ನವ ದೆಹಲಿ : ತನ್ನ ಗೌಪ್ಯತೆ ವಿಚಾರಕ್ಕೆ ಸಂಬಂಧಿಸಿದಂತೆ ಸವಾಲನ್ನು ಎದುರಿಸುತ್ತಿರುವ ವಾಟ್ಸ್ಯಾಪ್ ಇತ್ತೀಚೆಗೆ ಸುಪ್ರೀಂ ಕೋರ್ಟ್ ನ ಅಂಗಳದ ತನಕವೂ ಹೋಗಿತ್ತು.  ಅದೆಷ್ಟೋ ಮಂದಿ ವಾಟ್ಸ್ಯಾಪ್ ನಿಂದ ಹೊರಬಂದು ಬೇರೆ ಪ್ಲ್ಯಾಟ್ ಫಾರ್ಮ್ ಗಳತ್ತ ಮುಖ ಮಾಡಿದರು.

“ಬಳಕೆದಾರರ ಗೌಪ್ಯತೆಯನ್ನು ಕಾಪಾಡುವುದು ಪ್ರಮುಖ ಕರ್ತವ್ಯ” ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ವಾಟ್ಸ್ಯಾಪ್ ಗೆ ಸಲಹೆ ನೀಡಿತ್ತು.

ಓದಿ : ಡಾ.ರಾಜ್ ಕುಮಾರ್ ಪ್ರತಿಮೆ ಕುರಿತು ಅಗೌರವ?; ಕ್ಷಮೆಯಾಚಿಸಿದ ಶಾಸಕ ಹ್ಯಾರಿಸ್

ಪ್ರಸ್ತುತ ವಾಟ್ಸ್ಯಾಪ್ ನವೀಕರಣದ ಅಡಿಯಲ್ಲಿ, ಆ್ಯಪ್ ನಲ್ಲಿ ಲಾಗ್ ಔಟ್ ಫೆಸಿಲಿಟಿ(ವೈಶಿಷ್ಟ್ಯ)ಯನ್ನು ಪರಿಚಯಿಸುತ್ತಿದೆ. ವಾಟ್ಸ್ಯಾಪ್ ನ್ನು ಹೆಚ್ಚಿನವರು ಅನೌಪಚಾರಿಕತೆಗೆ ಮಾತ್ರವಲ್ಲದೆ ಔಪಚಾರಿಕ ಸಂವಹನಕ್ಕೂ ಕೂಡ ಬಳಸುತ್ತಿದ್ದಾರೆ. ದಿನವಿಡೀ ಬರುವ ವಾಟ್ಸ್ಯಾಪ್ ನೋಟಿಫಿಕೇಶನ್ ಗಳಿಂದ ಕೆಲವರಿಗೆ ಕಿರಿಕಿರಿ ಕೂಡ ಆಗಬಹುದು.  ಆದರೆ, ಫೇಸ್‌ ಬುಕ್, ಟ್ವಿಟರ್‌ ನಂತಹ ಇತರ ಸಾಮಾಜಿಕ ತಾಣಗಳಂತೆ, ಇದರಲ್ಲಿ ಲಾಗ್ ಔಟ್ ಆಪ್ಶನ್ ಇಲ್ಲ. ಇದೀಗ ವಾಟ್ಸ್ಯಾಪ್ ತನ್ನ ಬಳಕೆದಾರರಿಗೆ ತನ್ನ ಅಪ್ ಕಮಿಂಗ್ ವರ್ಶನ್ ನಲ್ಲಿ ಲಾಗ್ ಔಟ್ ಫೆಸಿಲಿಟಿ ನೀಡುತ್ತಿದ್ದು, ಇದು ಗೌಪ್ಯತೆಯ ವಿಚಾರದಲ್ಲೂ ಇದು ಸಹಕಾರಿಯಾಗಲಿದೆ.

ಈ ವೈಶಿಷ್ಟ್ಯವನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ ಮತ್ತು ಇದನ್ನು ಟೆಸ್ಟ್ ಫ್ಲೈಟ್ ಬೀಟಾ ಪ್ರೊಗ್ರಾಮ್ ಅಡಿಯಲ್ಲಿ ನವೀಕರಿಸಲಾಗುತ್ತಿದೆ ಎಂದು WABetaInfo ತಿಳಿಸಿದೆ.

ಇನ್ನೂ ಸಾರ್ವಜನಿಕಗೊಳಿಸಿಲ್ಲ ಈ ಅಪ್ಡೇಟ್

ವಾಟ್ಸ್ಯಾಪ್ ನಲ್ಲಿ ಲಾಗ್ ಔಟ್ ವೈಶಿಷ್ಟ್ಯವನ್ನು ನೀಡಲಾಗಿಲ್ಲ. ಯಾಕೆಂದರೆ, ಈ ವೈಶಿಷ್ಟ್ಯವನ್ನು ಇದುವರೆಗೆ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿಲ್ಲ. ಒಂದೊಮ್ಮೆ ಈ ಲಾಗ್ ಔಟ್ ವೈಶಿಷ್ಟ್ಯ ಪರಿಚಯಿಸಿದ ಬಳಿಕ ಡಿಲೀಟ್ ಅಕೌಂಟ್ ವೈಶಿಷ್ಟ್ಯ ಕಣ್ಮರೆಯಾಗಲಿದೆ ಎಂದೂ ಕೂಡ ಹೇಳಲಾಗುತ್ತಿದೆ.  ಪ್ರಸ್ತುತ ಸಾಮಾನ್ಯ ಬಳಕೆದಾರರಿಗೆ ಕೇವಲ ವಾಟ್ಸ್ಯಾಪ್ ನ ವೆಬ್ ವರ್ಶನ್ ನಲ್ಲಿ ಮಾತ್ರ ಲಾಗ್ ಔಟ್ ವೈಶಿಷ್ಟ್ಯ ನೀಡಲಾಗಿದೆ.

ಓದಿ : ಮೀಸಲಾತಿ ಪರಿಸ್ಥಿತಿ ನಿಭಾಯಿಸುವುದು ಬಿಎಸ್ ವೈಗೆ ಕಷ್ಟ : ಕೆ.ಸಿ.ಪುಟ್ಟಸಿದ್ಧ ಶೆಟ್ಟಿ

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More