
ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ
ಭಾರತದ ಸಂಸ್ಕೃತಿ ಗೊತ್ತಿಲ್ಲದವರು ಆ ರೀತಿ ಮಾತನಾಡುತ್ತಾರೆ. ಎಲ್ಲೆಲ್ಲಿ ದರ್ಗಾ, ಮಸೀದಿಗಳಿವೆಯೋ ಅಲ್ಲಲ್ಲಿ ಮಠ, ಮಂದಿರದ ಕುರುಹುಗಳು ಸಿಗುತ್ತವೆ. ಎಲ್ಲೆಲ್ಲಿ ಮಠ ಮಂಧಿರಗಳು ಇವೆಯೋ ಇಲ್ಲಿ ಸೂಫಿ ಕುರುಹುಗಳು ಸಿಗುತ್ತವೆ.
ಕಲಬುರಗಿ: ರಾಜ್ಯದ ಮಸೀದಿಗಳಲ್ಲಿ (Masjids) ದೇವಾಲಯಗಳ (Temples) ಕುರುಹುಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಹಿಂದೂಪರ ಸಂಘಟನೆಗಳ ಮುಖಂಡರು ಮಸೀದಿಗಳನ್ನು ಬಿಟ್ಟು ಕೊಡಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ, ವಕ್ಫ್ ಬೋರ್ಡ್ ಸಮಸ್ಯೆ ಬಗೆಹರಿಸಲು 30 ವರ್ಷ ಬೇಕು. ವಕ್ಫ್ ಆಸ್ತಿ ಕೈಬಿಟ್ಟು ಹೋಗಲು ಕಾನೂನಾತ್ಮಕ ಸಮಸ್ಯೆ ಕಾರಣವಾಗಿದೆ. 14,800 ಪೇಶ್ ಇಮಾಮ್ ಮತ್ತು ಮೌಜನ್ಸ್ಗಳಿಗೆ ಗೌರವಧನ ನೀಡಲಾಗುತ್ತಿದೆ. ವಕ್ಫ್ ವಶದಲ್ಲಿ ಏಳು ಸಾವಿರ ಮಸೀದಿಗಳಿವೆ. ಮುಸ್ಲಿಂ ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮುದಾಯದ ಶೇಕಡಾ 6ರಷ್ಟು ಜನರು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಭಾರತದ ಸಂಸ್ಕೃತಿ ಗೊತ್ತಿಲ್ಲದವರು ಆ ರೀತಿ ಮಾತನಾಡುತ್ತಾರೆ. ಎಲ್ಲೆಲ್ಲಿ ದರ್ಗಾ, ಮಸೀದಿಗಳಿವೆಯೋ ಅಲ್ಲಲ್ಲಿ ಮಠ, ಮಂದಿರದ ಕುರುಹುಗಳು ಸಿಗುತ್ತವೆ. ಎಲ್ಲೆಲ್ಲಿ ಮಠ ಮಂಧಿರಗಳು ಇವೆಯೋ ಇಲ್ಲಿ ಸೂಫಿ ಕುರುಹುಗಳು ಸಿಗುತ್ತವೆ. ಸೂಫಿ ಸಂತರು ಕೂಡಿ ಬಾಳಿ ಬದುಕಿದ ರಾಜ್ಯ ನಮ್ಮದು. ಇದು ಭಾರತ ದೇಶದ ಸೌಂದರ್ಯ ಮತ್ತು ಸಂಸ್ಕೃತಿ. ಇದನ್ನು ಮಟ್ಟಹಾಕುವ ಕೆಲಸವನ್ನು ಯಾವುದೇ ಧರ್ಮ, ಸಂಘಟನೆಗಳು ಮಾಡಬಾರದು. ಅದನ್ನು ರಾಜ್ಯದ ಕನ್ನಡಿಗರು ಸಹಿಸುವುದಿಲ್ಲ ಅಂತ ಮೌಲಾನಾ ಶಾಫಿ ಅಭಿಪ್ರಾಯಪಟ್ಟರು.