ಶಿವಮೊಗ್ಗ: ಈಗ ಏನಿದ್ದರೂ ಬೆರಳ ತುದಿಯಲ್ಲೇ ಕೆಲ್ಸ ಆಗುತ್ತೆ. ಅಲ್ವಾ, 4ಜಿ, 5ಜಿ ಯುಗ ಈಗ. ಕಣ್ ರೆಪ್ಪೆ ಮಿಟುಕಿಸುವಷ್ಟರಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಪಡೆಯುವಂತ ಕಾಲ ಇದು. ಆದರೆ ಜಿಲ್ಲೆಯ ಹಲವು ಭಾಗಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇನ್ನೂ ನೀಗಿಲ್ಲ. ಅದೇನೋ ಹೇಳ್ತಾರಲ್ಲ, ಹಿಮಾಲಯದಲ್ಲೂ ಇದ್ರೂ ನೆಟ್​ವರ್ಕ್ ಸಿಗುತ್ತೆ ಅಂತ, ಆದ್ರೆ ನೋಡಿ, ಹಳ್ಳಿಗಳಲ್ಲೇ ಇನ್ನೂ ಈ ನೆಟ್​ವರ್ಕ್​ ಸಮಸ್ಯೆ ಇನ್ನೂ ಈಡೇರಿಲ್ಲ.​ ಅದರಲ್ಲೂ ಈಗ ಲಾಕ್ ಡೌನ್ ಬೇರೆ, ಸುಮಾರ್​ ಒಂದ್​ ವರ್ಷದಿಂದ ಅದೆಷ್ಟೋ ಮಂದಿಗೆ ವರ್ಕ್​ಫ್ರಂ ಹೋಮ್ ಇದೆ. ಹೀಗಿರುವವರು, ಅಥವ ಆನ್​ಲೈನ್ ಕ್ಲಾಸ್ ಜಾಯಿನ್ ಆಗಬೇಕಿರುವವರಿಗೆ ಭಾರಿ ಸಮಸ್ಯೆ ಉಂಟಾಗುತ್ತಿದೆ.

ಹೌದೂ, ಡಿಜಿಟಿಲ್ ಇಂಡಿಯಾ ಕಾರ್ಯಕ್ರಮದ ಕುರಿತು ಸರ್ಕಾರಗಳು ದೊಡ್ಡ ಮಟ್ಟದ ಪ್ರಚಾರ ಮಾಡಿ, ಭರವಸೆ ಮೂಡಿಸುತ್ತಿವೆ. ಆದರೆ ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿಯ ಹಲವು ಪ್ರದೇಶಗಳಿಗೆ ಈಗಲೂ ಮೊಬೈಲ್ ನೆಟ್​ವರ್ಕ್ ಕೊಡಲು ಸಾಧ್ಯವಾಗಿಲ್ಲ. ಕಳೆದ ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯ ಕುಗ್ರಾಮಗಳಿಗೆ 4ಜಿ ಮೊಬೈಲ್ ನೆಟ್ವರ್ಕ್ ನೀಡಲು ಅಳವಡಿಸಿದ ಸಾಧನಗಳನ್ನು ಕೆಲವೇ ತಿಂಗಳಲ್ಲಿ ಕಿತ್ತುಕೊಂಡು ಹೋಗಲಾಯಿತು. ಇದಾದ ನಂತರ ಗ್ರಾಮೀಣ ಭಾಗದ ಜನರು ಸಂಪರ್ಕ ಸೌಲಭ್ಯದಿಂದ ವಂಚಿತರಾಗಬೇಕಿದೆ. ಹೀಗಾಗಿ, ಎಲ್ಲಿ  ಮೊಬೈಲ್ ಸಿಗ್ನಿಲ್ ಸಿಗುತ್ತೋ ಜನ ಅಲ್ಲಿ ಟೆಂಟ್ ಹಾಕಿಕೊಂಡು ಕೆಲಸ, ಆನ್​ಲೈನ್​ ಕ್ಲಾಸ್​ನ್ನ ಮಾಡಿಕೊಳ್ತಿದ್ದಾರೆ

ಆನ್ ಲೈನ್ ಕ್ಲಾಸ್ಗೆ ಕಿ.ಮೀಗಟ್ಟಲೆ ನಡೆಯಬೇಕು

ಶಾಲೆ, ಕಾಲೇಜುಗಳು ಬಂದ್ ಆಗಿವೆ. ಎಲ್ಲೆಲ್ಲೂ ಆನ್ ಲೈನ್ ಕ್ಲಾಸ್ಗಳದ್ದೆ ಭರಾಟೆ. ಹಲಗೆರೆಯ ಸಂತೋಷ್, ಸಾಮಾನ್ಯ ದಿನಗಳಲ್ಲಿ ತಮ್ಮ ಮನೆಯಿಂದ ನೆಟ್​ವರ್ಕ್​ಗಾಗಿ, 12 ಕಿ.ಮೀ ಹೋಗಬೇಕಿತ್ತು. ಈಗ ಕಠಿಣ ಲಾಕ್ ಡೌನ್ ಇದೆ. ಪೊಲೀಸರು ಊರಾಚೆ ಹೋಗಲು ಬಿಡುತ್ತಿಲ್ಲ ಅಂತಾರೆ ಸ್ಥಳೀಯು

ಜಿಲ್ಲೆಯಲ್ಲಿ ಮೊಬೈಲ್ ನೆಟ್​ವರ್ಕ್ ಸಮಸ್ಯೆ ಕುರಿತು ಸಂಸದ ರಾಘವೇಂದ್ರ ಹಲವು ಭಾರಿ ಸಭೆ ನಡೆಸಿದ್ದರು. ಆದರೆ ಸಭೆಗಳು ಫಲ ಕೊಟ್ಟಂತೆ ಕಾಣುತ್ತಿಲ್ಲ. ಇನ್ನಾದ್ರೂ ಸರ್ಕಾರ, ಅಧಿಕಾರಿಗಳು, ಈ ಬಗ್ಗೆ ಗಮನಹರಿಸಬೇಕಾಗಿದೆ.

The post ವರ್ಕ್​ ಫ್ರಂ ಹೋಂ ಅಂತ ಊರಿಗೆ ಹೋದ್ರೆ ಅಲ್ಲಿ ನೆಟ್​ವರ್ಕ್​ ಪ್ರಾಂಬ್ಲಂ. ಡಿಜಿಟಲ್​ ಇಂಡಿಯಾ ಇನ್ನೂ ಆಗಿಲ್ವಾ? appeared first on News First Kannada.

Source: newsfirstlive.com

Source link