ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಕೊನೆಗೂ ಸಪ್ತಪದಿ ತುಳಿಯುತ್ತಿದ್ದಾರೆ. ಕತ್ರಿನಾ ಮದುವೆ ಆಗುತ್ತಿರೋದು ತನಗಿಂತ 5 ವರ್ಷ ಚಿಕ್ಕವರನ್ನು ಎಂಬುದು ವಿಶೇಷ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಈಗ ಮದುವೆ ಸಂಭ್ರಮ.
ಇಬ್ಬರು ರಾಜಸ್ಥಾನದ ಐಷಾರಾಮಿ ಹೋಟೆಲ್ವೊಂದರಲ್ಲಿ ಮದುವೆ ಆಗಲಿದ್ದಾರೆ. ಇದೇ ಡಿಸೆಂಬರ್ 7ನೇ ತಾರೀಖಿನಿಂದ 9ವರೆಗೆ ಮದುವೆ ನಡೆಯಲಿದೆ. ಈ ಅದ್ದೂರಿ ಮದುವೆಗೂ ಹೊಸ ವೈರಲ್ ಬಿಸಿ ತಟ್ಟಿದೆ. ಹೌದು, ವಿಕ್ಕಿ ಮತ್ತು ಕತ್ರಿನಾ ಮದುವೆಗೆ ಈಗಾಗಲೇ ಸುಮಾರು 45 ಹೋಟೆಲ್ಗಳನ್ನು ಬುಕ್ ಮಾಡಲಾಗಿದೆ. ಮೊದಲಿಗೆ ಈ ಮದುವೆಗೆ ಬಾಲಿವುಡ್ ಅನೇಕ ಗಣ್ಯರು ಹಾಜರಾಗಲಿದ್ದಾರೆ ಎನ್ನಲಾಗಿತ್ತು. ಆದರೀಗ, ಗೆಸ್ಟ್ಗಳ ಈ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಇನ್ನು, ಗೆಸ್ಟ್ಗಳಲ್ಲಿ ಗಣನೀಯ ಇಳಿಕೆ ಕಂಡರೂ ಮತ್ಯಾಕೆ 45 ಹೋಟೆಲ್ಗಳನ್ನು ಬುಕ್ ಮಾಡಲಾಗಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇಲ್ಲಿನ ಹೋಟೆಲ್ಗಳ ಬಹಳ ಚಿಕ್ಕವೂ, ಹಾಗಾಗಿಯೇ ಮೊದಲೇ ಇಷ್ಟೊಂದು ಹೋಟೆಲ್ ಬುಕ್ ಮಾಡಲಾಗಿದೆ. ಬಾಲಿವುಡ್ನ ಅನೇಕ ಸ್ಟಾರ್ ಕಲಾವಿದರು ಈ ಮದುವೆ ಅಟೆಂಡ್ ಆಗಲಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಪದ್ಮಾವತಿಗೆ ಹುಟ್ಟು ಹಬ್ಬ ಸಂಭ್ರಮ; ರಮ್ಯಾ ಬರ್ತ್ಡೇಗೆ ನೀವು ವಿಶ್ ಮಾಡಿದ್ರಾ?