ಆಸ್ಟ್ರೇಲಿಯಾ ತಂಡದ ದಿಗ್ಗಜ ಡೇವಿಡ್ ವಾರ್ನರ್ ಅವರನ್ನು ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಹೀಗಾಗಿ ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಕೂಡಲೇ ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ವಾರ್ನರ್ ಕಾಲೆಳೆದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಮಾತಾಡಿದ ಆ್ಯರೋನ್ ಫಿಂಚ್, ಟಿ20 ವಿಶ್ವಕಪ್ ಗೆದ್ದ ಮೊದಲ ಆಸ್ಟ್ರೇಲಿಯಾ ತಂಡ ಇದಾಗಿದೆ. ಇದಕ್ಕೆ ಇಡೀ ಟೀಂ ಶ್ರಮಿಸಿದೆ. ಹಲವರು ಅದ್ಭುತ ಪರ್ಫಾರ್ಮೆನ್ಸ್ ನೀಡಿದ್ದಾರೆ. ಹೀಗಾಗಿ, ಕಳೆದ ವಾರ ವಾರ್ನರ್ ವೈಫಲ್ಯದ ಬಗ್ಗೆ ಬರೆದಿರುವುದನ್ನು ನಾನು ನಂಬುವುದಿಲ್ಲ. ಅದು ವಾರ್ನರ್ ಮನಸ್ಸಿಗೆ ಗಾಯಗೊಳಿಸುವಂತಿತ್ತು ಎಂದರು. ಇದು ಒಂದು ರೀತಿ ಕರಡಿಯನ್ನು ಚುಚ್ಚಿದಂತೆ ಎಂದರು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ವಾರ್ನರ್ ಬಗ್ಗೆ ಕೊಂಡಾಡಿದರು.
ಇದನ್ನೂ ಓದಿ: ಟಿಕ್ಟಾಕ್ ಸ್ಟಾರ್ ಡೇವಿಡ್ ವಾರ್ನರ್ಗೆ ಆಫರ್ ನೀಡಿದ ಪೋಕಿರಿ ನಿರ್ದೇಶಕ ಪುರಿ ಜಗನ್ನಾಥ್..!
The post ವಾರ್ನರ್ನ ಕಿಚಾಯಿಸಬೇಡಿ.. ಅದು ಕರಡಿಗೆ ಚುಚ್ಚಿದಂತೆ.. ಎಚ್ಚರಿಕೆ ಕೊಟ್ಟ ಫಿಂಚ್ appeared first on News First Kannada.