ಬಳಕೆದಾರರ ವಾಟ್ಸಾಪ್ ಖಾತೆಗೆ ಪ್ರವೇಶ ಪಡೆಯಲು ಹ್ಯಾಕರ್‌ ಗಳು ಹೊಸ ಮಾರ್ಗಗಳನ್ನು ಹೊಂದಿದ್ದಾರೆ ಮತ್ತು ಕೆಲವು ಜನರು ಈಗಾಗಲೇ ಅದರಿಂದ ಬಳಲುತ್ತಿದ್ದಾರೆ. ನಿಮ್ಮ ವಾಟ್ಸಾಪ್ ಖಾತೆಯನ್ನು ಯಾರಾದರೂ ಹ್ಯಾಕ್ ಮಾಡಬಾರದು ಎಂದು ನೀವು ಬಯಸಿದರೆ, ತಕ್ಷಣ ನಿಮ್ಮ ಸೆಟ್ಟಿಂಗ್‌ಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. ಸೈಬರ್‌ ಸೆಕ್ಯುರಿಟಿ ತಜ್ಞ ಜ್ಹಾಕ್ ಡಾಫ್‌ ಮನ್ ಅವರ ಪ್ರಕಾರ, ಹ್ಯಾಕರ್‌ಗಳು ನಿಮ್ಮ ವಾಟ್ಸಾಪ್ ಅನ್ನು ತಮ್ಮ ಡಿವೈಸ್ ಲಾಗ್ ಇನ್ ಮಾಡುತ್ತಾರೆ ಮತ್ತು ಅವರು ಕದಿಯಲು ಬಯಸುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಸೈಬರ್ ತಜ್ಞರು ಈ ವಿಧಾನವನ್ನು ವಿವರವಾಗಿ ವಿವರಿಸಿದ್ದಾರೆ.

ಓದಿ: Watch: ಬಸ್ರೂರ್ ನಿಂದ ಬಾಲಿವುಡ್ ವರೆಗೆ…ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಜತೆ ಉದಯವಾಣಿ

ನ್ಯೂ ಡಿವೈಸ್ ಗಳಲ್ಲಿ ಬಳಕೆದಾರರು ವಾಟ್ಸಾಪ್ ಖಾತೆಗೆ ಲಾಗ್ ಇನ್ ಮಾಡಿದಾಗಲೆಲ್ಲಾ, ವಾಟ್ಸಾಪ್ ನಿಮ್ಮ ನೋಂದಾಯಿತ ಫೋನ್ ಸಂಖ್ಯೆಗೆ ಪರಿಶೀಲನೆ ಎಸ್‌ ಎಂ ಎಸ್ ಕಳುಹಿಸುತ್ತದೆ ಮತ್ತು ವಂಚನೆಗಾರ ನಿಮ್ಮ ಫೋನ್ ಅನ್ನು ಕೈಯಲ್ಲಿ ಇಟ್ಟುಕೊಂಡು ಲಾಕ್ ಪರದೆಯಲ್ಲಿ ಎಸ್‌ ಎಂ ಎಸ್ ಪೂರ್ವ ವೀಕ್ಷಣೆಯನ್ನು ತೋರಿಸಲು ಸೆಟ್ಟಿಂಗ್ ಅನ್ನು ಹೊಂದಿಸಿದರೆ, ನಂತರ ನೀವು ದೊಡ್ಡ ಅಪಾಯದಲ್ಲಿದ್ದೀರಿ ಎಂದರ್ಥ.

ಇದಲ್ಲದೆ, ಇತ್ತೀಚಿಗಿನ ದಿನಗಳಲ್ಲಿ ಅಂತಹ ಅನೇಕ ಮಾಲ್ವೇರ್ಗಳು ಬಂದಿವೆ, ಇದರ ಮೂಲಕ ನಿಮ್ಮ ಫೋನ್‌ ನಲ್ಲಿ ಬರುವ ಈ 6 ಅಂಕಿಯ ಕೋಡ್ ಅನ್ನು ಹ್ಯಾಕರ್‌ ಗಳು ಪಡೆಯಬಹುದು. ನೀವು ಈ ಕೋಡ್ ಅನ್ನು ನಮೂದಿಸಿದ ತಕ್ಷಣ, ನಿಮ್ಮ ವಾಟ್ಸಾಪ್ ಖಾತೆಯನ್ನು ಅವರ ಸಾಧನದಲ್ಲಿ ಲಾಗ್ ಮಾಡಲಾಗುತ್ತದೆ. ನಿಮ್ಮ ಖಾತೆಯನ್ನು ಬಳಸುವ ಮೂಲಕ, ಮೋಸಗಾರರು ನಿಮ್ಮ ಹತ್ತಿರವಿರುವ ಜನರಿಂದ ಹಣವನ್ನು ಕೇಳಬಹುದು. ಈ ಹ್ಯಾಕ್  ಆಗುವುದರಿಂದ ತಪ್ಪಿಸಿಕೊಳ್ಳಲು, ನಿಮ್ಮ ವಾಟ್ಸಾಪ್ ಸೆಟ್ಟಿಂಗ್‌ ಗಳೊಂದಿಗೆ ನೀವು ಈ ಕೆಳಗೆ ಸೂಚಿಸಿರುವಂತೆ ಮಾಡಬಹುದು.

ಈ ಸೆಟ್ಟಿಂಗ್ ಅನ್ನು ಹೇಗೆ ಸಕ್ರಿಯಗೊಳಿಸುವುದು:

ಎರಡು-ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಲು,

ನಿಮ್ಮ ವಾಟ್ಸಾಪ್ ಅನ್ನು ನೀವು ತೆರೆಯಬೇಕು ಇದರ ನಂತರ ಸೆಟ್ಟಿಂಗ್ಸ್ ಗೆ  ಹೋಗಿ ನಂತರ ಅಕೌಂಟ್ ಮೇಲೆ ಟ್ಯಾಪ್ ಮಾಡಿ.

ಇಲ್ಲಿ ಟೂ ಸ್ಟೆಪ್ ವೆರಿಫಿಕೇಶನ್ ಆಯ್ಕೆಯನ್ನು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Enable ನ್ನು ಟ್ಯಾಪ್ ಮಾಡಿ ನಂತರ, ನಿಮ್ಮ ಆಯ್ಕೆಯ ಕೋಡ್ ಅನ್ನು ಹೊಂದಿಸಿ.

ಕನ್ಫರ್ಮೇಶನ್ ಕೇಳುತ್ತದೆ. ಪುನಃ ನಿಮ್ಮ ಕೋಡ್ ನ್ನು ಟೈಪ್ ಮಾಡಿ. ನಿಮ್ಮ ಅಧಿಕೃತ ಈಮೇಲ್ ಕೇಳಲಾಗುತ್ತದೆ ಸಕ್ರಿಯಗೊಳಿಸಿ.

ಓದಿ: ದೆಹಲಿ ಹಿಂಸೆಯ ಹಿಂದೆ ಕಾಂಗ್ರೆಸ್ ಪಕ್ಷ: ಖರ್ಗೆ ಹೇಳಿಕೆಗೆ ನಳಿನ್‍ ಕುಮಾರ್ ತಿರುಗೇಟು

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More