ಬಿಗ್​ಬಾಸ್ ಸಾರಥಿ ಕಿಚ್ಚ ಸುದೀಪ್ ನಿನ್ನೆ ಸ್ಪರ್ಧಿಗಳ ವರ್ತನೆಗೆ ಫು್ಲ್​ ಗರಂ ಆಗಿಬಿಟ್ಟರು. ‘ವಾರದ ಕಥೆ ಕಿಚ್ಚ ಸುದೀಪ್​ ಜೊತೆ’ ಎಪಿಸೋಡ್​ನಲ್ಲಿ ಹರಟೆ ಹೊಡೆಯುತ್ತಿದ್ದ ಸುದೀಪ್, ಕೊನೆಕ್ಷಣದಲ್ಲಿ ಕಂಟೆಸ್ಟೆಂಟ್​ಗಳಿಗೆ ಕ್ಲಾಸ್ ತೆಗೆದುಕೊಂಡರು.

ಬಿಗ್​ಬಾಸ್​ ಸೀಸನ್-8ರ ಮೊದಲ ಇನ್ನಿಂಗ್ಸ್​ನಲ್ಲಿದ್ದ ಸ್ಪರ್ಧಿಗಳು ಕಾಣೆಯಾಗಿದ್ದಾರೆ ಅನ್ನೋದು ವೀಕ್ಷಕರ ಕಂಪ್ಲೆಂಟ್ ಆಗಿತ್ತು. ಇದೇ ಅಭಿಪ್ರಾಯವನ್ನ ವ್ಯಕ್ತಪಡಿಸಿದ ಕಿಚ್ಚ ಸುದೀಪ್​.. ಸ್ಪರ್ಧಿಗಳ ಮನಸ್ಥಿತಿ, ಆ್ಯಟಿಟ್ಯೂಡ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ವಾರದ ಪಂಚಾಯ್ತಿ ವೇಳೆ ಬೇರೆಯವ್ರು ಮಾತಾಡುವ ವೇಳೆ ಇನ್ನೊಬ್ಬರು ಮಧ್ಯೆ ಮಧ್ಯೆ ಮಾತನಾಡೋದನ್ನ ಗಮನಿಸಿ ಕ್ಲಾಸ್​ ತೆಗೆದುಕೊಂಡ ಸುದೀಪ್​.. ಒಬ್ಬರು ವೇದಿಕೆ ಮೇಲೆ ಮಾತನಾಡುವಾಗ ಇನ್ನೊಬ್ಬರು ಧ್ವನಿ ಎತ್ತೋದು ನಾಟ್ ಓಕೆ. ನಿಮ್ಮ ಬಗ್ಗೆ ನಂಗೆ ಗೊತ್ತಿಲ್ಲ. ವೇದಿಕೆ ಮೇಲೆ ಒಬ್ಬರು ಮಾತಾಡುತ್ತಿದ್ದಾರೆ ಅಂದ್ರೆ ಅವ್ರಿಗೆ ಗೌರವ ಕೊಡಿ.

ಇಲ್ಲದಿದ್ರೆ ವೇದಿಕೆ ಮೇಲೆ ಇರೋರಿಗೆ ಮರ್ಯಾದೆ ಇರಲ್ಲ. ಗೌರವನೂ ಇರಲ್ಲ. ಪ್ರತಿಯೊಬ್ಬರಿಗೂ ಮಾತಾಡೋಕೆ ಅವಕಾಶ ಸಿಗತ್ತೆ. ಇಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಕೊಟ್ಟಿದ್ದೇವೆ. ನೀವು ಕೈ ಎತ್ತಿದ ತಕ್ಷಣವೇ ನಿಮ್ಮ ವಿವರಣೆ ತೆಗೆದುಕೊಂಡಿದ್ದೇವೆ. ಯಾರು ಏನೇ ಅಪರಾಧ ಮಾಡಿದ್ದರೂ ಸಹ ಅವರ ವಿವರಣೆ ಇಲ್ಲದೇ ಶೋ ಆಗಿಲ್ಲ. ಇದನ್ನ ನೀವು ಒಪ್ಪಿಕೊಳ್ತೀರಿ ಎಂದು ನಾನು ನಂಬುತ್ತೇನೆ.

ಹೀಗಿರುವಾಗ ಪ್ರಶ್ನೆ ಕೇಳಿದ್ಮೇಲೆ ಅವ್ರು ಉತ್ತರ ಕೊಡ್ಬೇಕು ಎಂದರ್ಥ. ಅವ್ರು ಬೇರೆಯವ್ರ ಮೇಲೆ ಕಂಪ್ಲೇಂಟ್ ಮಾಡ್ದಾಗಲೂ ಮತ್ತೆ ಮಾತಾಡಲು ಅವಕಾಶ ನೀಡಲಾಗಿದೆ. ಎಲ್ರೂ ಅರ್ಥ ಮಾಡಿಕೊಳ್ಳಬೇಕು. ಎಲ್ರೂ ನಿಮ್ಮನ್ನ ಇಷ್ಟಪಟ್ಟು ನೋಡುತ್ತಿರುವಾಗ ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.

ಆದರೆ ನಿಮಗೆ ತಾಳ್ಮೆಯೇ ಇಲ್ಲ. ಯಾರೋ ಒಬ್ಬರು ಮಾತನಾಡುವಾಗ ಮಧ್ಯದಲ್ಲಿಯೇ ಮಾತಾಡಲು ಶುರುಮಾಡ್ತೀರ ಅಂದ್ರೆ.. ವಾಟ್ ಕೈಂಡ್ ಆಫ್‌ ಎ ಡಿಸಿಪ್ಲೀನ್ ಈಸ್‌ ದಿಸ್‌. ಇದನ್ನ ವಾರ್ನಿಂಗ್ ಆಗಿ ತೆಗೆದುಕೊಳ್ಳಿ. ನೆಕ್ಸ್ಟ್ ಟೈಮ್ ನಾನು ಕೇಳೋದೇ ಇಲ್ಲ. ಉತ್ತರ ನೀಡಲು ನಿಮಗೆ ಅವಕಾಶ ಇದೆ ಅಂದಾಗ ಮತ್ಯಾಕೆ ಅಶಿಸ್ತಿನಿಂದ ನಡೆದುಕೊಳ್ತೀರಿ. ಈಸ್ ದಿಸ್‌ ಎ ಎಫೆಕ್ಟ್ ಆಫ್‌ 43 ಡೇಸ್. ಆ 72 ದಿನಗಳಲ್ಲಿ ಇಲ್ಲದಿರೋ ಕಂಟೆಸ್ಟೆಂಟ್‌ಗಳು ವಾಪಾಸ್ ಬಂದಿದ್ದೀರಾ. ತಾಳ್ಮೆಯೇ ಇಲ್ಲ ನಿಮ್ಗೆ ಎಂದು ಖಡಕ್​ ಆಗಿ ಎಚ್ಚರಿಕೆಯನ್ನ ಕೊಟ್ರು.

The post ವಾರದ ಪಂಚಾಯ್ತಿಯಲ್ಲಿ ಕಿಚ್ಚ ಫುಲ್ ಗರಂ -ಕ್ಷಮೆ ಕೇಳಿದ ಸ್ಪರ್ಧಿಗಳು appeared first on News First Kannada.

Source: newsfirstlive.com

Source link