ವಾಟ್ಸಾಪ್, ಝೂಮ್, ಸ್ಕೈಪ್‍ನಂತಹ ಇಂಟರ್ನೆಟ್ ಕರೆ ಮಾಡುವ ಅಪ್ಲಿಕೇಶನ್‌ಗಳಿಗೆ ಶೀಘ್ರದಲ್ಲೇ ಟೆಲಿಕಾಂ ಪರವಾನಗಿ ಅಗತ್ಯ | Telecommunication bill 2022 Apps like Whatsapp, Zoom, Skype and Google Duo May Soon Need Telecom Licence


ಕರಡು ಪ್ರತಿಯ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಲ್ಲಿಸುವುದಕ್ಕೆ ಅಕ್ಟೋಬರ್ 20 ಕೊನೆಯ ದಿನಾಂಕವಾಗಿದೆ.
ಕರಡು ಪ್ರಕಾರ, ಟೆಲಿಕಾಂ ನಿಯಮಗಳ ಅಡಿಯಲ್ಲಿ ಯಾವುದೇ ಪರವಾನಗಿ ಹೊಂದಿರುವವರು ಅಥವಾ ನೋಂದಾಯಿತ ಘಟಕಕ್ಕಾಗಿ ಕೇಂದ್ರ ಸರ್ಕಾರವು…

ವಾಟ್ಸಾಪ್, ಝೂಮ್, ಸ್ಕೈಪ್‍ನಂತಹ ಇಂಟರ್ನೆಟ್ ಕರೆ ಮಾಡುವ ಅಪ್ಲಿಕೇಶನ್‌ಗಳಿಗೆ ಶೀಘ್ರದಲ್ಲೇ ಟೆಲಿಕಾಂ ಪರವಾನಗಿ ಅಗತ್ಯ

ಪ್ರಾತಿನಿಧಿಕ ಚಿತ್ರ

ದೆಹಲಿ: ದೂರಸಂಪರ್ಕ ಕರಡು ಮಸೂದೆ 2022ರ ಪ್ರಕಾರ ಕರೆ ಮತ್ತು ಸಂದೇಶ ಕಳುಹಿಸುವ ಸೇವೆಗಳನ್ನು ಒದಗಿಸುವ ವಾಟ್ಸಾಪ್ (Whatsapp), ಝೂಮ್ (Zoom), ಸ್ಕೈಪ್ (Skype) ಮತ್ತು ಗೂಗಲ್ ಡುವೊ (Google Duo) ನಂತಹ ಅಪ್ಲಿಕೇಶನ್‌ಗಳು ಶೀಘ್ರದಲ್ಲೇ ದೇಶದಲ್ಲಿ ಕಾರ್ಯನಿರ್ವಹಿಸಲು ಪರವಾನಗಿಗಳ ಅಗತ್ಯವಿರಬಹುದು.ಕರಡು ಮಸೂದೆಯು ದೂರಸಂಪರ್ಕ ಸೇವೆಯ ಭಾಗವಾಗಿ OTT ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.  “ದೂರಸಂಪರ್ಕ ಸೇವೆಗಳು ಮತ್ತು ದೂರಸಂಪರ್ಕ ನೆಟ್‌ವರ್ಕ್‌ಗಳನ್ನು ಒದಗಿಸಲು, ಒಂದು ಘಟಕವು ಪರವಾನಗಿಯನ್ನು ಪಡೆಯಬೇಕು” ಎಂದು ಬುಧವಾರ ಸಂಜೆ ಬಿಡುಗಡೆಯಾದ ಕರಡು ಮಸೂದೆ ಹೇಳಿದೆ. ಮಸೂದೆಯಲ್ಲಿ ಸರ್ಕಾರವು ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ಶುಲ್ಕ ಮತ್ತು ದಂಡವನ್ನು ಮನ್ನಾ ಮಾಡುವ ನಿಬಂಧನೆಯನ್ನು ಪ್ರಸ್ತಾಪಿಸಿದೆ. ಟೆಲಿಕಾಂ ಅಥವಾ ಇಂಟರ್ನೆಟ್ ಪೂರೈಕೆದಾರರು ತಮ್ಮ ಪರವಾನಗಿಯನ್ನು ಒಪ್ಪಿಸಿದರೆ ಶುಲ್ಕವನ್ನು ಮರುಪಾವತಿಸಲು ಸಚಿವಾಲಯವು ನಿಬಂಧನೆಯನ್ನು ಪ್ರಸ್ತಾಪಿಸಿದೆ. “ಭಾರತೀಯ ಟೆಲಿಕಾಂ ಮಸೂದೆ 2022 ರ ಕರಡು ಕುರಿತು ನಿಮ್ಮ ಅಭಿಪ್ರಾಯಗಳನ್ನು ಕೇಳುತ್ತಿದ್ದೇನೆ” ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಕರಡು ಮಸೂದೆಯ ಲಿಂಕ್ ಹಂಚಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಕರಡು ಮಸೂದೆ  ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಲ್ಲಿಸುವುದಕ್ಕೆ ಅಕ್ಟೋಬರ್ 20 ಕೊನೆಯ ದಿನಾಂಕವಾಗಿದೆ.
ಕರಡು ಪ್ರಕಾರ, ಟೆಲಿಕಾಂ ನಿಯಮಗಳ ಅಡಿಯಲ್ಲಿ ಯಾವುದೇ ಪರವಾನಗಿ ಹೊಂದಿರುವವರು ಅಥವಾ ನೋಂದಾಯಿತ ಘಟಕಕ್ಕಾಗಿ ಕೇಂದ್ರ ಸರ್ಕಾರವು  ಪ್ರವೇಶ ಶುಲ್ಕಗಳು, ಪರವಾನಗಿ ಶುಲ್ಕಗಳು, ನೋಂದಣಿ ಶುಲ್ಕಗಳು ಅಥವಾ ಯಾವುದೇ ಇತರ ಶುಲ್ಕಗಳು ಅಥವಾ ಶುಲ್ಕ, ಬಡ್ಡಿ, ಹೆಚ್ಚುವರಿ ಶುಲ್ಕಗಳು ಅಥವಾ ದಂಡ ಸೇರಿದಂತೆ ಯಾವುದೇ ಶುಲ್ಕವನ್ನು ಭಾಗಶಃ ಅಥವಾ ಪೂರ್ಣವಾಗಿ ಮನ್ನಾ ಮಾಡಬಹುದು.

