ವರುಧಿನಿಗೆ ಮಾತಲ್ಲೇ ಎಚ್ಚರಿಕೆ ಕೊಟ್ಟ ಹರ್ಷ; ಸೈಲೆಂಟ್ ಆಗೋ ನಿರ್ಧಾರಕ್ಕೆ ಬಂದ ವರುಧಿನಿ? – Kannadathi Serial Harsha Warns Varudhini over Love Matter Sara Annaiah News


ಹರ್ಷನನ್ನು ವರುಧಿನಿ ಮೊದಲಿನಿಂದಲೂ ಪ್ರೀತಿಸುತ್ತಿದ್ದಾಳೆ. ಆದರೆ, ಆಕೆಯ ಬಗ್ಗೆ ಹರ್ಷನಿಗೆ ಯಾವುದೇ ಪ್ರೀತಿ ಇಲ್ಲ. ಇದನ್ನು ಆತ ಎಷ್ಟೋಬಾರಿ ಹೇಳಿದ್ದಾನೆ. ಆದರೂ ಇದನ್ನು ಆಕೆ ಗಂಭೀರವಾಗಿ ಪರಿಗಣಿಸಿಲ್ಲ.

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ಶೈಲಿ: ಫ್ಯಾಮಿಲಿ ಡ್ರಾಮಾ. ರತ್ನಮಾಲಾ ಮಾಲಾ ಸಂಸ್ಥೆಯ ಒಡತಿ. ಆಕೆಯ ಆಸ್ತಿ ಹೊಡೆಯಬೇಕು ಎಂದು ಹಿರಿ ಸೊಸೆ ಸಾನಿಯಾ ಕಣ್ಣು ಹಾಕಿದ್ದಾಳೆ. ಆದರೆ, ಈ ಆಸ್ತಿಯನ್ನು ಆಕೆ ಬರೆದಿದ್ದು ಭುವಿಗೆ. ಮಗ ಹರ್ಷ ಹಾಗೂ ಸೊಸೆ ಎಂದರೆ ರತ್ನಮಾಲಾಗೆ ಅಚ್ಚುಮೆಚ್ಚು.

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?
ತಾನೇ ಎಲ್ಲಾ ಎಂದು ಮೆರೆಯುತ್ತಿದ್ದ ಸಾನಿಯಾಳ ಎಂ.ಡಿ. ಪಟ್ಟ ಹೊರಟೇ ಹೋಗಿದೆ. ಸಾನಿಯಾಳನ್ನು ಎಂಡಿ ಪಟ್ಟದಿಂದ ಹರ್ಷ ತೆಗೆದಿದ್ದಾನೆ. ಮತ್ತೊಂದೆಡೆ ಹರ್ಷ ಹಾಗೂ ಭುವಿಗೆ ಡಿವೋರ್ಸ್ ಕೊಡಿಸಬೇಕು ಎಂದು ವರುಧಿನಿ ಪ್ಲ್ಯಾನ್ ಮಾಡಿಕೊಂಡಿದ್ದಳು.

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇವರ ಸಂಸಾರಕ್ಕೆ ಹುಳಿ ಹಿಂಡಬೇಕು ಎಂದು ಅನೇಕರು ಕಾದು ಕೂತಿದ್ದಾರೆ. ಅದರಲ್ಲೂ ವರುಧಿನಿ ಈ ಬಗ್ಗೆ ಹೆಚ್ಚು ಆಲೋಚಿಸುತ್ತಿದ್ದಾಳೆ. ಆಕೆ ನಡೆದುಕೊಳ್ಳುವ ರೀತಿಯ ಬಗ್ಗೆ ಹರ್ಷನಿಗೆ ಮೊದಲಿನಿಂದಲೂ ಅನುಮಾನ ಇದೆ. ಈ ಕಾರಣಕ್ಕೆ ವರುಧಿನಿಗೆ ಮಾತಿನಲ್ಲೇ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಆಕೆಗೆ ಭಯವಾಗಿದೆ. ಹೀಗಾಗಿ ತಾನು ಮಾಡಬೇಕು ಎಂದುಕೊಂಡಿದ್ದ ಸಂಚಿನಿಂದ ಆಕೆ ಹಿಂದೆ ಸರಿಯಬಹುದು. ಹಾಗಾದಲ್ಲಿ  ತನ್ನ ಕೈಯ್ಯಾರೆ ಹರ್ಷ ಹಾಗೂ ಭುವಿಯ ಮದುವೆ ನೋಂದಣಿ ಮಾಡಿಸಿದಂತೆ ಆಗುತ್ತದೆ.

