ವಾಂಖೆಡೆ ಟೆಸ್ಟ್​ ಆರಂಭಕ್ಕೆ ಕೌಂಟ್​ಡೌನ್ -ಮಯಾಂಕ್, ಸಾಹ ಪ್ಲೇಯಿಂಗ್​-XIನಿಂದ ಔಟ್..?


ನ್ಯೂಜಿಲೆಂಡ್​​ ವಿರುದ್ಧದ 2ನೇ ಟೆಸ್ಟ್​​ಗೆ ವಿರಾಟ್​​ ಕೊಹ್ಲಿ ಆಗಮನದಿಂದ ಟೀಮ್​ ಇಂಡಿಯಾದ ಬಲ ಹೆಚ್ಚಿದೆ. ಅದರ ಜೊತೆಗೆ ಪ್ಲೇಯಿಂಗ್​ ಇಲೆವೆನ್ ಆಯ್ಕೆಯೂ ತಲೆ ನೋವಾಗಿದೆ. ಹಾಗಾದ್ರೆ ಇಂದಿನಿಂದ ಆರಂಭವಾಗಲಿರೋ ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಆಗೋ ಬದಲಾವಣೆಗಳೇನು.? ಇಲ್ಲಿದೆ ಡಿಟೇಲ್ಸ್​

ಮೊದಲ ಟೆಸ್ಟ್​​ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡರೂ, ಟೀಮ್​ ಇಂಡಿಯಾ ಹಿನ್ನಡೆ ಅನುಭವಿಸಿದ್ದಂತೂ ಸುಳ್ಳಲ್ಲ. ಅದರಲ್ಲೂ ಅನುಭವಿ ಬ್ಯಾಟ್ಸ್​​ಮನ್​ಗಳ ವೈಫಲ್ಯ ತಂಡಕ್ಕೆ ಹಿನ್ನಡೆಯಾಗಿತ್ತು. ಇದೀಗ ವಿರಾಟ್​ ಕೊಹ್ಲಿ ಆಗಮನದಿಂದ ಬ್ಯಾಟಿಂಗ್​ ಆರ್ಡರ್​ಗೆ ಬಲ ಬಂದಿದ್ರೂ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆ ಅನಿವಾರ್ಯವಾಗಿದೆ.

ಪ್ಲೇಯಿಂಗ್​-XIನಿಂದ ಮಯಾಂಕ್​​ಗೆ ಕೊಕ್​.?
ಓಪನರ್ ಆಗಿ ಕಣಕ್ಕಿಳಿಯುತ್ತಾರಾ ಪೂಜಾರ..?
ಬಹುಕಾಲದ ಬಳಿಕ ಟೆಸ್ಟ್​​ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ಮಯಾಂಕ್​ ಅಗರ್​ವಾಲ್​ ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ದಾರೆ. ಎರಡೂ ಇನ್ನಿಂಗ್ಸ್​ಗಳಲ್ಲಿ ಇಂಫ್ಯಾಕ್ಟ್​ಫುಲ್​ ಪ್ರದರ್ಶನ ನೀಡಿದ ಕನ್ನಡಿಗ, 2ನೇ ಟೆಸ್ಟ್​ನಲ್ಲಿ ಬೆಂಚ್​ ಕಾಯೋ ಸಾಧ್ಯತೆ ಹೆಚ್ಚಿದೆ. ಮಯಾಂಕ್​ಗೆ ಗೇಟ್​ಪಾಸ್​ ನೀಡಿ ಚೇತೇಶ್ವರ್​ ಪೂಜಾರಗೆ ಓಪನರ್​ ಆಗಿ ಬಡ್ತಿ ನೀಡೋದು ಮ್ಯಾನೇಜ್​ಮೆಂಟ್​ ಪ್ಲಾನ್​.

ಕೊಹ್ಲಿ ಕಮ್​ಬ್ಯಾಕ್, ಸ್ಟ್ರಾಂಗ್ ಆಯ್ತು ಮಿಡಲ್ ಆರ್ಡರ್..!
ಅಜಿಂಕ್ಯಾ ರಹಾನೆ, ಚೇತೇಶ್ವರ್​ ಪೂಜಾರರ ವೈಫಲ್ಯದಿಂದ ಮಿಡಲ್​ ಆರ್ಡರ್​​ ಬಲ ಕುಂದಿತ್ತು. ಇದೀಗ ವಿರಾಟ್​​ ಕೊಹ್ಲಿಯ ಆಗಮನ ಹಾಗೂ ಶ್ರೇಯಸ್​​ ಅಯ್ಯರ್​ರ ಸಾಲಿಡ್​ ಫಾರ್ಮ್​ ಮಿಡಲ್​ ಆರ್ಡರ್​​ಗೆ ಬಲ ತುಂಬಲಿದೆ. ಜೊತೆಗೆ ವೈಫಲ್ಯದ ಸುಳಿಗೆ ಸಿಲುಕಿರುವ ಅನುಭವಿ ರಹಾನೆಗೆ ಮತ್ತೊಂದು ಅವಕಾಶ ನೀಡೋದು ಕೂಡ ತಂಡದ ಲೆಕ್ಕಾಚಾರವಾಗಿದೆ.

