ವಿಕ್ಕಿ, ಕತ್ರಿನಾ ಮದುವೆ; ಭದ್ರತೆಗಾಗಿ 100 ಬೌನ್ಸರ್ಸ್​; ಅತಿಥಿಗಳಿಗಾಗಿ ಬೆನ್ಸ್​, BMW ಕಾರ್​​ ಬುಕಿಂಗ್​​


ಬಾಲಿವುಡ್​ ನಟಿ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಮುದುವೆ ಬಗ್ಗೆ ದಿನಕೊಂದು ಸುದ್ದಿ ಹೊರ ಬರುತ್ತಲೇ ಇದೆ. ಡಿಸೆಂಬರ್​ 9ರಂದು ಈ ಜೋಡಿ ಸಪ್ತಪದಿ ತುಳಿಯಲಿದೆ. ಹೀಗಾಗಿ ಮದುವೆ ಸಂಬಂಧ ವಿವಿಧ ಕಾರ್ಯಕ್ರಮಗಳು ಡಿಸೆಂಬರ್​ 7ರಿಂದಲೇ ಪ್ರಾರಂಭವಾಗಲಿವೆ. ಇನ್ನು ವಿಕ್ಕಿ ಮತ್ತು ಕತ್ರಿನಾ ಮದುವೆ ನಡೆಯಲಿರುವ ರಾಜಸ್ಥಾನದ ಮಾಧೋಪುರದಲ್ಲಿರುವ ಸಿಕ್ಸ್ ಸೇನ್ಸ್​ ಹೋಟಲ್​ ಪೋರ್ಟ್​ 15ನೇ ಶತಮಾನದಾಗಿದ್ದು ಸುಮಾರು 700 ವರ್ಷಗಳ ಹಳೆಯ ಕೋಟೆಯಾಗಿದೆ.

ಈಗಾಗಲೆ ಸಿಕ್ಸ್​ಸೇನ್ಸ್​ ಹೋಟೆಲ್​ನಲ್ಲಿ ವಿಕ್ಕಿ ಕತ್ರಿನಾ ಮದುವೆಗೆ ಭರ್ಜರಿ ತಯಾರಿ ನಡೆದಿದೆ. ಗಾಜಿನ ಮಂಟಪದಲ್ಲಿ ವಿಕ್ಕಿ ಕತ್ರಿನಾ ವಿವಾಹ ನಡೆಯಲಿದೆ ಎಂದು ಹೇಳಲಾಗಿದೆ. ಇನ್ನು ವರ ವಿಕ್ಕಿ ಕೌಶಲ್​ ಮದುವೆ ಮನೆಗೆ 7 ಬಿಳಿ ಕುದುರೆಗಳ ಜೊತೆಯಲ್ಲಿ ಕಲ್ಯಾಣ ಮಂಟಪಕ್ಕೆ ಗ್ರ್ಯಾಂಡ್​ ಎಂಟ್ರಿ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಆದರೆ ಮದುವೆಗೆ ಬರುವ ಅತಿಥಿಗಳು ಈ ವೈಭವದ ಮದುವೆಯ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಯಾರಿಗೂ ಆವಕಾಶವಿಲ್ಲ. ಇನ್ನು ಮದುವೆ ಮಂಟಪಕ್ಕೆ ಬರುವ ಅಥಿತಿಗಳು ವಿವಾಹದ ದೃಶ್ಯಗಳನ್ನು ಚಿತ್ರೀಕರಿಸದಂತೆ ನೋಡಿಕೊಳ್ಳಲು 100 ಬೌನ್ಸರ್ಸ್​ ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ.

News First Live Kannada


Leave a Reply

Your email address will not be published. Required fields are marked *