ವರ್ಲ್ಡ್​ ಟೆಸ್ಟ್ ಚಾಂಪಿಯನ್​ನ ಸ್ಟಾರ್ ಪ್ಲೇಯರ್ಸ್ ಯಾರು..? ಬ್ಯಾಟಿಂಗ್​ನಲ್ಲಿ ಟಾಪ್​ ಪ್ಲೇಸ್​ನಲ್ಲಿರುವ ಬ್ಯಾಟ್ಸ್​ಮನ್ ಯಾರು..? ಬೌಲಿಂಗ್​ನಲ್ಲಿ ಮಿಂಚಿ ಅಗ್ರಸ್ಥಾನ ಕಾಯ್ದುಕೊಂಡಿರುವ ಬೌಲರ್ಸ್ ಯಾರು..? ಫೈನಲ್ ಪ್ರವೇಶಿಸಿರುವ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಆಟಗಾರರ ಪರ್ಫಾಮೆನ್ಸ್ ಹೇಗಿದೆ..?

ತಿಂಗಳಿಗೂ ಮುನ್ನವೇ ಇಂಗ್ಲೆಂಡ್​ನಲ್ಲಿ ಬೀಡುಬಿಟ್ಟ ನ್ಯೂಜಿಲೆಂಡ್
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​, ದಿನೇ ದಿನೇ ಕುತೂಹಲ ಕೆರಳಿಸ್ತಿದೆ. 2019ರ ಜುಲೈ ತಿಂಗಳಲ್ಲಿ ಆರಂಭವಾದ ಟೆಸ್ಟ್ ಚಾಂಪಿಯನ್​ಶಿಪ್, ಇದೀಗ ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದು ನಿಂತಿದೆ. ಹೀಗಾಗಿ ಇಂಗ್ಲೆಂಡ್​ನ ಸೌತ್​ಹ್ಯಾಂಪ್ಟನ್​ನಲ್ಲಿ ನಡೆಯಲಿರುವ ರೋಚಕ ಟೆಸ್ಟ್ ಪಂದ್ಯ ವೀಕ್ಷಿಸಲು, ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ದಾರೆ.

ಟೆಸ್ಟ್​ ಱಂಕಿಂಗ್​ನ ಟಾಪ್ 3 ತಂಡಗಳ ಆಟಗಾರರು ಶೈನಿಂಗ್
ಎರಡು ವರ್ಷಗಳ ಕಾಲ ನಡೆದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿನ್​ಶಿಪ್​ನಲ್ಲಿ, ಆಟಗಾರರು ಸಾಕಷ್ಟು ಏಳು-ಬೀಳುಗಳನ್ನ ಕಂಡಿದ್ದಾರೆ. ಟೆಸ್ಟ್ ಱಂಕಿಂಗ್​ನ ಟಾಪ್ ಥ್ರೀ ತಂಡಗಳ ಆಟಗಾರರು, ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ್ದಾರೆ. ಆದ್ರೆ ಪಾಕ್, ಲಂಕಾ, ವಿಂಡೀಸ್, ಬಾಂಗ್ಲಾ ತಂಡಗಳ ಸ್ಟಾರ್​ ಆಟಗಾರರು, ಗಮನ ಸಳೆಯುವಲ್ಲಿ ವಿಫಲರಾಗಿದ್ದಾರೆ. ಹಾಗಾದ್ರೆ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಗಮನ ಸೆಳೆದ ಸೂಪರ್​ಸ್ಟಾರ್ ಆಟಗಾರರು ಯಾರು..? ಇಲ್ಲಿದೆ ಮಾಹಿತಿ.

WTCನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​
ಆಟಗಾರ         ಪಂದ್ಯ          ರನ್          ಸರಾಸರಿ
ಲಬುಶೈನ್        13              1675          72.82
ರೂಟ್             20              1660         47.42
ಸ್ಮಿತ್               13               1341         63.85
ಸ್ಟೋಕ್ಸ್           17              1334         46.00
ರಹಾನೆ            17               1095         43.80

 

ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಲಬುಶೈನ್​ಗೆ ಅಗ್ರ ಸ್ಥಾನ
WTCನಲ್ಲಿ 1095 ರನ್​ ಕಲೆಹಾಕಿದ ಅಜಿಂಕ್ಯಾ ರಹಾನೆ

ಆಸ್ಟ್ರೇಲಿಯಾ ತಂಡದ ಮಾರ್ನಸ್ ಲಬುಶೈನ್, 12 ಪಂದ್ಯಗಳನ್ನಾಡಿ 73ರ ಸರಾಸರಿಯಲ್ಲಿ, 1675 ರನ್​ಗಳಿಸಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್, 20 ಪಂದ್ಯಗಳಲ್ಲಿ 1660 ರನ್​​ಗಳಿಸಿದ್ದಾರೆ. ರೂಟ್​​​ ಸರಾಸರಿ 47.42. ಇನ್ನು ಮೂರನೇ ಸ್ಥಾನದಲ್ಲಿ ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಕಾಣಿಸಿಕೊಂಡಿದ್ದಾರೆ. 13 ಪಂದ್ಯಗಳಲ್ಲಿ 1341 ರನ್​ ಸಿಡಿಸಿರುವ ಸ್ಮಿತ್, 64ರ ಸರಾಸರಿಯಲ್ಲಿ ರನ್​ ಕಲೆಹಾಕಿದ್ದಾರೆ. ಇಂಗ್ಲೀಷ್​ ಆಲ್​ರೌಂಡರ್ ಬೆನ್​ ಸ್ಟೋಕ್ಸ್​ 17 ಪಂದ್ಯಗಳಲ್ಲಿ 1334 ರನ್ ಮತ್ತು ಟೀಮ್ ಇಂಡಿಯಾ ಉಪ-ನಾಯಕ ಅಜಿಂಕ್ಯಾ ರಹಾನೆ ಅಷ್ಟೇ ಪಂದ್ಯಗಳಲ್ಲಿ 1095 ರನ್​ ದಾಖಲಿಸಿದ್ದಾರೆ. 46ರ ಬ್ಯಾಟಿಂಗ್ ಸರಾಸರಿ ಹೊಂದಿರುವ ಸ್ಟೋಕ್ಸ್​ ನಾಲ್ಕನೇ ಮತ್ತು 44ರ ಬ್ಯಾಟಿಂಗ್ ಸರಾಸರಿ ಹೊಂದಿರುವ ರಹಾನೆ, ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇದು ವರ್ಲ್ಡ್ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಟಾಪ್​ ಫೈವ್ ರನ್​ ಕಲೆಹಾಕಿರುವ ಬ್ಯಾಟ್ಸ್​ಮನ್​ಗಳ ಸಾಧನೆ. ಇನ್ನು ಬೌಲರ್​ಗಳು ಸಹ, ಯಾರಿಗೂ ಕಡಿಮೆ ಇಲ್ಲ ಅನ್ನೋ ಹಾಗೆ, ಸಾಲಿಡ್ ಪರ್ಫಾಮೆನ್ಸೇ ನೀಡಿದ್ದಾರೆ.

WTCನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್
ಆಟಗಾರ           ಪಂದ್ಯ          ವಿಕೆಟ್            ಬೆಸ್ಟ್
ಕಮ್ಮಿನ್ಸ್              14                70               5/28
ಬ್ರಾಡ್                17                69               6/31
ಅಶ್ವಿನ್               13                67               7/145
ಲಯನ್             14                 56               6/49
ಸೌಥಿ                  10                 51               5/32

67 ವಿಕೆಟ್ ಪಡೆದ ಆಫ್ ಸ್ಪಿನ್ನರ್​ ಅಶ್ವಿನ್​ಗೆ 3ನೇ ಸ್ಥಾನ
ಕಿವೀಸ್ ವೇಗ ಸೌಥಿ 10 ಪಂದ್ಯಗಳಲ್ಲಿ 51 ವಿಕೆಟ್ ಸಾಧನೆ

