
ನಿರೂಪ್ ಭಂಡಾರಿ
Window Seat Movie: ನಟಿ, ನಿರೂಪಕಿ ಆಗಿ ಗುರುತಿಸಿಕೊಂಡ ಶೀತಲ್ ಶೆಟ್ಟಿ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ವಿಂಡೋ ಸೀಟ್’. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಗಣನೆ ಶುರು ಆಗಿದೆ.
ರೈಲಿನಲ್ಲಿ ಓಡಾಡುವವರಿಗೆ ‘ವಿಂಡೋ ಸೀಟ್’ ಸಿನಿಮಾದ (Window Seat Movie) ಬಗ್ಗೆ ಸಾಕಷ್ಟು ಪ್ರೀತಿ ಇರುತ್ತದೆ. ಯಾಕಂದ್ರೆ ತಮ್ಮ ದೈನಂದಿನ ನೆನಪುಗಳನ್ನು ಹೊತ್ತು ತರುತ್ತಿದೆ. ಫ್ರೆಂಡ್ಶಿಪ್, ಹೊಸ ಪರಿಚಯ, ಪ್ರೀತಿ, ಹಲವು ನೆನಪುಗಳು ಹೀಗೆ ಸಾಕಷ್ಟು ವಿಚಾರದಲ್ಲಿ ‘ವಿಂಡೋ ಸೀಟ್’ ಎಲ್ಲರ ಮನಸ್ಸಿಗೂ ಹತ್ತಿರವಾಗಿದೆ. ಸಿನಿಮಾದ ಪೋಸ್ಟರ್ ರಿಲೀಸ್ ಆದಾಗಿನಿಂದ ಹಿಡಿದು ಟೀಸರ್ ತನಕ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇದೀಗ ರಿಲೀಸ್ ಆಗಿರುವ ರಿವೈವರ್ ಪ್ರೋಮೋದಿಂದ ಸಿನಿಮಾದ ಮೇಲಿನ ಆಸಕ್ತಿ ಇನ್ನೂ ಹೆಚ್ಚಾಗಿದೆ. ನಟಿ, ನಿರೂಪಕಿ ಆಗಿ ಗುರುತಿಸಿಕೊಂಡ ಶೀತಲ್ ಶೆಟ್ಟಿ (Sheetal Shetty) ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾವಿದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ‘ವಿಂಡೋ ಸೀಟ್’ ಸಿನಿಮಾ ಥಿಯೇಟರ್ನಲ್ಲಿ ಸದ್ದು ಮಾಡಬೇಕಿತ್ತು. ಆದರೆ ಕೊರೊನಾ, ಅನುಮತಿ ಅಂತೆಲ್ಲಾ ಸಾಕಷ್ಟು ತಡವಾಗಿದೆ. ಸದ್ಯ ಎಲ್ಲಾ ಕೆಲಸ ಮುಗಿಸಿರುವ ‘ವಿಂಡೋ ಸೀಟ್’ ರಿಲೀಸ್ಗೆ ರೆಡಿಯಾಗಿದ್ದು, ಕಾದಿದ್ದು ಸಾಕಾಯ್ತು ಎಂಬುದನ್ನು ಟ್ರೇಲರ್ ಪ್ರೋಮೋದಲ್ಲಿ ಅರ್ಥ ಮಾಡಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರೂಪ್ ಭಂಡಾರಿ (Nirup Bhandari) ಹೀರೋ.
ಇದೀಗ ರಿಲೀಸ್ ಆಗಿರುವ ಪ್ರೋಮೋ ಮೂಲಕ ‘ವಿಂಡೋ ಸೀಟ್’ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ ಎಂಬುದು ಕಣ್ಣಿಗೆ ಕಾಣಿಸುತ್ತಿದೆ. ಟ್ರೇನ್ನಲ್ಲಿ ಹೋಗುವ ಪ್ರತಿಯೊಬ್ಬರು ಬಯಸುವುದು ಆ ‘ವಿಂಡೋ ಸೀಟ್’. ರೈಲು ಹತ್ತಿದ ಕೂಡಲೇ ಹುಡುಕುವುದೇ ಆ ‘ವಿಂಡೋ ಸೀಟ್’ ಅನ್ನು. ಯಾಕಂದ್ರೆ ಆ ‘ವಿಂಡೋ ಸೀಟ್’ನಲ್ಲಿ ಕುಳಿತರೆ ಜಗತ್ತಿನ ನಾನಾ ಅದ್ಭುತಗಳು ಕಾಣಸಿಗುತ್ತವೆ. ಇದೀಗ ಹೀರೋಗೆ ‘ವಿಂಡೋ ಸೀಟ್’ನಲ್ಲಿ ಏನೆಲ್ಲಾ ಕಂಡಿದೆ ಎಂಬುದು ಅನಾವರಣವಾಗಿದೆ.