ವಾರಾಂತ್ಯದ ಕರ್ಫ್ಯೂನಿಂದ ವ್ಯಾಪಾರಸ್ಥರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಎಂದರು ಕೆ ಆರ್ ಮಾರ್ಕೆಟ್​ನ ಒಬ್ಬ ವ್ಯಾಪಾರಿ! | Business suffers immensely thanks to week end curfew says a KR Market vendor ARB


ಕರ್ನಾಟಕ ಸರ್ಕಾರ ವೀಕೆಂಡ್ ಕರ್ಫ್ಯೂ (week-end curfew) ಘೋಷಿಸಿದಾಗಲೇ ಜನ ಅದರಲ್ಲೂ ವಿಶೇಷವಾಗಿ ದಿನಗೂಲಿ ನೌಕರರು, ಆಟೋ ರಿಕ್ಷಾ ಚಾಲಕರು, ವ್ಯಾಪಾರಸ್ಥರು, ರಸ್ತೆಗಳ ಬದಿ ತಳ್ಳುಗಾಡಿಗಳಲ್ಲಿ ತರಕಾರಿ ಮತ್ತು ತಿಂಡಿಗಳನ್ನು ಮಾಡಿ ಮಾರುವವರು ತೀವ್ರವಾಗಿ ವಿರೋಧಿಸಿದ್ದರು. ಪ್ರತಿ ತಿಂಗಳು ವೇತನ ಪಡೆಯುವ ಸರ್ಕಾರೀ, ಅರೆ-ಸರ್ಕಾರೀ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಲಾಕ್ ಡೌನ್ (Lockdown) ಮತ್ತು ವೀಕೆಂಡ್ ಕರ್ಫ್ಯೂಗಳಿಂದ ತೊಂದರೆಯಾಗಲಾರದು. ಹಾಗಾಗಿ ಅವರು ವೀಕೆಂಡ್ ಕರ್ಫ್ಯೂ ಪರ-ವಿರೋಧ ಮಾತಾಡಲಾರರು. ಓಕೆ ಆ ವಿಷಯ ಹಾಗಿರಲಿ. ಕರ್ನಾಟಕ ಸರ್ಕಾರವಂತೂ (Karnataka Government) ವಾರಾಂತ್ಯದ ಕರ್ಫ್ಯೂ ಅನ್ನು ತೆರವುಗೊಳಿಸಿ ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿರ್ಧಾರಕ್ಕೆ ತೆಗೆದುಕೊಂಡಿದೆ. ಸರ್ಕಾರದ ನಿರ್ಧಾರವನ್ನು ಜನರು ಸ್ವಾಗತಿಸಿದ್ದಾರೆ.

ಸರ್ಕಾರ ನಿರ್ಧಾರವನ್ನು ಪ್ರಕಟಿಸುವ ಮೊದಲು ಟಿವಿ9 ಬೆಂಗಳೂರು ವರದಿಗಾರ ಕೆ ಆರ್ ಮಾರ್ಕೆಟ್​ನಲ್ಲಿರುವ ವ್ಯಾಪಾರಸ್ಥರನ್ನು ಮಾತಾಡಿಸಿ ಅವರು ಅಭಿಪ್ರಾಯವನ್ನು ತಿಳಿಯುವ ಪ್ರಯತ್ನ ಮಾಡಿದರು. ಈ ವಿಡಿಯೋನಲ್ಲಿ ವ್ಯಾಪಾರಿಯೊಬ್ಬರು ಆಡಿರುವ ಮಾತಿನ ಪ್ರಕಾರ ವೀಕೆಂಡ್ ಕರ್ಫ್ಯೂ ಈಗ ಅಗತ್ಯವಿಲ್ಲ. ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾದರೂ, ಸೋಂಕಿತರನ್ನು ಅಸ್ಪತ್ರೆಗೆ ಸೇರಿಸುವ ಪ್ರಮಾಣ ಹೆಚ್ಚಿಲ್ಲ. ಅವರಿಗೆ ಐಸೋಲೇಟ್ ಮಾಡಿ ಮೆಡಿಸಿನ್ ನೀಡಿದರೆ ಸಾಕು, ಅವರೆಲ್ಲ ಗುಣಮುಖರಾಗುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.

ಎರಡನೇ ಅಲೆಗೆ ಹೋಲಿಸಿದರೆ, ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಬಹಳ ಕಮ್ಮಿಯಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ವೀಕೆಂಡ್ ಕರ್ಫ್ಯೂ ತೆರವು ಮಾಡುವ ನಿರ್ಧಾರ ಪ್ರಕಟಿಸಬೇಕು. ವೀಕೆಂಡ್​ನಲ್ಲೇ ವ್ಯಾಪಾರ ಜಾಸ್ತಿ ಆಗೋದು, ಕೆ ಅರ್ ಮಾರ್ಕೆಟ್​ನಲ್ಲಿ 480 ಅಂಗಡಿಗಳಿದ್ದು ಅದರ ಮಾಲೀಕರೆಲ್ಲ ವೀಕೆಂಡ್ ಕರ್ಫ್ಯೂ ರದ್ದು ಮಾಡಬೇಕು ಎಂಬ ಅಭಿಪ್ರಾಯ ತಳೆದಿದ್ದಾರೆ ಎಂದು ಅವರು ಹೇಳಿದರು.

TV9 Kannada


Leave a Reply

Your email address will not be published. Required fields are marked *