ವಾರದ ಬಳಿಕ ಬಯಲಾಯ್ತು ಮಹಿಳೆ ಕೊಲೆ ರಹಸ್ಯ; ಹೆಂಡತಿಯನ್ನ ಕೊಂದ ಗಂಡ ಸಿಕ್ಕಿಬಿದ್ದಿದ್ದು ಹೀಗೆ..!

ಆಕೆ ತನ್ನ ಮನೆಯವರ ಆಸೆಯಂತೆ ಆತನನ್ನ ವರಿಸಿದ್ದಳು. ಆದ್ರೆ ಆ ಪಾಪಿ ಮೊದಲೆಲ್ಲ ಸರಿಯಾಗೇ ಇದ್ದು ಆಮೇಲೆ ತನ್ನ ನೈಜ ಬಣ್ಣವನ್ನ ತೋರಿಸಲು ಶುರುಮಾಡಿದ್ದ. ಕೊನೆಗೆ ಬೇಸತ್ತ ಪತ್ನಿ ತವರಿಗೆ ಹೋದ್ರೂ ಬಿಡದೇ ಪಾಪಿ ಪತಿ ಅರ್ಧಾಂಗಿಗೆ ಅಕ್ಷರಶಃ ನರಕವನ್ನೇ ತೋರಿಸಿದ್ದಾನೆ. ಕಂಪ್ಯೂಟರ್ ಕ್ಲಾಸ್​ಗೆ ಹೋಗಿ ಬರ್ತೀನಿ ಅಂದವಳು ಕೊನೆಗೆ ಬಂದಿದ್ದು ಮಾತ್ರ ದಾರುಣವಾಗಿ.

ಈಕೆ ಹೆಸರು ಸಂಧ್ಯಾ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದ್ಯಾವಪಟ್ಟಣ ಗ್ರಾಮದವರು. ಹೀಗೆ ಮಧುವಣಗಿತ್ತಿಯಂತೆ ಶೃಂಗಾರಗೊಂಡು ಫೋಟೋ ಕ್ಲಿಕ್ಕಿಸಿಕೊಂಡ ಸಂಧ್ಯಾ ತನ್ನ ಮದುವೆ ಬಗ್ಗೆ ಅದೆಷ್ಟು ಕನಸು ಹೊತ್ತಿದ್ಲೋ, ಆದ್ರೆ ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿ ಎಲ್ಲವೂ ಸಮಾಧಿ ಸೇರಿದೆ.

ಒಂದು ವರ್ಷದ ಹಿಂದೆ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಎಂಬಾತನನೊಂದಿಗೆ ಸಂಧ್ಯಾಳ ವಿವಾಹವಾಗಿತ್ತು. ಮಗಳು ಚೆನ್ನಾಗಿರ್ಲಿ ಅಂತಾ ಲಕ್ಷಾಂತರ ರೂಪಾಯಿ ವರದಕ್ಷಿಣೆ, ಚಿನ್ನ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು ಶ್ರೀಕಂಠಸ್ವಾಮಿ. ಯಾವುದೂ ಹೆಚ್ಚು ದಿನ ಉಳೀಲಿಲ್ಲ, ಹಣಕ್ಕಾಗಿ ಪೀಡಿಸ್ತಿದ್ದ ಷಡಕ್ಷರಿ ಕೆಲಸಕ್ಕೆ ಹೋಗು ಅಂತಾ ಹಿಂಸೆ ಕೊಡ್ತಿದ್ದ. ಇದೇ ಕಾರಣಕ್ಕೆ ಕಂಪ್ಯೂಟರ್​ ಕ್ಲಾಸ್​ಗೂ ಸೇರಿದ್ಲು ಸಂಧ್ಯಾ ಆದ್ರೂ ಆತನ ಕಿರುಕುಳ ತಾಳಲಾರದೆ ತವರು ಮನೆಗೆ ಬಂದುಬಿಟ್ಟಿದ್ಲು. ಅಲ್ಲೂ ಬಿಡದ ಕ್ರೂರಿ ಗಂಡ ಪತ್ನಿಯನ್ನೇ ಕೊಲೆಗೈದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ನಾಲೆಯಲ್ಲಿ ಮುಳುಗಿಸಿ ಪತ್ನಿಯನ್ನ ಕೊಲೆಗೈದ ಪತಿ; ವಾರದ ಬಳಿಕ ಅರೆಸ್ಟ್.. ಸಿಕ್ಕಿ ಬಿದ್ದಿದ್ದೇಗೆ?

ನ.15 ರಂದು ಸಂಘಕ್ಕೆ ಸಹಿ ಹಾಕಬೇಕು ಎಂದು ಫೋನಿನಲ್ಲಿ ಹೆಂಡತಿಗೆ ಹೇಳಿದ ಷಡಕ್ಷರಿ ನಂತರ ಬೈಕ್ ಕೆಟ್ಟಿತ್ತು ಎಂದು ವಾಪಸ್ ಕಳುಹಿಸಿದ್ದ. ಆ ವಿಚಾರವನ್ನ ಯುವತಿ ತಂದೆ ತಾಯಿಗೂ ತಿಳಿಸಿದ್ರು. ಆದರೆ, ಮಾರನೆ ದಿನ ಅಂದ್ರೆ ನ.16ರಂದು ಕಂಪ್ಯೂಟರ್ ಕ್ಲಾಸಿಗೆ ಹೋದ ಸಂಧ್ಯಾ ವಾಪಸ್ ಮನೆಗೆ ಬರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು‌ ಎಲ್ಲಾ ಕಡೆ ವಿಚಾರಿಸಿ ಕೊನೆಗೆ ಬೆಳಲವಾಡಿ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ರು ಆಕೆಯ ಪೋಷಕರು.

ಇತ್ತ, ನನಗೆ ಏನು ಗೊತ್ತೇ ಇಲ್ಲ ಎಂಬಂತೆ ವಿಷ ಕುಡಿಯುವ ನಾಟಕ ಮಾಡಿ ಆಸ್ಪತ್ರೆ ಸೇರಿದ್ದ ಸಂಧ್ಯಾ ಪತಿಯನ್ನ ಪೊಲೀಸರು ವಶಕ್ಕೆ ಪಡೆದು ಸತ್ಯ ಬಾಯಿ ಬಿಡಿಸಿದ್ದಾರೆ. ಕಂಪ್ಯೂಟರ್ ಕ್ಲಾಸಿಗೆ ಹೋದ ಮಡದಿಯನ್ನ ಮಳವಳ್ಳಿ ಬಳಿಯ ಕುಂದೂರು ಹತ್ತಿರ ಕರೆದುಕೊಂಡು ಹೋಗಿ ನಾಲೆಯಲ್ಲಿ ಹೆಂಡತಿಯನ್ನ ಮುಳುಗಿಸಿ ಕೊಲೆಗೈದಿದ್ದಾನೆ. ಇಂತಹ ಪಾಪಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಸಂಧ್ಯಾ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ನಿನ್ನ ಸಹವಾಸಾನೇ ಬೇಡ ಅಂತಾ ತವರು ಮನೆಗೆ ಬಂದ್ರೂ ಬಿಡದ ಬೇತಾಳ ಕೊನೆಗೆ ಆಕೆ ಪ್ರಾಣವನ್ನೇ ತೆಗೆದಿದ್ದಾನೆ.

News First Live Kannada

Leave a comment

Your email address will not be published. Required fields are marked *