ವಲಸಿಗರಿಂದಲೇ ಸರ್ಕಾರ ರಚನೆ ಆಗಿದೆ -ಈಶ್ವರಪ್ಪ ಹೇಳಿಕೆಗೆ ಎಂಟಿಬಿ ಗರಂ

ವಲಸಿಗರಿಂದಲೇ ಸರ್ಕಾರ ರಚನೆ ಆಗಿದೆ -ಈಶ್ವರಪ್ಪ ಹೇಳಿಕೆಗೆ ಎಂಟಿಬಿ ಗರಂ

ಬೆಂಗಳೂರು: ‘ಸದ್ಯದ ಬೆಳವಣಿಗೆಗಳಿಗೆ ವಲಸೆ ಬಂದಿರುವ 17 ಶಾಸಕರೇ ಕಾರಣ’ ಎಂದಿರುವ ಸಚಿವ ಕೆಎಸ್​.ಈಶ್ವರಪ್ಪ ಹೇಳಿಕೆಗೆ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿ.. ‘ವಲಸಿಗರಿಂದಲೇ ಸರ್ಕಾರ ರಚನೆ ಆಗಿದೆ’ ಅಂತಾ ಟಾಂಗ್ ಕೊಟ್ಟಿದ್ದಾರೆ.

ರಾಜ್ಯಕ್ಕೆ ಸಚಿವ ಅರುಣ್ ಸಿಂಗ್ ಭೇಟಿ ನೀಡಿರುವ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿರುವ ಎಂಟಿಬಿ ನಾಗರಾಜ್.. ಇವತ್ತು ಸಂಜೆ ಸಚಿವರ ಸಭೆ ಕರೆದಿದ್ದಾರೆ. ಸಚಿವರ ಕೆಲಸ ಕಾರ್ಯದ ಬಗ್ಗೆ ಮೌಲ್ಯ ಮಾಪನ ನಡೆಯಲಿದೆ. ಬಿ.ಸಿ ಪಾಟೀಲ್ ಮನೆಯಲ್ಲಿ ನಡೆಯುವ ಸಭೆಗೆ ನನಗೆ ಆಹ್ವಾನ ಇಲ್ಲ.

ವಲಸಿಗರು ಬಂದಿರುವುದರಿಂದ ಸಮಸ್ಯೆ ಇಲ್ಲ. ವಲಸಿಗರಿಂದಲೇ ಸರ್ಕಾರ ರಚನೆ ಆಗಿದೆ. ಈಶ್ವರಪ್ಪ ಯಾವ ಉದ್ದೇಶಕ್ಕೆ ಹೇಳಿದ್ದಾರೋ ಗೊತ್ತಿಲ್ಲ. ಅವರಿಂದಲೇ ಮಾಹಿತಿ ಕೇಳುತ್ತೇನೆ. ಈಶ್ವರಪ್ಪ ಹೇಳಿದ್ದು ಸರಿಯಿಲ್ಲ ಅಂತಾ ಖಾರವಾಗಿ ಪ್ರತಿಕ್ರಿಯಿಸಿದರು.

The post ವಲಸಿಗರಿಂದಲೇ ಸರ್ಕಾರ ರಚನೆ ಆಗಿದೆ -ಈಶ್ವರಪ್ಪ ಹೇಳಿಕೆಗೆ ಎಂಟಿಬಿ ಗರಂ appeared first on News First Kannada.

Source: newsfirstlive.com

Source link