ವಮಿಕಾಗೆ ಮೊದಲ ಬರ್ತ್​​ಡೇ; ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ ವಿರುಷ್ಕಾ..!


ಬಾಲಿವುಡ್​ ನಟಿ ಅನುಷ್ಕಾ ಶರ್ಮಾ, ಕ್ರಿಕೆಟಿಗ ವಿರಾಟ್​ ಕೊಹ್ಲಿ ಪುತ್ರಿ ವಮಿಕಾಗೆ ಒಂದು ವರ್ಷ ತುಂಬಿದ್ದ ಹಿನ್ನೆಲೆಯಲ್ಲಿ ದಂಪತಿ ಮಗಳ ಹುಟ್ಟುಹಬ್ಬವನ್ನು ದಕ್ಷಿಣ ಆಫ್ರಿಕಾದಲ್ಲಿ ಅದ್ಧೂರಿಯಾಗಿ ಆಚರಿಸಿದೆ. ವಮಿಕಾಗೆ ಒಂದು ವರ್ಷ ತುಂಬಿದರೂ ಸಹ ವಿರಾಟ್​, ಅನುಷ್ಕಾ ಮಗಳ ಮುಖವನ್ನು ಇನ್ನೂ ಸಂಪೂರ್ಣವಾಗಿ ರಿವೀಲ್​ ಮಾಡಿಲ್ಲ. ಸದ್ಯಕ್ಕೆ ಜಗತ್ತಿಗೆ ತಮ್ಮ ಮಗಳ ಮುಖವನ್ನು ಪರಿಚಯಿಸದಿರುವಂತೆ ವಿರಾಟ್​, ಅನುಷ್ಕಾ ಆಲೋಚಿಸಿದ್ದಂತಿದೆ.

ವಮಿಕಾ ಬರ್ತ್​ಡೇ ಪಾರ್ಟಿಯ ಫೋಟೋಗಳನ್ನು ಅನುಷ್ಕಾ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಸ್​ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇಲ್ಲಿಯೂ ಅವರು ವಮಿಕಾರ ಸಂಪೂರ್ಣ ಮುಖವನ್ನು ತೋರಿಸಿಲ್ಲ. ವಮಿಕಾ ಅವರನ್ನು ಎತ್ತಿಕೊಂಡಿರುವ ಫೋಟೋವನ್ನು ಅನುಷ್ಕಾ ಶೇರ್​ ಮಾಡಿದ್ದಾರೆ.

 

ಅಮ್ಮ ಮಗಳು ಇಬ್ಬರು ಕೂಡ ಬಿಳಿ ಬಣ್ಣದ ಫ್ರಾಕ್​ ಧರಿಸಿರೋದು ಕಂಡುಬಂದಿದೆ. ವಮಿಕಾ ಬರ್ತ್​ಡೇ ಪಾರ್ಟಿಯಲ್ಲಿ ಕ್ರಿಕೆಟ್​ ಆಟಗಾರ ವೃದ್ಧಿಮಾನ್ ಶಾ ಹಾಗೂ ಅವರ ಪತ್ನಿ ಮಕ್ಕಳು ಕೂಡ ಹಾಜರಿದ್ದರು. ಸದ್ಯ ವಮಿಕಾ ಬರ್ತ್​ಡೇ ಪಾರ್ಟಿ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ ಆಗುತ್ತಿದೆ.

News First Live Kannada


Leave a Reply

Your email address will not be published. Required fields are marked *