ವಿಕ್ಕಿ-ಕತ್ರಿನಾ ಸಪ್ತಪದಿ ಶಾಕ್​​; ಏಳು ