ಬಿಗ್​ಬಾಸ್​ ಸೀಸನ್​ 8 ನ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಕಿಚ್ಚಾ ಸುದೀಪ್​ ಮತ್ತೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.. ಕಿಚ್ಚನಿಲ್ಲದ ಬಿಗ್​ಬಾಸ್​ ಸ್ಟೇಜ್​ ನೋಡಿ ಜನರ ಜೊತೆಗೆ ಕಂಟೆಸ್ಟೆಂಟ್​ಗಳು ಬೇಸರಗೊಂಡಿದ್ರು, ಇದೀಗ ಕಿಚ್ಚನ ಆಗಮನಕ್ಕೆ ಪ್ರತಿಯೊಬ್ಬರೂ ಸಖತ್​ ಖುಷಿ ಪಟ್ಟಿದ್ದಾರೆ.

ನಿನ್ನೆ ವಾರದಕಥೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಫನ್​, ಟಾಸ್ಕ್​, ಜೊತೆ ಬೈಗುಳ ಕೂಡಾ ಇತ್ತು. ಕಂಟೆಸ್ಟೆಂಟ್​ಗಳಿಗೆ ಕಿಚ್ಚ ಅವರ ತಪ್ಪುಗಳನ್ನು ಬೈಗುಳದ ಮೂಲಕ ತಿದ್ದುವ ಪ್ರಯತ್ನ ಮಾಡಿದ್ರು. ಭರ್ಜರಿಯಾಗಿ ಎಂಟ್ರಿ ಕೊಟ್ಟ ಸುದೀಪ್​, ಕಂಟೆಸ್ಟೆಂಟ್​ಗಳು ಮೊದಲಿಗಿಂತ ಯಾರು ಎಷ್ಟು ಚೇಂಜ್​ ಆಗಿದ್ದಾರೆ, ಯಾರು ಯಾವ ಹಂತದಲ್ಲಿದ್ದಾರೆ. ಅವರ ಫ್ರೆಂಡ್​ಶಿಪ್​ ಹೇಗಿದೆ, ಮನಸ್ತಾಪ ಎಷ್ಟಿದೆ, ಹಾಗೂ ಬಿಗ್​ಬಾಸ್​ ನೀಡಿದ ಟಾಸ್ಕ್​ಅನ್ನು ಕಂಟೆಸ್ಟೆಂಟ್​ಗಳು ಹೇಗೆ ಆಡಿದ್ರು ಅನ್ನೋದರ ಬಗ್ಗೆ ಮಾತನಾಡಿದ್ರು..

ಬಳಿಕ ಮನೆಯವರ ಜೊತೆಗೆ ಮಾತನಾಡಿದ ಕಿಚ್ಚ ಮೊದಲು ಕೇಳಿದ್ದು, ಇವತ್ತು ಬೆಸ್ಟ್​ ಡ್ರೆಸ್ಡ್​ ಯಾರು ಅನ್ನೋದನ್ನ.. ಚಕ್ರವರ್ತಿ ದಿವ್ಯಾ ಉರುಡುಗ ಹೆಸರು ಹೇಳಿದ್ರು, ರಘು ವೈಷ್ಣವಿ ಅವರ ಹೆಸರು ಹೇಳಿದ್ರು. ಆದ್ರೆ ಅರವಿಂದ್​ ಅವರನ್ನು ಕೇಳುವ ಮುಂಚೆಯೇ ಕಿಚ್ಚ ಅರವಿಂದ್​ ನಿಮ್ಮ ಉತ್ತರ ಗೊತ್ತಿದೆ.. ಆದ್ರೂ ಏನಾದ್ರು ಚೇಂಜಸ್​ ಇರಬಹುದಾ ಅಂತಾ ಕೇಳ್ತೀನಿ ಅಂತಾ ಹೇಳಿದ್ರು.. ಆದ್ದೆ ಅರವಿಂದ್​ ಉತ್ತರ ಕೇಳಿ ಎಲ್ಲರೂ ನಕ್ಕಿದ್ರು..

ಮೊನ್ನೆ ನೆಡದ ಕುರ್ಚಿ ಟಾಸ್ಕ್​ ಅನುಭವವನ್ನು ಕೇಳಿದ ಕಿಚ್ಚ.. ಪ್ರಶಾಂತ್​ ಹಾಗೂ ಮಂಜು ನಡುವೆ ಅಷ್ಟು ಕಾಂಪಿಟೇಷನ್​ ಏರ್ಪಡಲು ಕಾರಣವೇನು ಅಂತ ಕೇಳಿದ್ರು.. ಕಾರಣ ಹಳೇ ಕೋಪ ಹೊಸ ರೀತಿ ಅನ್ನು ಹಾಗೆ ನೋಡುಗರಿಗೆ ಕಂಡಿತು.. ಬಳಿಕ ನಿಧಿ ಅವರ ಹಾಡಿನ ಬಗ್ಗೆ ಕೂಡಾ ಮಾತನಾಡಿ ಯಾರಿಗೆ ಆ ಹಾಡು ಇಷ್ಟ ಆಯ್ತು ಕಷ್ಟ ಆಯ್ತು ಅನ್ನೋದನ್ನ ಕೂಡಾ ಕೇಳಿದ್ರು.

The post ‘ವಾರದ ಕಥೆ ಕಿಚ್ಚನ ಜೊತೆ’ಗೆ ಸುದೀಪ್ ಕಂ ಬ್ಯಾಕ್: ಆದ್ರೆ ಕಂಟೆಸ್ಟೆಂಟ್​ಗಳು ಮೊದಲಿನಂತಿಲ್ವಾ..? appeared first on News First Kannada.

Source: newsfirstlive.com

Source link