ನವದೆಹಲಿ: ಭಾರತಕ್ಕೆ ನಿನ್ನೆ ಮತ್ತೆ 3 ರಫೇಲ್ ಫೈಟರ್​ ಜೆಟ್​​ಗಳು ಆಗಮಿಸಿದ್ದು ಸದ್ಯ ಈವರೆಗೆ 23 ರಫೇಲ್​ಗಳು ಭಾರತೀಯ ಸೇನೆ ಸೇರಿದಂತಾಗಿದೆ.

ವರದಿಗಳ ಪ್ರಕಾರ ಈ 3 ರಫೇಲ್ ವಿಮಾನಗಳು ಮೇ 20 ರಂದೇ ಫ್ರಾನ್ಸ್​ನ ಮೆರಿಗ್ನಾಕ್-ಬೊರ್ಡೆಯುಕ್ಸ್​ನಿಂದ ಹೊರಡಬೇಕಿತ್ತು. ಆದ್ರೆ ಯುಎಇಯಿಂದ ಮಿಡರ್​ ಏರ್​ ರೀಫಿಲ್ಲರ್ ಸಾಧ್ಯವಾಗದ ಹಿನ್ನೆಲೆ ನಿನ್ನೆ ಫ್ರಾನ್ಸ್​ನಿಂದ ಹೊರಟು ಅಂಬಾಲಾ ಏರ್​ಬೇಸ್​​ಗೆ ಬಂದಿಳಿದಿವೆ. ಇನ್ನು ಭಾರತ ಒಟ್ಟು 36 ರಫೇಲ್​ ವಿಮಾನಗಳನ್ನು ಖರೀದಿಸಿದ್ದು ಸದ್ಯ 23 ರಫೇಲ್​ ವಿಮಾನಗಳು ಬಂದಿಳಿದಂತಾಗಿದೆ. ಇನ್ನು ಭಾರತ ರಫೇಲ್ ಹೊರತು ಪಡಿಸಿ 126 ಮೀಡಿಯಮ್ ಮಲ್ಟಿ ರೋಲ್ ಕಾಂಬಾಟ್ ಏರ್​ಕ್ರಾಫ್ಟ್​​ಗಳನ್ನೂ ಖರೀದಿಸಲು ಮುಂದಾಗಿದೆ ಎನ್ನಲಾಗಿದೆ.

The post ವಾಯುಸೇನೆಗೆ ಮತ್ತಷ್ಟು ಪವರ್: ಭಾರತಕ್ಕೆ ಬಂದಿಳಿದ 3 ರಫೇಲ್ ಫೈಟರ್ ಜೆಟ್ಸ್ appeared first on News First Kannada.

Source: newsfirstlive.com

Source link