ಆದಾಗ್ಯೂ, ಯಾವುದೇ ಸಾರ್ವಜನಿಕ ತುರ್ತು ಪರಿಸ್ಥಿತಿಯಲ್ಲಿ ಅಥವಾ ಸಾರ್ವಜನಿಕ ಸುರಕ್ಷತೆ, ಸಾರ್ವಭೌಮತೆ, ಸಮಗ್ರತೆ ಅಥವಾ ಭಾರತದ ಭದ್ರತೆ, ವಿದೇಶಿ ರಾಜ್ಯಗಳೊಂದಿಗಿನ ಸೌಹಾರ್ದ ಸಂಬಂಧಗಳು, ಸಾರ್ವಜನಿಕ ಸುವ್ಯವಸ್ಥೆ ಅಥವಾ ಅಪರಾಧಕ್ಕೆ ಪ್ರಚೋದನೆಯನ್ನು ತಡೆಗಟ್ಟುವ ಹಿತದೃಷ್ಟಿಯಿಂದ ವಿನಾಯಿತಿಯನ್ನು ನೀಡಲಾಗುವುದಿಲ್ಲ.

ಅಂತಹ ಸಂದರ್ಭಗಳಲ್ಲಿ  ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ವರ್ಗದಿಂದ ಅಥವಾ ಯಾವುದೇ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಯಾವುದೇ ಸಂದೇಶ ಅಥವಾ ಸಂದೇಶಗಳನ್ನು ಯಾವುದೇ ದೂರಸಂಪರ್ಕ ಸೇವೆಗಳು ಅಥವಾ ದೂರಸಂಪರ್ಕ ಜಾಲದಿಂದ ಪ್ರಸರಣಕ್ಕಾಗಿ ತಂದ, ಅಥವಾ ರವಾನಿಸಿದ ಅಥವಾ ಸ್ವೀಕರಿಸಿದ ಸಂದೇಶಗಳನ್ನು ರವಾನಿಸಲಾಗುವುದಿಲ್ಲ ಎಂದು ಕರಡು ಹೇಳಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.