ವಾರಣಾಸಿಯಲ್ಲಿ ಭಿಕ್ಷೆ ಬೇಡುತ್ತಾ ಬದುಕುತ್ತಿರುವ ಪದವೀಧರೆ ಸ್ವಾತಿಗೆ ಬದುಕು ಕಟ್ಟಿಕೊಳ್ಳಲು ಆಸರೆ ಬೇಕಿದೆ

Swathi

ಸ್ವಾತಿ ಹೆಸರಿನ ಈ ಯುವತಿಯ ಬದುಕು ಬಹಳ ನಿಕೃಷ್ಟ. ಈಕೆ ವಾರಾಣಾಸಿಯ ಆಸ್ಸೀ ಘಾಟ್ನಲ್ಲಿ ಭಿಕ್ಷೆ ಬೇಡುತ್ತಾ ಬದುಕು ಸವೆಸುತ್ತಿದ್ದಾಳೆ. ಈಕೆಯ ಬದುಕಿನಲ್ಲಿ ಏನೇನೆಲ್ಲ ನಡೆದು ಹೋಗಿದೆಯೋ ಯಾರಿಗೂ ಗೊತ್ತಿಲ್ಲ. ಅಂದಹಾಗೆ ನತದೃಷ್ಟ ಯುವತಿಯ ಹೆಸರು ಸ್ವಾತಿ. ತಾನು ದಕ್ಷಿಣ ಭಾರತದವಳೆಂದು ಹೇಳುತ್ತಾಳೆ. ಆಕೆಯ ಹೆಸರನ್ನು ಆಧಾರವಾಗಿಟ್ಟುಕೊಂಡು ನೋಡಿದರೆ, ಆಂಧ್ರ ಪ್ರದೇಶ ಇಲ್ಲವೇ ತೆಲಂಗಾಣ ರಾಜ್ಯದವಳಿರಬಹುದು ಅನಿಸುತ್ತದೆ. ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದಿರುವುದಾಗಿ ಹೇಳುತ್ತಾಳೆ. ಇಂಗ್ಲಿಷ್ನಲ್ಲಿ ಮಾತಾಡುವ ಪ್ರಯತ್ನ ಮಾಡುತ್ತಾಳಾದರೂ ತಡವರಿಸುತ್ತಾಳೆ.

ಬನಾರಸ್ ಹಿಂದೂ ಯೂನಿವರ್ಸಿಟಿಯ ವಿದ್ಯಾರ್ಥಿಯೊಬ್ಬ ಅಕೆಯೊಂದಿಗೆ ಮಾತಾಡಿದ್ದಾನೆ. ಆಗಲೇ ಆಕೆಯ ಬಗ್ಗೆ ಒಂದಿಷ್ಟು ಮಾಹಿತಿ ಸಿಕ್ಕಿದ್ದು. ಹೆರಿಗೆಯ ಸಮಯದಲ್ಲಿ ಆಕೆಯ ಬಲಗೈ ಪಾರ್ಶ್ವವಾಯುಗೆ ಈಡಾಗಿದೆ. ಅಂದರೆ, ಸ್ವಾತಿಯ ಮದುವೆಯಾಗಿದೆ ಅಂತಾಯ್ತು. ಆಕೆಗೆ ಮಗುವನ್ನು ಕರುಣಿಸಿದವನು ಎಲ್ಲಿದ್ದಾನೋ?

ಪಾರ್ಶ್ವವಾಯು ಪೀಡಿತಳಾದ ನಂತರ ಅಕೆಯಿಂದ ಏನೂ ಪ್ರಯೋಜನವಿಲ್ಲ ಅಂತ ಗಂಡನ ಮನೆಯವರು ಹೊರದಬ್ಬಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಸ್ವಾತಿ ತುಂಬಾ ವಿಚಲಿತಳಾಗಿದ್ದಾಳೆ. ಆಕೆಯ ಮಾನಸಿಕ ಸ್ವಾಸ್ಥ್ಯ ಸರಿ ಇದ್ದಂತಿಲ್ಲ, ಅಕೆಗೆ ನೌಕರಿ ಕೊಡಿಸುವ ಮೊದಲು ವೈದ್ಯಕೀಯ ನೆರವು ಒದಗಿಸುವ ಅವಶ್ಯಕತೆಯಿದೆ.

ಆಕೆಯನ್ನು ಕರೆದೊಯ್ದು ಕೌನ್ಸೆಲಿಂಗ್ ಮಾಡಿದರೆ, ವಿಷಯಗಳು ಬೆಳಕಿಗೆ ಬರಬಹುದು. ಆಕೆ ಮಗುವನ್ನು ಎಲ್ಲಿ ಬಿಟ್ಟಿದ್ದಾಳೋ? ಆಕೆಯ ಮುಗ್ಧ ನೋಟ ಮತ್ತು ಮಾತುಗಳ ಹಿಂದೆ ನಿಸ್ಸಂಶಯವಾಗಿ ಸಾಕಷ್ಟು ನೋವಿದೆ.

ಇದನ್ನೂ ಓದಿ:   ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್​ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಪಿಡಬ್ಲೂಡಿ ಶಾಂತಗೌಡ; ವಿಡಿಯೋ ನೋಡಿ

TV9 Kannada

Leave a comment

Your email address will not be published. Required fields are marked *