ಕನ್ನಡ ಸೀರಿಯಲ್ ಇಂಡಸ್ಟ್ರಿಯಲ್ಲಿ ಉತ್ತರ ಕರ್ನಾಟಕದ ಸೊಗಡಿನ ಧಾರಾವಾಹಿಗಳಲ್ಲಿ ಜನಪ್ರಿಯತೆ ಪಡೆದಿರೋದು ಗಿಣಿರಾಮ.
ಸಾಕಷ್ಟು ಜನಮನ್ನಣೆ ಪಡೆದಿರೋ ಈ ಧಾರಾವಾಹಿಗೆ ನಿಜಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ. ಅದರಲ್ಲೂ ಕಳೆದ ಎರಡು ವಾರಗಳ ಹಿಂದಿನ ಹೃಷಿಕೇಶ ಎಪಿಸೋಡ್ಗಳಿಗೆ ಜನರು ಫಿದಾ ಆಗಿದ್ದು ಸುಳ್ಳಲ್ಲ. ಅದ್ರಲ್ಲೂ ಅಂಡರ್ವಾಟರ್ ಸೀನ್ ಮೂಲಕ ಧಾರಾವಾಹಿ ತಂಡ ಪ್ರಯೋಗ ಕೂಡ ಮಾಡಿತ್ತು.
ಇಷ್ಟೆಲ್ಲಾ ಹೆಸರು ಮಾಡಿರೋ ಗಿಣಿರಾಮ ಧಾರಾವಾಹಿಯ ಬಗ್ಗೆ ಕೆಲ ದಿನಗಳಿಂದ ಗಾಳಿ ಸುದ್ದಿಯೊಂದು ಹರದಾಡ್ತಿದೆ. ಅದೇನಂದ್ರೆ, ಸದ್ಯದ ಸ್ಥಿತಿಯಲ್ಲಿ ವೈಂಡಪ್ ಆಗ್ತಿರೋ ಸೀರಿಯಲ್ಗಳ ಪೈಕಿ ಗಿಣಿರಾಮನೂ ಒಂದು ಅನ್ನೋ ಸುದ್ದಿ ತೇಲಾಡ್ತಿತ್ತು. ಹಾಗಾದ್ರೆ, ನಿಜಕ್ಕೂ ಗಿಣಿರಾಮ ಸೀರಿಯಲ್ ವೈಂಡಪ್ ಆಗ್ತಿದೆಯಾ..?
ಇದಕ್ಕೆ ಸ್ಪಷ್ಟವಾದ ಉತ್ತರ ನೋ.. ಹೌದು, ಗಿಣಿರಾಮ ಸೀರಿಯಲ್ ವೈಂಡಪ್ ಆಗ್ತಿಲ್ಲ ಅಂತಾ ತಂಡವೇ ಸ್ಪಷ್ಟಪಡಿಸಿದೆ. ಅದರಲ್ಲೂ ಗಿಣಿರಾಮ ಸೀರಿಯಲ್ ನಾಯಕ ನಟ ಶಿವರಾಮ ಅಲಿಯಾಸ್ ರಿತ್ವಿಕ್ ಈ ಬಗ್ಗೆ ನಮ್ಮ ಜೊತೆ ಮಾತಾಡಿ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಯಾವುದೇ ಕಾರಣಕ್ಕೂ ಗಿಣಿರಾಮ ಸಿರಿಯಲ್ ವೈಂಡಪ್ ಆಗುತ್ತಿಲ್ಲ ಎಂದಿದ್ದಾರೆ.
ಇಂತಹ ಗಾಳಿ ಸುದ್ದಿಗಳನ್ನ ಗಂಭೀರವಾಗಿ ಪರಿಗಣಿಸ್ಬೇಡಿ ಎಂದು ನಟ ರಿತ್ವಿಕ್ ಹೇಳಿದ್ದಾರೆ. ಜೊತೆಗೆ ಧಾರಾವಾಹಿ ತಂಡವೂ ಇನ್ಮುಂದೆ ಹೊಸ ಹೊಸ ಟ್ವಿಸ್ಟ್ಗಳೊಂದಿಗೆ ಗಿಣಿರಾಮ ಧಾರಾವಾಹಿ ಮೂಡಿ ಬರಲಿದೆ ಅನ್ನೋ ಭರವಸೆಯನ್ನೂ ನೀಡಿದೆ. ಹೀಗಾಗಿ, ಗಿಣಿರಾಮ ಸೀರಿಯಲ್ ವೀಕ್ಷಕರು ನಿಶ್ಚಿಂತೆಯಿಂದ ಇರಬಹುದು.