ಬೆಂಗಳೂರು: ಐಟಿ ಬಿಟಿ ಕಂಪನಿಗಳನ್ನು ತಕ್ಷಣವೇ ಓಪನ್ ಮಾಡುವಂತೆ ಹಾಗೂ ವರ್ಕ್ ಫ್ರಮ್ ಹೋಮ್ ಕ್ಯಾನ್ಸಲ್ ಮಾಡುವಂತೆ ಕರ್ನಾಟಕ ರಾಜ್ಯ ಟ್ರಾವೆಲ್ಸ್ ಆಪರೇಟರ್ ಸಂಘ ಮುಖ್ಯಮಂತ್ರಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್​ಗೆ ಮನವಿ ಮಾಡಿದ್ದಾರೆ.

ಅನ್ ಲಾಕ್ ಬಳಿಕ ರಾಜ್ಯ ಸರ್ಕಾರ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಕಾರ್ಯನಿರ್ವಹಿಸಲು ಸೂಚಿಸಿದೆ.. ಆದರೆ ಐಟಿ ಬಿಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟಿದೆ. ಇದರಿಂದ ಐಟಿ ಉದ್ಯೋಗದ ಮೇಲೆ ಅವಲಂಬಿತ ಚಿಕ್ಕ ಚಿಕ್ಕ ಉದ್ಯಮಗಳಿಗೆ ಹೊಡೆತ ಕೊಟ್ಟಿದೆ. ರಾಜ್ಯದಲ್ಲಿ ಸರಿಸುಮಾರು 20 ಲಕ್ಷ ಐಟಿ ಬಿಟಿ ಉದ್ಯೋಗಿಗಳು ಇದ್ದಾರೆ. ವರ್ಕ್ ಫ್ರಮ್ ಹೋಮ್​ನಿಂದ ಉದ್ಯೋಗಿಗಳಿಗೆ ಹೆಚ್ಚು ಲಾಭ ಇದೆ. ಆದರೆ ಇವರು ಕಚೇರಿಗಳಲ್ಲಿ ಕೆಲಸ ಮಾಡುವುದನ್ನ ನಂಬಿ 5 ಲಕ್ಷಕ್ಕೂ ಹೆಚ್ಚು ಸಣ್ಣ ಪುಟ್ಟ ಕಾರ್ಮಿಕರು ಇದ್ದಾರೆ. ಟ್ರಾವೆಲ್ ಕಂಪನಿಗಳು ಐಟಿ ಕಂಪನಿಗಳನ್ನ ನಂಬಿ ಲಕ್ಷಾಂತರ ಬಂಡವಾಳ ಹಾಕಿ ವಾಹನಗಳನ್ನ ಖರೀದಿ ಮಾಡಿದ್ದೇವೆ. ಇತ್ತ ವಾಹನಗಳು ತುಕ್ಕು ಹಿಡಿಯುತ್ತಿವೆ.. ಅತ್ತ ಚಾಲಕರು, ಮಾಲೀಕರು ಬೀದಿಗೆ ಬಂದಿದ್ದಾರೆ.

ನೆರೆಯ ರಾಜ್ಯ ತೆಲಂಗಾಣ ಕಚೇರಿಯಿಂದ ಕೆಲಸ ನಿರ್ವಹಿಸಲು ಸೂಚನೆ ಕೊಡಲು ಮುಂದಾಗಿದೆ. ನಮ್ಮ ರಾಜ್ಯದಲ್ಲಿಯೂ ಅನುಮತಿ ಕೊಡಿ.. ಮತ್ತೊಂದು ಕಡೆ ರಾಜ್ಯದ ಜನರ ಸಾವಿರಾರು ಕೋಟಿ ತೆರಿಗೆ ದುಡ್ಡಿನಲ್ಲಿ.. ಐಟಿ ಬಿಟಿ ಕಂಪನಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಒದಗಿಸಲಾಗಿದೆ. ಅವೆಲ್ಲವೂ ಸೂಕ್ತ ಬಳಕೆ ಇಲ್ಲದೆ ಹಾಳಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಆಪರೇಟರ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿಕೆ ನೀಡಿದ್ದಾರೆ.

The post ವರ್ಕ್ ಫ್ರಮ್ ಹೋಮ್ ಕ್ಯಾನ್ಸಲ್ ಮಾಡಿ.. IT&BT ಕಂಪೆನಿಗಳನ್ನ ತೆರೆಯಲು ಸಿಎಂಗೆ ಮನವಿ appeared first on News First Kannada.

Source: newsfirstlive.com

Source link