ದೇಶ ಕಾಯೋ ಯೋಧರಿಗೆ ಒಂದೇ ಗುರಿ, ದೇಶ ರಕ್ಷಿಸೋದು. ಎದುರು ನಿಲ್ಲೋ ಶತ್ರು ಬಿಟ್ಟು ಮತ್ಯಾರು ಅವರಿಗೆ ಕಾಣೋದಿಲ್ಲ. ಅಷ್ಟೊಂದು ಬದ್ಧತೆ ಅವರಿಗೆ. ಆದರೆ, ಯೋಧರ ಕುಟುಂಬದವರಿಗೆ ಪ್ರತಿಕ್ಷಣವೂ ಹೋರಾಟ. ಆ ಯೋಧ ಕ್ಷೇಮದಿಂದಿದ್ದಾನಾ ಅನ್ನೋ ಯೋಚನೆ ಆತನ ಕುಟುಂಬದ ಪ್ರತಿಯೊಬ್ಬರಿಗೂ ಪ್ರತಿಕ್ಷಣವೂ ಇರುತ್ತೆ. ಅದು ಆ ಯೋಧ ಇದ್ದಾಗಲೂ ಇಲ್ಲದಿದ್ದಾಗಲೂ ಆತನ ಕುಟುಂಬದವರ ಮನದಿಂದ ದೂರವಾಗೋದಿಲ್ಲಾ. ಅಂತಾದ್ದೇ ಒಂದು ಮನಮಿಡಿಯುವ ಕಥೆ ಇದು.

ಅದು 2020ರ ಆಗಸ್ಟ್ 20. ಈದ್ ಹಬ್ಬಕ್ಕಾಗಿ ವೀರಯೋಧ ಶಕಿರ್ ಮಂಜೂರ್ ತಮ್ಮ ಮನೆಗೆ ಬಂದಿದ್ರು. ಹಬ್ಬದ ಊಟ ಉಪಚಾರವಾದ ಬಳಿಕ ಮರುದಿನ ಬೆಳಗ್ಗೆ ಡ್ಯೂಟಿಗೆ ರಿಪೋರ್ಟ್ ಆಗಲೇ ಬೇಕಿತ್ತು. ಅದಕ್ಕೂ ಮೊದಲು ಶಾಕಿತ್ರ್​ ತನ್ನ ಸಹೋದರ ಶಹ್ನಾಜ್ ಜೊತೆ ಕಾಶ್ಮಿರದ ತಮ್ಮ ಸೋದರ ಸಂಬಂಧಿಯೊಬ್ಬರನ್ನು ಭೇಟಿ ಮಾಡಲು ಹೋಗಿದ್ದರು. ಇದಕ್ಕಾಗಿ ನಗು ನಗುತ್ತಲೆ ತನ್ನ ಕಾರ್ ಹತ್ತಿ ಶಾಕೀರ್ ಮನ್ಸೂರ್ ಹಾಗೂ ತಮ್ಮ ಶಹ್ನಾಜ್ ಮಂಜೂರ್ ಹೋಗುತ್ತಿದ್ದಾಗ ಅಡ್ಡ ಬಂದವರೆ ಭಯೋತ್ಪಾದಕರು.

 

