ವರುಣನ ಅವಾಂತರದ ಮಧ್ಯೆ ಮೀನನ್ನು ನುಂಗಿನೀರು ಕುಡಿದ ಹಾವು | Snake eating fish unique incident happened in bengaluru


ಬೆಂಗಳೂರು: ಅಕಾಲಿಕ ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಮಂದಿ ಬೆಚ್ಚಿದ್ದಾರೆ. ಬೆಂಗಳೂರಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿವೆ. ಈ ನಡುವೆ ಇನ್ನೂ 2 ದಿನ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಧಾರಾಕಾರ ಮಳೆಗೆ ರಸ್ತೆಗಳೇ ಕೆರೆಗಳಂತಾಗಿವೆ. ಹುಳ, ಹಪಟೆಗಳು ಮನೆ ಹೊಕ್ಕಿವೆ. ಅಂತೆಯೇ ಭಾರೀ ಮಳೆಗೆ ಸಿಂಗಾಪುರ ಕೆರೆ ಕೋಡಿ ಒಡೆದ ಪರಿಣಾಮ ಸಮೀಪದ ಲೇಔಟ್​ಗೆ ನೀರು ಸತತವಾಗಿ ನುಗ್ಗುತ್ತಿದೆ. ಈ ಅವಾಂತರದ ಮಧ್ಯೆ ಮೀನನ್ನು ಹಾವೊಂದು ನುಂಗಿದೆ. ಸದ್ಯ ಮೀನು ನುಂಗುತ್ತಿರುವ ದೃಶ್ಯ ನೋಡಿ ಸ್ಥಳೀಯ ನಿವಾಸಿಗಳು ಹೌಹಾರಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ:

TV9 Kannada


Leave a Reply

Your email address will not be published. Required fields are marked *