‘ವಯಸ್ಸು ಕೇವಲ ಸಂಖ್ಯೆ, ಪ್ರೀತಿಗೆ ಅಲ್ಲ’ ಎಂದು ಮದ್ವೆನೂ ಆದ 78 ವರ್ಷದ ವೃದ್ಧ ಜೋಡಿ

ವಯಸ್ಸು ಕೇವಲ ಒಂದು ಸಂಖ್ಯೆ ಮಾತ್ರ, ನಿಜವಾದ ಪ್ರೀತಿಗೆ ಯಾವುದೇ ಮಿತಿ ಇರುವುದಿಲ್ಲ ಎನ್ನುವುದಕ್ಕೆ ವೃದ್ಧ ಜೋಡಿಯೊಂದು ಸಾಕ್ಷಿಯಾಗಿದೆ. ಆನ್​ಲೈನ್​ ಡೇಟಿಂಗ್​ ಆ್ಯಪ್​ನಲ್ಲಿ ಶುರವಾದ ವೃದ್ಧರ ಪ್ರೇಮ ಕಹಾನಿ ವಿವಾಹಕ್ಕೆ ತಿರುಗಿದೆ.

ಜಿಮ್​ ಆಡಮ್ಸ್ ಮತ್ತು ಆಡ್ರೆ ಕೌಟ್ಸ್ ಆನ್‌ಲೈನ್‌ನಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ಭೇಟಿ ಆಗಿದ್ರು. ಭೇಟಿಯಾದ 8 ತಿಂಗಳ ನಂತರ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಅಬ್ಬರದಲ್ಲಿ ಆನ್‌ಲೈನ್‌ನಲ್ಲಿ ಪರಿಚಯವಾದ ಇಬ್ಬರ ಪ್ರೇಮ.. ದಿನಗಳೆದಂತೆ ಹೆಚ್ಚಾಗಿತ್ತು, ಲಾಕ್‌ಡೌನ್‌ ಸಡಿಲಿಕೆಯಾಗಿದ್ದೇ ತಡ ವಿವಾಹವಾಗಿದ್ದಾರೆ.

ವರದಿಗಳ ಪ್ರಕಾರ 78 ವರ್ಷದ ಜಿಮ್​ ಆಡಮ್ಸ್ ನಿವೃತ್ತ ಪ್ರಾಧ್ಯಪಕರಾಗಿದ್ದು, ತಮ್ಮ 38 ವರ್ಷಗಳ ದಾಂಪತ್ಯದ ಬಳಿಕ ಅಂದ್ರೆ 2017 ರಲ್ಲಿ ತಮ್ಮ ಪತ್ನಿಯನ್ನ ಕಳೆದುಕೊಂಡಿದ್ದರು. ಕೊರೊನಾ ಸಂದರ್ಭದಲ್ಲಿ ಆಡಮ್ಸ್​ ಅವರು ಆನ್​​ಲೈನ್ ಡೇಟಿಂಗ್ ಆ್ಯಪ್​ನಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಗಾಗಿ ಹುಡುಕಾಟ ನಡೆಸಿದ್ದರು. ಅದರಂತೆ 79 ವರ್ಷದ ನಿವೃತ್ತ ಎಲ್​ಐಸಿ ಬ್ರೋಕರ್ ಆಡ್ರೆ ಅವರನ್ನು ಭೇಟಿಯಾದರು. ಆಡ್ರೆ ಅವರೂ ಕೂಡ ಈ ಹಿಂದೆ ವಿವಾಹ ಆಗಿದ್ದರ. ಸುಮಾರು 33 ವರ್ಷಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದರು ಎನ್ನಲಾಗಿದೆ.

News First Live Kannada

Leave a comment

Your email address will not be published. Required fields are marked *