ಕಿಳಿದ್ದ ನಮನ್ ಓಜಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ. ಅಲ್ಲದೆ ಕಳೆದ ಕೆಲ ತಿಂಗಳಿಂದ ದುಃಖದಲ್ಲಿದ್ದ ಕುಟುಂಬಸ್ಥರ ಮುಖದಲ್ಲಿ ಸಂತಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಯಾಕೆ ನಮನ್ ಓಜಾ ಬ್ಯಾಟಿಂಗ್ ಅನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಹಾಡಿಹೊಗಳಿದ್ದಾರೆ. ಒಟ್ಟಿನಲ್ಲಿ ನೋವಿನ ನಡುವೆಯೂ ಮಿಂಚುವ ಮೂಲಕ ನಮನ್ ಓಜಾ ಎಲ್ಲರ ಗಮನ ಸೆಳೆದಿದ್ದಾರೆ.

Most Read StoriesTV9 Kannada

Leave a Reply

Your email address will not be published.