ವಾಯು ಮಾಲಿನ್ಯದ ಎಫೆಕ್ಟ್; ದೆಹಲಿಯಲ್ಲಿ ಕಟ್ಟಡ ನಿರ್ಮಾಣದ ಮೇಲಿನ ನಿಷೇಧ ಮುಂದೂಡಿಕೆ | Air pollution: Ban on construction demolition activities extended in Newdelhi


ವಾಯು ಮಾಲಿನ್ಯದ ಎಫೆಕ್ಟ್; ದೆಹಲಿಯಲ್ಲಿ ಕಟ್ಟಡ ನಿರ್ಮಾಣದ ಮೇಲಿನ ನಿಷೇಧ ಮುಂದೂಡಿಕೆ

ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ಕಟ್ಟಡ ನಿರ್ಮಾಣದ ಮೇಲೆ ಹೇರಿದ್ದ ನಿರ್ಬಂಧವನ್ನು ಮುಂದುವರಿಸಲಾಗುವುದು. ಮುಂದಿನ ಆದೇಶದವರೆಗೆ ಕಟ್ಟಡಗಳ ನಿರ್ಮಾಣ ನಿರ್ಬಂಧ ಮುಂದುವರೆಯಲಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಈ ನಿರ್ಬಂಧ ವಿಧಿಸಲಾಗಿದೆ. ಕಟ್ಟಡಗಳ ನಿರ್ಮಾಣ ಹಾಗೂ ನೆಲಸಮ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಕೂಲಿ ಕಾರ್ಮಿಕರ ಖಾತೆಗೆ 5,000 ರೂ. ಹಾಕಲು ನಿರ್ಧಾರ ಮಾಡಲಾಗಿದೆ. ಡಿಸೆಂಬರ್ 7ರವರೆಗೆ ಟ್ರಕ್‌ಗಳಿಗೆ ದೆಹಲಿ ಪ್ರವೇಶ ನಿಷೇಧಿಸಲಾಗಿದೆ.

ಅಗತ್ಯ ವಸ್ತುಗಳ ಸರಬರಾಜು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸಿಎನ್​ಜಿ, ಎಲೆಕ್ಟ್ರಿಕ್ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ದೆಹಲಿಯ ಪರಿಸರ ಇಲಾಖೆ ಸಚಿವ ಗೋಪಾಲ್‌ ರೈ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ತನ್ನ ಡೊಮೇನ್‌ಗೆ ಒಳಪಡುವ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ವಿಶೇಷ ಪೀಠವು ಡಿಸೆಂಬರ್ 2ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿದೆ. ನವೆಂಬರ್ 24ರಂದು ಮಧ್ಯಂತರ ಕ್ರಮವಾಗಿ ನ್ಯಾಯಾಲಯ ದೆಹಲಿ ಎನ್‌ಸಿಆರ್‌ನಲ್ಲಿ ನಿರ್ಮಾಣ ನಿಷೇಧವನ್ನು ವಿಧಿಸಿತ್ತು.

ಇದನ್ನೂ ಓದಿ: ಸಲ್ಮಾನ್​ ಖುರ್ಷಿದ್​ ಪುಸ್ತಕ ನಿಷೇಧಿಸಲಾಗದು, ನೀವೇ ಓದುವುದನ್ನು ಬಿಡಬಹುದು: ದೆಹಲಿ ಹೈಕೋರ್ಟ್​​

ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ; ಮುಂದಿನ ಆದೇಶದವರೆಗೆ ಶಾಲೆಗಳಿಗೆ ರಜೆ ಘೋಷಣೆ

TV9 Kannada


Leave a Reply

Your email address will not be published. Required fields are marked *