‘ವಾಯ್ಲೆನ್ಸ್ ವಾಯ್ಲೆನ್ಸ್ ವಾಯ್ಲೆನ್ಸ್​’ ಶೈಲಿಯಲ್ಲಿ ಬಿಬಿಎಂಪಿ ಕಾಲೆಳೆದ ನೆಟ್ಟಿಗರು; ವೈರಲ್ ಆಗುತ್ತಿದೆ ವಿಡಿಯೋ | Internet users trolled BBMP in KGF Chapter 2 Style


‘ವಾಯ್ಲೆನ್ಸ್ ವಾಯ್ಲೆನ್ಸ್ ವಾಯ್ಲೆನ್ಸ್​’ ಶೈಲಿಯಲ್ಲಿ ಬಿಬಿಎಂಪಿ ಕಾಲೆಳೆದ ನೆಟ್ಟಿಗರು; ವೈರಲ್ ಆಗುತ್ತಿದೆ ವಿಡಿಯೋ

ಯಶ್

‘ವಾಯ್ಲೆನ್ಸ್  ವಾಯ್ಲೆನ್ಸ್  ವಾಯ್ಲೆನ್ಸ್ ..​’ ಇದು ಸದ್ಯ ಸಾಕಷ್ಟು ಟ್ರೆಂಡಿಂಗ್​ನಲ್ಲಿ ಇರುವ ಡೈಲಾಗ್​. ‘ಕೆಜಿಎಫ್: ಚಾಪ್ಟರ್​2’  (KGF Chapter 2)ಟ್ರೇಲರ್​ನಲ್ಲಿ ಈ ಡೈಲಾಗ್​ ಇತ್ತು. ಈ ಟ್ರೇಲರ್ ರಿಲೀಸ್ ಆದ ನಂತರದಲ್ಲಿ ಈ ಡೈಲಾಗ್​ ಸಾಕಷ್ಟು ವೈರಲ್ ಆಗುತ್ತಿದೆ. ನಾನಾ ಕಡೆಗಳಲ್ಲಿ, ನಾನಾ ರೀತಿಯಲ್ಲಿ ಈ ಡೈಲಾಗ್ ಬಳಕೆ ಆಗುತ್ತಿದೆ. ಈ ಡೈಲಾಗ್​ ಇರುವ ಮದುವೆ ಆಮಂತ್ರಣ ಪತ್ರ ಇತ್ತೀಚೆಗೆ ವೈರಲ್ ಆಗಿತ್ತು. ಈಗ ಇದಕ್ಕೆ ಹೊಸ ಸೇರ್ಪಡೆ ಆಗಿದೆ. ಈ ಡೈಲಾಗ್​ ಮೂಲಕ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ನೆಟ್ಟಿಗರು ಕಾಲೆಳೆದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

‘ಕೆಜಿಎಫ್ 2’ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಏಪ್ರಿಲ್ 14ರಂದು ರಿಲೀಸ್ ಆದ ಈ ಸಿನಿಮಾ ತೆರೆಗೆ ಬಂದು ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಿದೆ. ಬಾಲಿವುಡ್​ನಿಂದ ಈ ಸಿನಿಮಾ 268 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾದ ಹಲವು ಡೈಲಾಗ್​ಗಳನ್ನು ನಾನಾ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ‘ವಾಯ್ಲೆನ್ಸ್ ..’ ಡೈಲಾಗ್ ಕೂಡ ಒಂದು.

ಬೆಂಗಳೂರಿನ ರಸ್ತೆಗಳಲ್ಲಿ ಒಮ್ಮೆ ಓಡಾಡಿದರೆ ಯತೇಚ್ಛವಾಗಿ ಗುಂಡಿಗಳು ಸಿಗುತ್ತವೆ. ಕೆಲವು ಕಡೆಗಳಲ್ಲಿ ಬಿಬಿಎಂಪಿ ಇದನ್ನು ಮುಚ್ಚುವ ಕೆಲಸ ಮಾಡಿದೆಯಾದರೂ ಬಹುತೇಕ ಕಡೆಗಳಲ್ಲಿ ಈ ಗುಂಡಿ ಹಾಗೆಯೇ ಇದೆ. ಇನ್ನು, ಈ ಗುಂಡಿಗಳಲ್ಲಿ ಬಿದ್ದು ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯನ್ನು ನಾನಾ ರೀತಿಯಲ್ಲಿ ಟ್ರೋಲ್ ಮಾಡಲಾಗಿದೆ. ಆದರೂ, ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲ. ಈಗ ‘ಕೆಜಿಎಫ್ 2’ ಡೈಲಾಗ್ ಬಳಸಿ ಬಿಬಿಎಂಪಿಯನ್ನು ಟ್ರೋಲ್ ಮಾಡಲಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ‘ವಾಯ್ಲೆನ್ಸ್​..’ ದೃಶ್ಯವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ, ‘ಗುಂಡಿ, ಗುಂಡಿ, ಗುಂಡಿ.. ಐ ಡೋಂಟ್​ ಲೈಕ್ ಇಟ್​. ಐ ಅವಾಯ್ಡ್​​. ಬಟ್ ಬಿಬಿಎಂಪಿ ಲೈಕ್ಸ್ ಗುಂಡಿ. ವಿ ಕಾಂಟ್ ಅವಾಯ್ಡ್​’ ಎನ್ನುವ ಡೈಲಾಗ್ ಸೇರಿಸಲಾಗಿದೆ. ಬೆಂಗಳೂರಿನ ರಸ್ತೆಗುಂಡಿಗಳ ಫೋಟೋಗಳು ಇದರಲ್ಲಿವೆ. ಇದಕ್ಕೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಕೆಲವರು ಈ ವಿಡಿಯೋ ಮಾಡಿದವರ ಕ್ರಿಯೇಟಿವಿಟಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲವರು ಬೆಂಗಳೂರಿನ ರಸ್ತೆ ಮೇಲಿರುವ ಗುಂಡಿಗಳ ಫೋಟೋವನ್ನು ಹಾಕುತ್ತಿದ್ದಾರೆ.

ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ಕೆಜಿಎಫ್ 2 ಡೈಲಾಗ್:

ಚಂದ್ರಶೇಖರ್​ ಮತ್ತು ಶ್ವೇತಾ ಎಂಬುವವರು ಮೇ 13ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬೆಳಗಾವಿಯಲ್ಲಿ ಇವರ ಮದುವೆ ನಡೆಯಲಿದೆ. ವಿವಾಹದ ಆಮಂತ್ರಣ ಪತ್ರಿಕೆಯನ್ನು ಇಂಗ್ಲಿಷ್​ನಲ್ಲಿ ಮುದ್ರಿಸಲಾಗಿದೆ. ಇದರಲ್ಲಿ ಈ ರೀತಿ ಒಂದು ಸಾಲು ಬರೆಯಲಾಗಿದೆ. ‘ಮ್ಯಾರೇಜ್​ ಮ್ಯಾರೇಜ್​ ಮ್ಯಾರೇಜ್​.. ಐ ಡೋಂಟ್​ ಲೈಕ್​ ಇಟ್​. ಐ ಅವಾಯ್ಡ್​.. ಬಟ್​ ಮೈ ರಿಲೇಟಿವ್ಸ್​ ಲೈಕ್​ ಮ್ಯಾರೇಜ್​. ಐ ಕಾಂಟ್​ ಅವಾಯ್ಡ್​’ ಎಂದು ಬರೆದಿರುವುದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

TV9 Kannada


Leave a Reply

Your email address will not be published. Required fields are marked *