ಆಸ್ಟ್ರೇಲಿಯಾ ಸ್ಪೀಡ್​ಸ್ಟರ್​ ಪ್ಯಾಟ್ ಕಮ್ಮಿನ್ಸ್​, 14 ಪಂದ್ಯಗಳಲ್ಲಿ 70 ವಿಕೆಟ್ ಪಡೆದ್ರೆ, ಇನ್ನಿಂಗ್ಸ್​ವೊಂದರಲ್ಲಿ 28 ರನ್​ ನೀಡಿ 5 ವಿಕೆಟ್ ಪಡೆದಿದ್ದಾರೆ. ಇದು ಕಮ್ಮಿನ್ಸ್​ರ ಬೆಸ್ಟ್ ಬೌಲಿಂಗ್ ಸ್ಪೆಲ್. ಇಂಗ್ಲೆಂಡ್​ನ ಸ್ಟುವರ್ಟ್ ಬ್ರಾಡ್ 17 ಪಂದ್ಯಗಳಲ್ಲಿ 69 ವಿಕೆಟ್​​​ ಪಡೆದಿದ್ದಾರೆ. 31 ರನ್​ ನೀಡಿ 6 ವಿಕೆಟ್​ ಪಡೆದಿರೋದು, ಬ್ರಾಡ್​ರ ಟಾಪ್ ಸ್ಪೆಲ್​​. ಮೂರನೇ ಸ್ಥಾನದಲ್ಲಿ ಟೀಮ್ ಇಂಡಿಯಾ ಆಫ್ ಸ್ಪಿನ್ನರ್ ಅಶ್ವಿನ್ ಕಾಣಿಸಿಕೊಂಡಿದ್ದಾರೆ. 13 ಪಂದ್ಯಗಳಲ್ಲಿ 67 ವಿಕೆಟ್ ಪಡೆದಿರುವ ಌಶ್, ಇನ್ನಿಂಗ್ಸ್​ವೊಂದರಲ್ಲಿ 145 ರನ್​ ನೀಡಿ 7 ವಿಕೆಟ್ ಪಡೆದಿದ್ದಾರೆ. ಆಸಿಸ್​ನ ನಾಥನ್ ಲಯನ್​​​ 14 ಪಂದ್ಯಗಳಲ್ಲಿ 56 ವಿಕೆಟ್ ಮತ್ತು ನ್ಯೂಜಿಲೆಂಡ್​ ವೇಗಿ ಟಿಮ್ ಸೌಥಿ, ಆಡಿರೋ 10 ಪಂದ್ಯಗಳಲ್ಲಿ 51 ಕಬಳಿಸಿದ್ದಾರೆ. 32 ರನ್​ ನೀಡಿ 5 ವಿಕೆಟ್ ಪಡೆದಿರೋದು, ಸೌಥಿ ಎಕ್ಸಲೆಂಟ್ ಬೌಲಿಂಗ್ ಸ್ಪೆಲ್ ಆಗಿದೆ.

ಟೆಸ್ಟ್ ಅನ್ನೋ ಕಾಂಪಿಟೇಟಿವ್ ಕ್ರಿಕೆಟ್​ನಲ್ಲಿ, ಸ್ಟಾರ್​ ಆಟಗಾರರು ಎಕ್ಸಲೆಂಟ್ ಪರ್ಫಾಮೆನ್ಸ್ ನೀಡಿ ಗಮನ ಸೆಳೆದಿದ್ದಾರೆ. ಜೂನ್ 18ರಂದು ಸೌತ್​ಹ್ಯಾಂಪ್ಟನ್​ನ ರೋಸ್​ ಬೌಲ್​ನಲ್ಲಿ ನಡೆಯಲಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್​ನ ಹೈವೋಲ್ಟೇಜ್ ಫೈನಲ್​ ಫೈಟ್​ನಲ್ಲೂ, ಸೂಪರ್​ಸ್ಟಾರ್ ಆಟಗಾರರ ನಡುವೆ ಜಿದ್ದಾಜಿದ್ದಿ ಕದನ ನಿರೀಕ್ಷಿಸಲಾಗಿದೆ.

The post ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಸ್ಟಾರ್ ಪ್ಲೇಯರ್ಸ್ ಪರ್ಫಾಮೆನ್ಸ್ ಹೇಗಿದೆ..? appeared first on News First Kannada.

Source: newsfirstlive.com

Source link