ವರುಣಾರ್ಭಟ; ಕೋಳಿ ಫಾರಂಗೆ ನುಗ್ಗಿದ ನೀರು..ಪ್ರಾಣಬಿಟ್ಟ ಸಾವಿರಾರು ಕೋಳಿಗಳು


ರಾಮನಗರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕೋಳಿ ಫಾರಂಗೆ ನೀರು ನುಗ್ಗಿ ಸಾವಿರಾರು ಕೋಳಿ ಮರಿಗಳು ಸಾವನ್ನಪ್ಪಿದ ಘಟನೆ ಬಿಡದಿಯ ಹೆಗ್ಗಡಗೆರೆ ಗ್ರಾಮದಲ್ಲಿ ಸಂಭವಿಸಿದೆ.

ಹೆಗ್ಗಡಗೆರೆ ಗ್ರಾಮದ ರೈತ ಮಹಿಳೆ ಶೋಭಾ ಆವರಿಗೆ ಸೇರಿದ ಕೋಳಿ ಫಾರಂನಲ್ಲಿ ಈ ಘಟನೆ ಸಂಭವಿಸಿದ್ದು 15 ದಿನದ ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ. ಜೊತೆಗೆ 40 ಸಾವಿರಕ್ಕೂ ಅಧಿಕ ಮೌಲ್ಯದ ಕೋಳಿ ಆಹಾರ ನಾಶಗೊಂಡಿದ್ದು ಪರಿಹಾರ ನೀಡುವಂತೆ ರೈತ ಮಹಿಳೆ ಪಶು ಇಲಾಖೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಒಂದೂವರೆ ಟನ್​ ಕೋಳಿಗಳು ತುಂಬಿದ್ದ ಕ್ಯಾಂಟರ್​ ಪಲ್ಟಿ; ಎಲ್ಲವೂ ಸಾವು

News First Live Kannada


Leave a Reply

Your email address will not be published. Required fields are marked *