ಮುಂದೇನಾಯ್ತು..?
ಆಗಷ್ಟೆ ಮನೆಯಿಂದ ಹೊರ ಬಂದಿದ್ದ ಶಕಿರ್ ಮಂಜೂರ್ ಕೈಯಲ್ಲಿ ಯಾವುದೇ ಶಸ್ತ್ರಾಸ್ತ್ರಗಳಿರಲಿಲ್ಲ. ಹಾಗಾಗಿ ಕುತಂತ್ರಿ ಉಗ್ರರು ಶಕಿರ್ ಮಂಜೂರ್​ನನ್ನ ಅಪಹರಿಸುವ ಪ್ರಯತ್ನದಲ್ಲಿದ್ದರು. ಅಷ್ಟರಲ್ಲಿ ತಮ್ಮ ಜೊತೆಗೆ ಇದ್ದ ತಮ್ಮನನ್ನು ಅಲ್ಲಿಂದ ಓಡಲು ಹೇಳಿದ ಮನ್ಸೂರ್ ಉಗ್ರರು ಕೈ ಸೇರಿದ್ದರು. ಅಲ್ಲಿಂದ ಆ ಯೋಧ ಮಿಸ್ಸಿಂಗ್. ಈ ಘಟನೆಯನ್ನ ಕಣ್ಣಾರೆ ನೋಡಿದ ಯೋಧನ ತಮ್ಮ ಶಹಾನಾಜ್ ಮನೆಗೆ ಓಡಿ ಬಂದು ನಡೆದ ಘಟನೆಯನ್ನು ತಿಳಿಸಿದ್ದರು. ವಿಷಯ ತಿಳಿದ ತಕ್ಷಣ ಮನೆಯವರೆಲ್ಲ ಮಗನನ್ನು ಹುಡುಕಲು ಬೀದಿಗಿಳಿದಿದ್ದರು. ಈ ಘಟನೆ ನಡೆದು ವರ್ಷಗಳಾಗಿದೆ ಆದರೂ ಈಗಲೂ ಕುಟುಂಬ ಯೋಧನ ಹುಡುಕಾಟದಲ್ಲಿ ತೊಡಗಿದೆ.  ಶಕಿರ್ ಮಂಜೂರ್ ಮೃತರಾಗಿದ್ದಾರೆ ಎಂದು ತಿಳಿದು, ಅವರ ತಂದೆ ಮತ್ತು ತಮ್ಮ ಶಕಿರ್ ಮಂಜೂರ್ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮಗನ ಮೃತದೇಹಕ್ಕಾಗಿ ತಂದೆ ಹುಡುಕಾಟ
ಶಕಿರ್ ಮಂಜೂರ್ ಕಾಣೆಯಾದ ದಿನ ಯಾವುದೇ ಸುಳಿವು ಇರಲಿಲ್ಲ. ಆದರೆ ಮರುದಿನ ಒಂದಷ್ಟು ಸುಳಿವು ಇವರ ತಂದೆಗೆ ಸಿಗುತ್ತದೆ.  ಆ ಊರಿನಿಂದ 50 ಕಿಲೋಮೀಟರ್ ಅಂತರದಲ್ಲಿ ಒಂದು ಕಡೆ ಶಾಕೀರ್ ಧರಿಸಿದ್ದ, ರಕ್ತದಲ್ಲಿ ಮಿಂದಿದ್ದ ಬಟ್ಟೆ, ಇನ್ನೊಂದು ಕಡೆ ಮನ್ಸೂರ್​ ಹೋಗುತ್ತಿದ್ದ ಕಾರ್, ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ. ಅಂದೆ ಆತನ ಕುಟುಂಬಕ್ಕೆ ಶಾಕೀರ್ನನ್ನು ಉಗ್ರರು ಕೊಂದು ಹಾಕಿದ್ದಾರೆಂದು ತಿಳಿದಿದೆ. ಈ ವಿಷಯ ಅರಿತ ಬಳಿಕ ಮನೆಯವರ ಆಕ್ರಂದನ ಹೇಳತೀರದಾಗಿತ್ತು. ಮಗನ ಪಾರ್ಥೀವ ಶರೀರಕ್ಕಾಗಿ ಸೇನೆಯನ್ನು ಬೇಡಲು ಶುರು ಮಾಡಿದ್ರು. ಆದರೆ ಸುಳಿವಿಗೂ ಸಿಗದ ಹಾಗೆ ಆತನ ದೇಹವನ್ನು ಏನು ಮಾಡಿದ್ದರೋ ಈ ಉಗ್ರರು. ಸೇನೆಯ ಕಡೆಯಿಂದ ದೇಹ ಸಿಗುತಿಲ್ಲ ಎನ್ನುವ ಮಾಹಿತಿ ಮಾತ್ರ ಸಿಕ್ಕಿದೆ. ಆದರೆ ಶಕಿರ್ ಮಂಜೂರ್ ತಂದೆ ಸುಮ್ಮಾನಾಗಲಿಲ್ಲ. ಮಗನ ದೇಹವನ್ನು ಹುಡುಕಿ ತರುವೆ ಎನ್ನುವ ದಿಟ್ಟ ನಿರ್ಧಾರ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಅವರ ಈ ಒಂದು ಕೆಲಸ ನಿಂತೇ ಇಲ್ಲ.

