ನಾಳೆಯಿಂದ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಶುರುವಾಗಲಿದೆ. ಈಗ ತೀವ್ರ ಗಾಯದಿಂದ ಬಳಲುತ್ತಿರೋ KL ರಾಹುಲ್ ಸರಣಿಯಿಂದ ಹೊರ ನಡೆದಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯೋ ಟಿ20 ಸರಣಿಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಉಪ ನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ.
ಇತ್ತೀಚೆಗೆ ಅಹಮದಾಬಾದ್ನ ನಮೋ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಏಕದಿನ ಪಂದ್ಯದ ಫೀಲ್ಡಿಂಗ್ ವೇಳೆ ರಾಹುಲ್ ಗಾಯಗೊಂಡರು. ಆದ್ದರಿಂದ ರಾಹುಲ್ ಈಗ ಟಿ20 ಸರಣಿಯಿಂದ ಹೊರನಡೆದಿದ್ದಾರೆ.
ಭಾರತ ತಂಡದ ನಾಯಕತ್ವದ ಗುಂಪಿಗೆ ಇದೇ ಮೊದಲ ಬಾರಿ ರಿಷಭ್ ಪಂತ್ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಈಗ ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಆಗೋ ಅವಕಾಶ ಸಿಕ್ಕಿದೆ. ಇನ್ನು ಕೆ.ಎಲ್ ರಾಹುಲ್ ಅವರ ಸ್ಥಾನಕ್ಕೆ ಋತುರಾಜ್ ಗಾಯಕ್ವಾಡ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.
The post ವಿಕೆಟ್ ಕೀಪರ್ ರಿಷಭ್ ಪಂತ್ಗೆ ಗುಡ್ ನ್ಯೂಸ್ ಕೊಟ್ಟ BCCI appeared first on News First Kannada.