ನವದೆಹಲಿ: 78ನೇ ಮನ್​ ಕೀ ಬಾತ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.. ಕೋವಿಡ್​ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ. ಕೊರೊನಾ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಒಂದೇ ದಿನದಲ್ಲಿ ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ ಅಂತಾ ಆರೋಗ್ಯಾಧಿಕಾರಿಗಳ ಕಾರ್ಯವನ್ನ ಶ್ಲಾಘಿಸಿದರು.

ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ನೀಡ್ತಿದೆ. ಜೂನ್​ 21ರಿಂದ ಲಸಿಕೆ ಆಭಿಯಾನ ಆರಂಭವಾಗಿದೆ. ಕೊರೊನಾ ಲಸಿಕೆಯ ಎರಡು ಡೋಸ್​ ಪಡೆಯಿರಿ. ನಾನು ಸಹ ಎರಡು ಡೋಸ್ ಲಸಿಕೆ​ ಪಡೆದಿದ್ದೇನೆ. ಕೊರೊನಾ ಲಸಿಕೆ ಪಡೆಯದಿದ್ರೆ ಜೀವಕ್ಕೆ ಆಪತ್ತು. ದೇಶದ ಜನರ ಸುರಕ್ಷತೆಯೇ ನಮ್ಮ ಗುರಿ ಎಂದರು.

ಲಸಿಕೆ ಕುರಿತ ವದಂತಿಗಳ ಬಗ್ಗೆ ಕೇಳಿಸಿಕೊಳ್ಳಬೇಡಿ. ವಿಜ್ಞಾನ ಹಾಗೂ ನಮ್ಮ ವಿಜ್ಞಾನಿಗಳ ಮೇಲೆ ನಂಬಿಕೆ ಇಡಿ. ನೂರು ವರ್ಷದ ಆಸುಪಾಸಿನ ನನ್ನ ಅಮ್ಮ ಕೂಡ ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾಳೆ. ಕೊರೊನಾ ವಿರುದ್ಧ ಹೋರಾಡಲು ನಾವೆಲ್ಲರೂ ಒಂದಾಗೋಣ ಅಂತಾ ಹೇಳಿದರು.

ಇದೇ ವೇಳೆ ಇತ್ತೀಚೆಗೆ ನಿಧನರಾದ ಪ್ಲೇಯಿಂಗ್ ಸಿಖ್ ಮಿಲ್ಖಾ ಸಿಂಗ್​​ ಅವರನ್ನ ಸ್ಮರಿಸಿದ ಪ್ರಧಾನಿ, ಮಿಲ್ಖಾ ಸಿಂಗ್​ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದರು. ‘ಒಲಂಪಿಕ್ಸ್​ನಲ್ಲಿ ಭಾಗವಹಿಸುವವರಿಗೆ ಪ್ರೋತ್ಸಾಹಿಸಿ’. 2021-ಟೋಕಿಯೋ ಒಲಂಪಿಕ್ಸ್​ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

The post ವದಂತಿಗೆ ಕಿವಿಗೊಡಬೇಡಿ, ನಮ್ಮ ವಿಜ್ಞಾನಿಗಳ ಮೇಲೆ ನಂಬಿಕೆ ಇಡಿ -ಮನ್​​ ಕಿ ಬಾತ್​​ನಲ್ಲಿ ಮೋದಿ ಕರೆ appeared first on News First Kannada.

Source: newsfirstlive.com

Source link