Image

ಊರಿಗೆ ಊರೇ ಹುಡುಕಾಟ
ದಿನ ಬೆಳಗಾದರೆ ಈ ಕುಟುಂಬದ ಕೆಲಸ ಇದೆ ಆಗಿ ಹೋಗಿದೆ. ಬೆಳ್ಳಗೆ ಎದ್ದವರೆ ಕೈನಲ್ಲಿ ಗೋರುವ ಸಲಾಕೆಯನ್ನು ಹಿಡಿದು ಮನೆಯಲ್ಲಿ ಇರುವ ಜೀಪ್ ಹತ್ತಿ ಹಳ್ಳಿ, ಬೆಟ್ಟ, ಕಾಡು ಎನ್ನದೆ ನುಗ್ಗಿ  ಮಗನ ದೇಹಕ್ಕಾಗಿ ಹುಡುಕಾಡುವುದು. ಶಕಿರ್ ಬದುಕಿದ್ದಾಗ ಜಾತಿ ಬೇಧ ಎನ್ನುವ ಮಾತುಗಳನ್ನಾಡಿದ್ದೆ ಇಲ್ಲ. ಹೀಗಾಗಿ ಕಾಶ್ಮೀರದಲ್ಲಿ ತನ್ನದೆ ಬಳಗವನ್ನು ಗಳಿಸಿದ್ದರು.  ಅವರ ತಂದೆಯ ಈ ದಿಟ್ಟ ಹೆಜ್ಜೆಗೆ ಶಾಕೀರ್ ಸ್ನೇಹಿತರು ಸಂಬಂಧಿಕರು ಸಾಥ್ ನೀಡಿದ್ದಾರೆ. ಎಲ್ಲರೂ ತಮ್ಮ ಪ್ರೀತಿಯ ಶಾಕಿರ್ಗಾಗಿ ಹುಡುಕುತ್ತಲೆ ಇದ್ದಾರೆ. ಒಂದೊಮ್ಮೆ ಕೇವಲ ಸಲಾಕೆ ಹಿಡಿದು, ಕೆಲವೊಮ್ಮೆ ಜೆ.ಸಿ.ಬಿ ಸಹಾಯದಿಂದ ಅಗೆಸಿ, ಇನ್ನು ಒಂದೊಂದು ಸಲ ಇಡೀ ಊರಿಗೆ ಊರೆ ನಿಂತು ಶಕಿರ್ ಮಂಜೂರ್​ಗಾಗಿ ಹುಡುಕಾಟ ನಡೆಸಿದ್ದು ಇದೆ.

ಉಗ್ರರು ಶಾಕೀರ್​ರನ್ನು ಕೊಂದು ಹೂತು ಹಾಕಿದ್ದಾರೊ ಅಥವಾ ದೇಹವನ್ನು ಸುಟ್ಟು ಹಾಕಿದ್ದಾರೋ ಎನ್ನುವ ಮಾಹಿತಿ ಇಲ್ಲ. ಈಗಲೂ ಆ ಕುಟುಂಬದ ಬಳಿ ಇರೋದು ಕೇವಲ ಮಗನ ಫೋಟೋ ಹಾಗೂ ಕೊನೆ ಬಾರಿಗೆ ಧರಿಸಿದ್ದ ಆ ಬಟ್ಟೆಗಳು. ಇದೊಂದು ಸುಳಿವನ್ನು ಹಿಡಿದು ಇಡಿ ಕಾಶ್ಮೀರದ ಇಂಚನ್ನು ಬಿಡದೆ ಹುಡುಕುತ್ತಿದೆ ಕುಟುಂಬ. ಏನೇ ಆದರೂ ಮಗನ ದೇಹವನ್ನು ಹುಡುಕಿ ತರುವೆ ಅನ್ನೊ ಹಠ ಅಪ್ಪನದ್ದು.

