ವರಮಹಾಲಕ್ಷ್ಮಿ ಹಬ್ಬಕ್ಕೆ ನವರಸಗಳ ರಸದೌತಣ ಬಡಿಸ್ತಾರೆ ಜಗ್ಗೇಶ್​; ಆ.5ಕ್ಕೆ ‘ರಾಘವೇಂದ್ರ ಸ್ಟೋರ್ಸ್​’ ಶುರು | Hombale Films announces release date of Jaggesh starrer Raghavendra Stores


ವರಮಹಾಲಕ್ಷ್ಮಿ ಹಬ್ಬಕ್ಕೆ ನವರಸಗಳ ರಸದೌತಣ ಬಡಿಸ್ತಾರೆ ಜಗ್ಗೇಶ್​; ಆ.5ಕ್ಕೆ ‘ರಾಘವೇಂದ್ರ ಸ್ಟೋರ್ಸ್​’ ಶುರು

ರಾಘವೇಂದ್ರ ಸ್ಟೋರ್ಸ್ ಪೋಸ್ಟರ್​

Raghavendra Stores Release Date: ಸಣ್ಣ ಟೀಸರ್​ ಮೂಲಕ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿ ಮಾಡಿರುವ ‘ರಾಘವೇಂದ್ರ ಸ್ಟೋರ್ಸ್​’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಸುದ್ದಿ ಕೇಳಿ ಜಗ್ಗೇಶ್​ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.

ನಟ ಜಗ್ಗೇಶ್​ (Jaggesh) ಅಭಿಮಾನಿಗಳಿಗೆ ಬ್ಯಾಕ್​ ಟು ಬ್ಯಾಕ್​ ಖುಷಿಯ ಸುದ್ದಿಗಳು ಕೇಳಿಬರುತ್ತಿವೆ. ಬಿಜೆಪಿಯಿಂದ ರಾಜ್ಯ ಸಭಾ ಅಭ್ಯರ್ಥಿಯಾಗಿ ಅವರಿಗೆ ಟಿಕೆಟ್​ ಸಿಕ್ಕಿದೆ. ಆ ಖುಷಿಯನ್ನು ಸಂಭ್ರಮಿಸುತ್ತಿರುವಾಗಲೇ ಹೊಸದೊಂದು ನ್ಯೂಸ್​ ಹೊರಬಿದ್ದೆ. ಜಗ್ಗೇಶ್​ ನಟಿಸಿರುವ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದ ಬಿಡುಗಡೆ ದಿನಾಂಕ (Raghavendra Stores Release Date) ಘೋಷಣೆ ಆಗಿದೆ. ಆಗಸ್ಟ್​ 5ರಂದು ಈ ಚಿತ್ರ ರಿಲೀಸ್​ ಆಗಲಿದೆ. ಆ ಕುರಿತು ‘ಹೊಂಬಾಳೆ ಫಿಲ್ಮ್ಸ್​’ ಕಡೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಹಲವು ಕಾರಣಗಳಿಂದಾಗಿ ಗಮನ ಸೆಳೆಯುತ್ತಿರುವ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ (Raghavendra Stores Movie) ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವರಮಹಾ ಲಕ್ಷ್ಮೀ ಹಬ್ಬದ ಪ್ರಯುಕ್ತ ಈ ಚಿತ್ರ ರಿಲೀಸ್​ ಆಗಲಿರುವುದು ಇನ್ನೊಂದು ವಿಶೇಷ.

ಕೆಲವೇ ದಿನಗಳ ಹಿಂದೆ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದ ಟೀಸರ್​ ರಿಲೀಸ್​ ಆಗಿ ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಅದರಲ್ಲಿ ಜಗ್ಗೇಶ್​ ಅವರ ಮ್ಯಾನರಿಸಂ ನೋಡಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಪೂರ್ತಿ ಸಿನಿಮಾ ನೋಡಲು ಸಿನಿಪ್ರಿಯರು ಕಾದಿದ್ದಾರೆ. ಚಿತ್ರಮಂದಿರದಲ್ಲಿ ಭರಪೂರ ನಗುವಿನ ಕಚಗುಳಿ ಇಡಲು ಈ ಚಿತ್ರ ಸಿದ್ಧವಾಗಿದೆ. ಅಜನೀಶ್​ ಬಿ. ಲೋಕನಾಥ್​ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ರೀತಿಯ ಹೈ ಬಜೆಟ್​ ಸಿನಿಮಾ ನಿರ್ಮಾಣ ಮಾಡಿರುವ ‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ನಿಂದ ಬರುತ್ತಿರುವ ಡಿಫರೆಂಟ್​ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್​’. ಅದೇ ರೀತಿ ನಿರ್ದೇಶಕ ಸಂತೋಷ್​ ಆನಂದ್​ ರಾವ್​ ಅವರಿಗೂ ಇದು ಭಿನ್ನ ಪ್ರಯತ್ನ. ಈವರೆಗೂ ಮಾಸ್​ ಫ್ಯಾಮಿಲಿ ಎಂಟರ್​ಟೇನರ್​ ಸಿನಿಮಾ ಮಾಡಿ ಸೈ ಎನಿಸಿಕೊಂಡ ಅವರು ಈ ಬಾರಿ ಕಾಮಿಡಿ ಪ್ರಯತ್ನಿಸಿದ್ದಾರೆ. ಇವರೆಲ್ಲರ ಕಾಂಬಿನೇಷನ್​ನಲ್ಲಿ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯುವ ಕೌತುಕ ದಿನದಿನಕ್ಕೂ ಹೆಚ್ಚುತ್ತಿದೆ.

‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ ಮೂಲಕ ಅನೇಕ ಚಿತ್ರಗಳು ನಿರ್ಮಾಣ ಆಗುತ್ತಿವೆ. ಇತ್ತೀಚೆಗಷ್ಟೇ ‘ಬಘೀರ’ ಸಿನಿಮಾದ ಮುಹೂರ್ತ ನೆರವೇರಿಸಲಾಗಿದೆ. ಪ್ರಭಾಸ್​ ನಟಿಸುತ್ತಿರುವ ‘ಸಲಾರ್​’ ಸಿನಿಮಾದ ಕೆಲಸಗಳು ಕೂಡ ಭರದಿಂದ ಸಾಗಿವೆ. ರಿಷಬ್​ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರ ಕೂಡ ಕುತೂಹಲ ಮೂಡಿಸಿದೆ. ಹೀಗೆ ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳನ್ನು ಮಾಡುತ್ತಿರುವ ಈ ಪ್ರತಿಷ್ಠಿತ ಸಂಸ್ಥೆಯಿಂದ ‘ರಾಘವೇಂದ್ರ ಸ್ಟೋರ್ಸ್’ ಚಿತ್ರ ಮೂಡಿಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *