ವಾರಸುದಾರರಿಲ್ಲದೆ ತುಕ್ಕು ಹಿಡೀತಿವೆ ಸೀಜ್ ಆದ 38,369 ವೆಹಿಕಲ್ಸ್!

ವಾರಸುದಾರರಿಲ್ಲದೆ ತುಕ್ಕು ಹಿಡೀತಿವೆ ಸೀಜ್ ಆದ 38,369 ವೆಹಿಕಲ್ಸ್!

ಬೆಂಗಳೂರು: ಕಳೆದ ಐದು ವರ್ಷಗಳಿಂದ ನಗರದಲ್ಲಿ ಸೀಜ್ ಆದ 38 ಸಾವಿರಕ್ಕೂ ಹೆಚ್ಚು ವಾಹನಗಳಿಗೆ ವಾರಸುದಾರರಿಲ್ಲ ಅಂದ್ರೆ ನೀವು ನಂಬಲೇಬೇಕು. ಹೌದು. ಬೆಂಗಳೂರಲ್ಲಿ ಜಪ್ತಿ ಮಾಡಲಾದ 38,369 ವಾಹನಗಳು 2015ರಿಂದಲೂ ನಿಂತಲೇ ನಿಂತು ಹಾಳಾಗ್ತಿವೆ.

ಸೀಜ್ ಆಗಿರೋ ವಾಹನಗಳನ್ನ ಬಿಡಿಸಿಕೊಳ್ಳಲಿಕ್ಕೆ ವಾಹನ ಮಾಲೀಕರು ಬಂದಿಲ್ಲ. ಹೀಗಾಗಿ ಪೊಲೀಸ್ ಠಾಣೆ ಬಳಿ ವಾಹನ ನಿಲುಗಡೆಗೂ ಜಾಗವಿಲ್ಲದೆ ಪೊಲೀಸರಿಗೆ ಪೀಕಲಾಟ ಶುರುವಾಗಿದೆ. ಆದಷ್ಟು ಬೇಗ ವಾರಸುದಾರರಿಗೆ ವಾಹನಗಳನ್ನ ಹಸ್ತಾಂತರ ಮಾಡಿ, ಇಲ್ಲದಿದರೆ ಕೊರ್ಟ್ ಅನುಮತಿ ಪಡೆದು ಹರಾಜು ಪ್ರಕ್ರಿಯೆ ನಡೆಸಿ ಅಂತ ಪೊಲೀಸ್ ಅಧಿಕಾರಿಗಳಿಗೆ ಕಮಿಷನರ್ ಕಮಲ್ ಪಂತ್ ಸೂಚನೆ ನೀಡಿದ್ದಾರೆ.

2015 ರಿಂದ 2021ರವರೆಗೂ ವಿಭಾಗವಾರು ವಾರಸುದಾರರಿಲ್ಲದ ವಾಹನಗಳ ಸಂಖ್ಯೆ ಇಂತಿದೆ:

  • ಪೂರ್ವ ವಿಭಾಗ : 4609 ವಾಹನಗಳು
  • ಈಶಾನ್ಯ ವಿಭಾಗ : 2144 ವಾಹನಗಳು
  • ಆಗ್ನೇಯ ವಿಭಾಗ: 5452 ವಾಹನಗಳು
  • ವೈಟ್​​ ಫೀಲ್ಡ್​ : 2027 ವಾಹನಗಳು
  • ಕೇಂದ್ರ ವಿಭಾಗ: 1731 ವಾಹನಗಳು
  • ಪಶ್ಚಿಮವಿಭಾಗ: 5378 ವಾಹನಗಳು
  • ಉತ್ತರ ವಿಭಾಗ : 3764 ವಾಹನಗಳು
  • ದಕ್ಷಿಣ ವಿಭಾಗ : 4306 ವಾಹನಗಳು
  • ಸಂಚಾರಿ ಪೂರ್ವ ವಿಭಾಗ: 3427 ವಾಹನಗಳು
  • ಸಂಚಾರಿ ಪಶ್ಚಿಮ ವಿಭಾಗ: 4539 ವಾಹನಗಳು
  • ಸಂಚಾರಿ ಉತ್ತರ ವಿಭಾಗ: 992 ವಾಹನಗಳು

The post ವಾರಸುದಾರರಿಲ್ಲದೆ ತುಕ್ಕು ಹಿಡೀತಿವೆ ಸೀಜ್ ಆದ 38,369 ವೆಹಿಕಲ್ಸ್! appeared first on News First Kannada.

Source: newsfirstlive.com

Source link