ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಪ್ ಇದೀಗ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ವಾಟ್ಸಪ್ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ನೀಡುವತ್ತ ವಾಟ್ಸಪ್ ಕಾರ್ಯೋನ್ಮುಖವಾಗಿದೆ.

ಫೇಸ್‍ಬುಕ್ ಒಡೆತನದ ವಾಟ್ಸಪ್ ಇದೀಗ ಚಾಟ್ ಬಾಕ್ಸ್ ಥೀಮ್ ಕಲರ್ ಬದಲಾಯಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆಯಂತೆ. ವರದಿಗಳು ಹೇಳುವಂತೆ ಬಳಕೆದಾರರು ತಮಗೆ ಇಷ್ಟವಾದ ಬಣ್ಣವನ್ನು ವಾಟ್ಸಪ್ ಚಾಟ್ ಬಾಕ್ಸ್ ಥೀಮ್ ಗೆ ಅನ್ವಯಿಸಬಹುದು. ಈ ಹೊಸ ಫೀಚರ್ ಮೇಲೆ ವಾಟ್ಸಪ್ ವರ್ಕ್ ಮಾಡುತ್ತಿದ್ದು, ಇದು ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ. ಆದರೆ, ಈ ಬಗ್ಗೆ ವಾಟ್ಸಪ್‍ನಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಈಗಾಗಲೇ ವಾಟ್ಸಪ್‍ನಲ್ಲಿ ವಾಯ್ಸ್ ಫೀಚರ್‍ ಇದೆ. ಮತ್ತೊಂದು ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಇದರ ವೇಗ ನಿಯಂತ್ರಿಸುವ ಅವಕಾಶವನ್ನು ಬಳಕೆದಾರರಿಗೆ ನೀಡಲಿದೆಯಂತೆ. ಕೆಲ ದಿನಗಳ ಹಿಂದೆಯಷ್ಟೇ ವಾಟ್ಸಪ್ ಡೆಸ್ಕ್ ಟಾಪ್ ಮೇಲೆಯೂ ಆಡಿಯೋ ಹಾಗೂ ವಿಡಿಯೋ ಕಾಲ್ ಸೌಲಭ್ಯ ಒದಗಿಸಿದೆ.

ಇನ್ನು ಗೌಪ್ಯತಾ ನಿಯಮ ವಿಚಾರವಾಗಿ ವಾಟ್ಸಪ್ ಅಧಿಕ ಸಂಖ್ಯೆಯಲ್ಲಿ ತನ್ನ ಬಳಕೆದಾರರನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಹೊಸ ಫೀಚರ್‍ ಗಳತ್ತ ವಾಟ್ಸಪ್ ಮುಂದಡಿಯಿಟ್ಟಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More