ಏನಾದರು ಸುಳಿವು ಸಿಕ್ಕಿದ್ಯಾ?
ಇನ್ನೊಂದು ಕಡೆ ಶಕಿರ್ ತಾಯ,. ಮನೆಯಲ್ಲೆ ಇದ್ದು ಮಗನ ದೇಹವನ್ನು ಹುಡುಕಿತರಲು ಹೋದ ಎಲ್ಲರನ್ನು ಮನೆ ಬಾಗಿಲಲ್ಲಿ ಕುಳಿತು ಕಾಯುತ್ತಾ ಇರುತ್ತಾರೆ. ಇವರಿಗೆ ಸಾಥ್ ನೀಡಲು ಶಾಕೀರ್ ತಂಗಿ. ಇಬ್ಬರು ದೇವರ ಮೊರೆ ಹೋಗಿದ್ದಾರೆ. ಎಲ್ಲ ದಿಕ್ಕುಗಳಲ್ಲಿ ಇರುವ ಫಕೀರರನ್ನು ಭೇಟಿ ಮಾಡಿ ತನ್ನ ಮಗನ ಸುಳಿವನ್ನು ಹೇಳಲು ಕೇಳಿದ್ದಾರೆ ಈ ತಾಯಿ. ಇಷ್ಟೆಲ್ಲ ಆಗಿ ಒಂದು ವರ್ಷದ ಮೇಲೆ ದಿನಗಳು, ತಿಂಗಳು ಕಳೆಯುತ್ತಿದೆ. ಆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಅಣ್ಣ ಸಿಕ್ಕರೆ ಸಾಕು ಎನ್ನುವ ತಂಗಿ ಮನೆಯ ಅಗತ್ಯತೆ ಪೂರೈಸಲು ತನ್ನ ಬಳಿ ಇರುವ ಚಿನ್ನವನ್ನು ಮಾರಿ ಮನೆ ಕಾಪಾಡುತ್ತಿದ್ದಾರೆ.

Image

ಇನ್ನು ಎಷ್ಟು ದಿನ ಈ ಹೋರಾಟ? ಎಂದು ಮಂಜೂರ್ ಅವರನ್ನ ಕೇಳಿದರೆ ನನ್ನ ಪ್ರಾಣ ಹೋಗುವವರೆಗೂ ಮಗನ ದೇಹವನ್ನು ಹುಡುಕುತ್ತೆನೇ ಎನ್ನುತ್ತಾರೆ. ಇನ್ನು ಶಾಹನಾಜ್ ಕೂಡ ಲಾ ಓದುತ್ತಿದ್ದುದ್ದನ್ನು ಕೈಬಿಟ್ಟು ಅಪ್ಪನಜೊತೆಗೂಡಿದ್ದಾರೆ. ಇವರೆಲ್ಲರಿಗೂ ಕಾಡುತ್ತಿರುವುದು ಎರಡೇ ವಿಷಯ. ಆ ವಿಷಯವೂ ಅಂದೇ ಆಗಿದ್ದರೆ ಇಷ್ಟು ದಿನ ಸಲಾಕೆ ಹಿಡಿದು ಕಾಶ್ಮಿರದ ಹಳ್ಳಿಗಳನ್ನು ಸುತ್ತುತಿರಲಿಲ್ಲ.

ಶಕೀರ್ ಸತ್ತ ದಿನ, ತಂಗಿ ಕನಸಿನಲ್ಲಿ ನನ್ನ ದೇಹ ಬಟ್ಟೆ ಸಿಕ್ಕ ಜಾಗದಲ್ಲಿಯೇ ಇದೆ ಎಂದಿದ್ದರಂತೆ. ಆ ಒಂದು ಕಾರಣಕ್ಕೆ ಹುಡುಕಾಟ ನಿಲ್ಲಿಸಿಯೆ ಇಲ್ಲ. ಒಂದು ಮಗನ ಮುಖವನ್ನು ಕೊನೆ ಬಾರಿ ನೋಡಲು ಆಗದ ಕುಟುಂಬಕ್ಕೆ ಕೊನೆ ಪಕ್ಷ ಸರಿಯಾದ ಕ್ರಿಯೆಯನ್ನು ಮಾಡಬೇಕಿದೆ. ಅಲ್ಲದೆ ಬಹಳ ಮುಖ್ಯವಾದ ಮತ್ತೊಂದು ಕಾರಣ ಅಂದ್ರೆ ಶಾಕಿರ್​ ಮಂಜೂರ್​ರನ್ನು ಇನ್ನು ಭಾರತೀಯ ಸೇನೆ ಹುತಾತ್ಮ ಯೋಧನೆಂದು ಪರಿಗಣಿಸಿಲ್ಲ. ಈ ವಿಷಯವಾಗಿ ನ್ಯಾಯ ದೊರಕಿಸಲು ಮಂಜೂರ್ ಪರದಾಡುತ್ತಿದ್ದಾರೆ.

