‘ವಾಟ್​ ಲಗಾ ದೇಂಗೆ..’ ಎಂದು ಮತ್ತೆ ಅಬ್ಬರಿಸಿದ ವಿಜಯ್ ದೇವರಕೊಂಡ | Vijay Devarakonda starrer Liger Movie New song Waat Laga Denge released


ಸ್ಲಂ ಹುಡುಗನೋರ್ವ ವಿಶ್ವ ಬಾಕ್ಸಿಂಗ್​ನಲ್ಲಿ ಮಿಂಚುವ ಕಥೆಯನ್ನು ‘ಲೈಗರ್’ ಸಿನಿಮಾ ಹೇಳಲಿದೆ ಎಂಬುದಕ್ಕೆ ಈಗಾಗಲೇ ರಿಲೀಸ್ ಆದ ಟೀಸರ್ ಹಾಗೂ ಟ್ರೇಲರ್ ಸಾಕ್ಷ್ಯ ನೀಡಿದೆ. ಈಗ ರಿಲೀಸ್ ಆಗಿರುವ ಸಾಂಗ್ ಕೂಡ ಅದೇ ರೀತಿಯಲ್ಲಿ ಇದೆ.

ನಟ ವಿಜಯ್ ದೇವರಕೊಂಡ (Vijay Devarakonda) ಅವರ ‘ಲೈಗರ್’ ಸಿನಿಮಾ (Liger Movie) ರಿಲೀಸ್​ಗೂ ಮೊದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿತ್ತು. ಈಗ ಚಿತ್ರತಂಡ ಹೊಸ ಸಾಂಗ್ ರಿಲೀಸ್ ಮಾಡಿದೆ. ‘ವಾಟ್​ ಲಗಾ ದೇಂಗೆ..’ ಎಂಬ ಶೀರ್ಷಿಕೆ ಅಡಿಯಲ್ಲಿ ಮೂಡಿ ಬಂದ ಈ ಹಾಡು ಸಾಕಷ್ಟು ಸದ್ದು ಮಾಡುತ್ತಿದೆ. ಈ  ಹಾಡು ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಸ್ಲಂ ಹುಡುಗನೋರ್ವ ವಿಶ್ವ ಬಾಕ್ಸಿಂಗ್​ನಲ್ಲಿ ಮಿಂಚುವ ಕಥೆಯನ್ನು ‘ಲೈಗರ್’ ಸಿನಿಮಾ ಹೇಳಲಿದೆ ಎಂಬುದಕ್ಕೆ ಈಗಾಗಲೇ ರಿಲೀಸ್ ಆದ ಟೀಸರ್ ಹಾಗೂ ಟ್ರೇಲರ್ ಸಾಕ್ಷ್ಯ ನೀಡಿದೆ. ಈಗ ರಿಲೀಸ್ ಆಗಿರುವ ಸಾಂಗ್ ಕೂಡ ಅದೇ ರೀತಿಯಲ್ಲಿ ಇದೆ. ಈ ಹಾಡು ಸಿನಿಮಾದ ಕಥೆಯ ಸಾರವನ್ನು ಪ್ರೇಕ್ಷಕರಿಗೆ ಬಿಟ್ಟುಕೊಟ್ಟಿದೆ. ಈ ತಿಂಗಳ ಆರಂಭದಲ್ಲಿ ರಿಲೀಸ್ ಆದ ‘ಅಕ್ಡಿ ಪಕ್ಡಿ..’ ಹಾಡು ಸೂಪರ್ ಹಿಟ್ ಆಯಿತು. ಪಾರ್ಟಿ ಸಾಂಗ್ ರೀತಿಯಲ್ಲಿ ಬಂದ ಈ ಸಾಂಗ್​​ಅನ್ನು ಫ್ಯಾನ್ಸ್​ ಇಷ್ಟಪಟ್ಟಿದ್ದಾರೆ. ಈಗ ಬಿಡುಗಡೆ ಆಗಿರುವ ‘ಲೈಗರ್​​’ನ ‘ವಾಟ್​ ಲಗಾ ದೇಂಗೆ..’ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ.

‘ಲೈಗರ್​​’ ವಿಜಯ್ ದೇವರಕೊಂಡ ಅವರ ಮೊದಲ ಹಿಂದಿ ಸಿನಿಮಾ. ಸಾಮಾನ್ಯವಾಗಿ ಒಂದು ಚಿತ್ರರಂಗದಿಂದ ಮತ್ತೊಂದು ಚಿತ್ರರಂಗಕ್ಕೆ ಕಾಲಿಡಬೇಕು ಎಂದರೆ ಸಾಕಷ್ಟು ಸಿದ್ಧತೆ ಬೇಕು. ಅದೇ ರೀತಿ ವಿಜಯ್ ದೇವರಕೊಂಡ ಕೂಡ ಸಾಕಷ್ಟು ಸಿದ್ಧತೆ ಮಾಡಿಕೊಂಡೇ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ದೇಹವನ್ನು ಸಾಕಷ್ಟು ಹುರಿಗೊಳಿಸಿಕೊಂಡಿದ್ದಾರೆ. ಇಷ್ಟು ದಿನ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ದೇವರಕೊಂಡ ಅವರು ಈ ಚಿತ್ರದಲ್ಲಿ ಭಿನ್ನ ಗೆಟಪ್ ತೊಟ್ಟಿದ್ದಾರೆ.

TV9 Kannada


Leave a Reply

Your email address will not be published. Required fields are marked *