ವರ್ಗಾವಣೆ ಬಳಿಕ ಮೈಸೂರು ಲಾಕ್​ಡೌನ್ ವಿಸ್ತರಣೆ.. ಸಚಿವ ಸೋಮಶೇಖರ್​​ಗೆ ಟಾಂಗ್..?

ವರ್ಗಾವಣೆ ಬಳಿಕ ಮೈಸೂರು ಲಾಕ್​ಡೌನ್ ವಿಸ್ತರಣೆ.. ಸಚಿವ ಸೋಮಶೇಖರ್​​ಗೆ ಟಾಂಗ್..?

ಮೈಸೂರು: ತಮ್ಮ ವರ್ಗಾವಣೆ ಆದೇಶ ಹೊರಬಿದ್ದ ಬಳಿಕ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಸಂಪೂರ್ಣ ಲಾಕ್​ಡೌನ್ ವಿಸ್ತರಿಸಿ ಆದೇಶಿಸಿದ್ದಾರೆ. ಜೂ 7ರಿಂದ 14ರವರೆಗೆ ಕಂಪ್ಲೀಟ್‌ ಲಾಕ್‌ಡೌನ್‌‌ ವಿಸ್ತರಣೆ ಮಾಡಿದ್ದಾರೆ. ವಾರದಲ್ಲಿ ಮೂರು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಸಚಿವ ಎಸ್​​.ಟಿ ಸೋಮಶೇಖರ್, ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮುಂದುವರೆಯಲ್ಲ. ಜೂ 7ಕ್ಕೆ ಲಾಕ್​ಡೌನ್ ಅಂತ್ಯವಾಗಲಿದೆ ಎಂದಿದ್ರು. ಆದ್ರೆ 11.25ರ ವೇಳೆಗೆ ವರ್ಗಾವಣೆ ಆದೇಶ ಹೊರಬೀಳುತ್ತಿದ್ದಂತೆ ಸಿಂಧೂರಿ ತಡರಾತ್ರಿ 11.46ರ ವೇಳೆ‌ಗೆ ಆಪ್ತ ಕಾರ್ಯದರ್ಶಿ ಮೂಲಕ ಲಾಕ್‌ಡೌನ್ ಆದೇಶ ಪ್ರತಿ ಬಿಡುಗಡೆ ಮಾಡಿಸಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಸಿಡಿದಿದ್ದ ಸೋಮಶೇಖರ್​ಗೆ ಸಿಂಧೂರಿ ಟಾಂಗ್ ಕೊಟ್ರಾ ಎಂದು ಚರ್ಚೆಯಾಗ್ತಿದೆ.

 

The post ವರ್ಗಾವಣೆ ಬಳಿಕ ಮೈಸೂರು ಲಾಕ್​ಡೌನ್ ವಿಸ್ತರಣೆ.. ಸಚಿವ ಸೋಮಶೇಖರ್​​ಗೆ ಟಾಂಗ್..? appeared first on News First Kannada.

Source: newsfirstlive.com

Source link