ವಿಕೆಟ್ ಹಿಂದೆ ಕಾರ್ಯನಿರ್ವಹಿಸೋದು ಯಾರು..?
2ನೇ ಟೆಸ್ಟ್​​ ಪಂದ್ಯಕ್ಕೆ ವಿಕೆಟ್​​ ಕೀಪರ್​ ಆಯ್ಕೆಯೇ ಟೀಮ್​ ಮ್ಯಾನೇಜ್​ಮೆಂಟ್​​ಗೆ ತಲೆನೋವಾಗಿದೆ. ಬ್ಯಾಟ್ಸ್​ಮನ್​ ಆಗಿ 2ನೇ ಇನ್ನಿಂಗ್ಸ್​​ನಲ್ಲಿ ವೃದ್ಧಿಮಾನ್​ ಸಾಹ ದಿಟ್ಟ ಹೋರಾಟ ನಡೆಸಿದ್ರೆ, ಸಹಾ ಅಲಭ್ಯತೆ ವಿಕೆಟ್​ ಕೀಪಿಂಗ್​ ಚಾಣಾಕ್ಷತೆಯಿಂದ ಕೆಎಸ್​​ ಭರತ್​​ ಗಮನ ಸೆಳೆದಿದ್ದಾರೆ. ಹೀಗಾಗಿ ಇಬ್ಬರಲ್ಲಿ ಯಾರಿಗೆ ಮಣೆ ಹಾಕಬೇಕು ಅನ್ನೋ ಗೊಂದಲ ತಂಡದಲ್ಲಿದೆ. ಸಾಹಾ ಇಂಜುರಿಗೆ ತುತ್ತಾಗಿರೋದ್ರಿಂದ ಬಹುತೇಕ ಭರತ್​​ಗೆ ಅವಕಾಶ ನೀಡಲಾಗುತ್ತೆ ಅನ್ನೋದು ಮೂಲದ ಮಾಹಿತಿಯಾಗಿದೆ.

ವಾಂಖೆಡೆ ಟರ್ನಿಂಗ್​ ಟ್ರ್ಯಾಕ್​​​ನಲ್ಲಿ ತ್ರಿಮೂರ್ತಿ ಸ್ಪಿನ್ನರ್​ಗಳು..!
2ನೇ ಟೆಸ್ಟ್​​ನಲ್ಲಿ ಮೂವರು ಸ್ಪಿನ್ನರ್​​ಗಳು ಕಣಕ್ಕಿಳಿಯೋದು ಖಚಿತವಾಗಿದೆ. ಅಕ್ಷರ್​ ಪಟೇಲ್​, ಆರ್​​ ಅಶ್ವಿನ್​, ಅಕ್ಷರ್​ ಪಟೇಲ್​ ಈ ಮೂವರೇ ವಾಂಖೆಡೆಯ ಟರ್ನಿಂಗ್​ ಟ್ರ್ಯಾಕ್​​ನಲ್ಲಿ ಗೇಮ್​ ಚೈಂಜರ್ಸ್​ ಆಗ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಜೊತೆಗೆ ಈ ಮೂವರ ಆಯ್ಕೆ ಕೆಳ ಕ್ರಮಾಂಕಕ್ಕೂ ಬಲ ತುಂಬಲಿದೆ.

ಇಶಾಂಗ್​ಗೆ ಕೊಕ್..! ಉಮೇಶ್ ಜೊತೆಗಾರನಾಗ್ತಾರಾ ಸಿರಾಜ್..?
ಇನ್ನು ಮೊದಲ ಟೆಸ್ಟ್​ ಪಂದ್ಯದಲ್ಲಿ ವಿಕೆಟ್​​ ಕಬಳಿಸುವಲ್ಲಿ ವಿಫಲವಾದ ವೇಗಿ ಇಶಾಂತ್​ ಶರ್ಮಾಗೆ ಕೊಕ್​ ನೀಡೋ ಸಾಧ್ಯತೆ ದಟ್ಟವಾಗಿದೆ. ಇಶಾಂತ್​ ಬದಲು ಯುವ ಮೊಹಮ್ಮದ್​ ಸಿರಾಜ್​ಗೆ ಅವಕಾಶ ಸಿಗೋ ಸಾಧ್ಯತೆ ದಟ್ಟವಾಗಿದೆ. ಉಮೇಶ್​​ ಯಾದವ್​ ಜೊತೆಗೆ ಸಿರಾಜ್​ ನ್ಯೂ ಬಾಲ್​ ಶೇರ್​ ಮಾಡಲಿದ್ದಾರೆ ಅನ್ನೋದು ತಂಡದ ಮೂಲದ ಮಾಹಿತಿಯಾಗಿದೆ.

ಸಂಭವನೀಯ ತಂಡ: ಗಿಲ್, ಪೂಜಾರ, ಕೊಹ್ಲಿ, ರಹಾನೆ, ಶ್ರೇಯಸ್, ಭರತ್, ಜಡೇಜಾ, ಅಶ್ವಿನ್, ಅಕ್ಷರ್, ಉಮೇಶ್, ಸಿರಾಜ್.

News First Live Kannada


Leave a Reply

Your email address will not be published. Required fields are marked *