ಹರ್ಷನನ್ನು ವರುಧಿನಿ ಮೊದಲಿನಿಂದಲೂ ಪ್ರೀತಿಸುತ್ತಿದ್ದಾಳೆ. ಆದರೆ, ಆಕೆಯ ಬಗ್ಗೆ ಹರ್ಷನಿಗೆ ಯಾವುದೇ ಪ್ರೀತಿ ಇಲ್ಲ. ಇದನ್ನು ಆತ ಎಷ್ಟೋಬಾರಿ ಹೇಳಿದ್ದಾನೆ. ಆದರೂ ಇದನ್ನು ಆಕೆ ಗಂಭೀರವಾಗಿ ಪರಿಗಣಿಸಿಲ್ಲ. ಬದಲಿಗೆ ಆತನ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಲೇ ಇದ್ದಳು. ಇದು ಹರ್ಷನಿಗೆ ಬೇಸರ ಮೂಡಿಸಿತ್ತು. ಹೀಗಾಗಿ ಈ ವಿಚಾರದಲ್ಲಿ ವರುಗೆ ನೇರವಾಗಿ ಬೈದಿದ್ದಾನೆ. ಆದರೆ, ಈ ವಿಚಾರದಲ್ಲಿ ಆಕೆ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಬದಲಿಗೆ ಹರ್ಷನನ್ನು ಪಡೆಯಲೇಬೇಕು ಎಂಬ ಹಠ ಹೆಚ್ಚುತ್ತಿದೆ. ಇದಕ್ಕಾಗಿ ಆಕೆ ಪ್ಲ್ಯಾನ್ ಒಂದನ್ನು ಮಾಡಿದ್ದಳು.

ಹರ್ಷ ಹಾಗೂ ಭುವಿಯ ಮದುವೆ ನೋಂದಣಿ ಪ್ರಕ್ರಿಯೆಯನ್ನು ವರುಧಿನಿ ಮಾಡುತ್ತಿದ್ದಾಳೆ. ಈ ಪತ್ರಗಳ ಮಧ್ಯೆ ಡಿವೋರ್ಸ್ ಲೆಟರ್ ಇಟ್ಟು ಅದಕ್ಕೆ ಸಹಿ ಹಾಕಿಸಬೇಕು ಎಂಬುದು ವರುಧಿನಿಯ ಪ್ಲ್ಯಾನ್ ಆಗಿತ್ತು. ಆದರೆ, ಅವಳಿಗೆ ಸಿಕ್ಕಾಪಟ್ಟೆ ಭಯ ಕಾಡುತ್ತಿದೆ. ಈ ಭಯದಿಂದಲೇ ಹರ್ಷನ ಎದುರು ಬಂದಿದ್ದಾಳೆ. ಹರ್ಷ ಏನಂದುಕೊಳ್ಳುತ್ತಾನೋ ಎಂದುಕೊಳ್ಳುತ್ತಲೇ ವರುಧಿನಿ ಯೋಚನೆ ಮಾಡುತ್ತಾ ನಿಂತಿದ್ದಳು. ಆಗ ವರುಧಿನಿಗೆ ಹರ್ಷ ಒಂದು ಎಚ್ಚರಿಕೆ ನೀಡಿದ್ದಾನೆ.

‘ನಾನು ಆಗ ಮಾತನಾಡಿಸುವಾಗ ನೀವು ನಿಮ್ಮದೇ ಲೋಕದಲ್ಲಿ ಇದ್ದಿರಿ. ಅದು ತಪ್ಪು. ನೀವು ನನ್ನನ್ನ ಪೂರ್ತಿಯಾಗಿ ಮರೆತಿದ್ದೀರೋ ಅದು ನನಗೆ ಗೊತ್ತಿಲ್ಲ. ಆದರೆ, ನನ್ನ ಹಾಗೂ ನಿಮ್ಮ ಮಧ್ಯೆ ಈಗ ಏನೂ ಇಲ್ಲ. ಹಾಗಂತ ಮೊದಲು ಇತ್ತು ಎಂದರ್ಥವಲ್ಲ. ಮೊದಲು ಫ್ರೆಂಡ್​ಶಿಪ್​ ಇತ್ತು. ಆದರೆ, ಈಗ ಆ ಆಪ್ತತೆ ಕಡಿಮೆ ಆಗಿದೆ. ಭುವಿ ನಾನು ಗಂಡ ಹೆಂಡತಿ ಆಗಿದ್ದೀವಿ’ ಎಂದು ಮಾತಿನಲ್ಲೇ ಹೇಳಿದ್ದಾನೆ. ಅಷ್ಟೇ ಅಲ್ಲ ನಮ್ಮ ಸುದ್ದಿಗೆ ಬರದೆ ಇರುವಂತೆ ಎಚ್ಚರಿಕೆ ನೀಡಿದ್ದಾನೆ.

ಇದರಿಂದ ವರುಧಿನಿಗೆ ಶಾಕ್ ಆಗಿದೆ. ಹರ್ಷನ ಕಂಡರೆ ಆಕೆಗೆ ಭಯ ಇದೆ. ಒಂದೊಮ್ಮೆ ಅದನ್ನೂ ಮೀರಿ ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸಲು ಪ್ರಯತ್ನಿಸಿ ಅದು ಉಲ್ಟಾ ಹೊಡೆದರೆ ಎಂಬ ಆತಂಕ ಆಕೆಯನ್ನು ಕಾಡುತ್ತಿದೆ. ಈ ಕಾರಣಕ್ಕೆ ಆಕೆಯೇ ಮುಂದಾಗಿ ನೋಂದಣಿಕಾರ್ಯ ಮಾಡಿಸಬೇಕಾಗಿ ಬರಬಹುದು. ಹಾಗಾದಲ್ಲಿ ಆಕೆಗೆ ತೀವ್ರ ಮುಖಭಂಗ ಆಗಲಿದೆ.

TV9 Kannada


Leave a Reply

Your email address will not be published.