ಮುಂಬೈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ಎರಡನೇ ದಿನವಾದ ಇಂದು ಮಯಾಂಕ್, ನ್ಯೂಜಿಲೆಂಡ್ ಬೌಲರ್ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ರು. ದಿನದಾಟದ ಆರಂಭದಿಂದಲೂ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಮಯಾಂಕ್, ಮೊದಲ ಸೆಷನ್ನಲ್ಲಿ ಕಿವೀಸ್ ಬೌಲರ್ಗಳ ವಿರುದ್ಧ ಮೇಲುಗೈ ಸಾಧಿಸಿದ್ರು. ಆದ್ರೆ ಎರಡನೇ ಸೆಷನ್ ಆರಂಭದಲ್ಲಿ 150ರನ್ ಸಿಡಿಸಿ ಸಂಭ್ರಮಿಸಿದ್ದ ಮಯಾಂಕ್, ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. 7 ಗಂಟೆಗಳ ಕಾಲ ಕ್ರೀಸ್ನಲ್ಲಿ ನಿಂತು ಬ್ಯಾಟಿಂಗ್ ನಡೆಸಿದ ಮಯಾಂಕ್, 311 ಎಸೆತಗಳಲ್ಲಿ 150 ರನ್ ಸಿಡಿಸಿದ್ರು. 17 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ಗಳು ಮಯಾಂಕ್ ಬ್ಯಾಟ್ನಿಂದ ದಾಖಲಾಗಿತ್ತು.
.@mayankcricket gets to his 150 and departs on the next delivery.
Live – https://t.co/KYV5Z1BJSU pic.twitter.com/KtufGMhVWn
— BCCI (@BCCI) December 4, 2021