ಭಾರತೀಯ ಸೇನೆ ನೀತಿ ಪ್ರಕಾರ ಮಿಸ್ಸಿಂಗ್ ಆಗಿ ಏಳು ವರ್ಷಗಳಾದ ಮೇಲೆ ಆ ವ್ಯಕ್ತಿಯನ್ನು ಮೃತನಾಗಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಶಾಕೀರ್ ಪ್ರಕರಣದಲ್ಲೂ ಅದೇ ಆಗಿದೆ ಶಾಕೀರ್ ದೇಹ ಸಿಗುವವರೆಗೂ ಅವರನ್ನು ಹುತಾತ್ಮ ಎಂದು ಹೇಳಲಾಗುವುದಿಲ್ಲ. ಹೇಳಬೇಕಾದರೆ ಇನ್ನು 7 ವರ್ಷ ಕಾಯಬೇಕಾಗುತ್ತದೆ.

ಯೋಧನಿಗೆ ನ್ಯಾಯ ಸಿಗುವಂತಾಗಲಿ
ಶಾಕೀರ್ ಚಿಕ್ಕ ಹುಡುಗನಿಂದ ಸೇನೆ ಸೇರಿ ದೇಶ ಸೇವೆ ಮಾಡುವ ಕನಸು ಕಂಡವರು. ಆಂತಹ ವೀರನಿಗೆ ಈ ಕ್ರೂರಿ ಉಗ್ರರು ಆಕ್ರಮ ದಾಳಿಯಿಂದ ಹೀಗಾಗಿರುವುದು ಅವರ ಸಾವಿಗೆ ನ್ಯಾಯ ಸಿಗದ ಹಾಗೆ ಆಗಿ ಹೋಗಿದೆ. ಸೇನೆಯ ಪಾಲಿಗೆ ಶಾಕಿರ್ ಮಂಜೂರ್ ಇನ್ನು ಹುತಾತ್ಮರಲ್ಲ. ಆದರೆ ದೇಶ ಸೇವೆಯಲ್ಲಿ ನಿರತರಾಗಿದ್ದ ಅವರ ಸೇವೆಗೆ ಕಾಶ್ಮೀರದ ಆ ಒಂದು ಹಳ್ಳಿಯೇ ಒಂದಾಗಿದೆ ಎನ್ನುವುದು ವಿಶೇಷವಾದ ಸಂಗತಿ.

ಒಟ್ಟಿನಲ್ಲಿ ಈ ವೀರನ ಕಥೆ ಕರುಣಾಜನಕವಾಗಿದೆ. ಇತ್ತ ದೇಶ ಸೇವೆ ಮಾಡಿರುವುದಕ್ಕಾಗಲಿ, ಮಿಲಿಟೆಂಟ್ಸ್​ಗಳ ಕುತಂತ್ರಕ್ಕೆ ಬಲಿಯಾಗಿದಕ್ಕಾಗಲಿ ಯಾವುದಕ್ಕೂ ನ್ಯಾಯ ಸಿಕ್ಕಿಲ್ಲ. ಆದರೆ  ಮಗನಿಗಾಗಿ ಮನೆಯವರ ಹುಡುಕಾಟ ಸತತವಾಗಿ ನಡೆಯುತ್ತಲೆ ಇದೆ. ಆದಷ್ಟು ಬೇಗ ಈ ಯೋಧನಿಗೆ ನ್ಯಾಯ ಸಿಗುವಂತಾಗಲಿ.

The post ವರ್ಷದ ಹಿಂದೆ ಕಾಣೆಯಾದ ಯೋಧ..ಈಗಲೂ ಮೃತದೇಹಕ್ಕಾಗಿ ಹುಡುಕಾಡ್ತಿದ್ದಾರೆ ತಂದೆ appeared first on News First Kannada.

Source: newsfirstlive.com

Source link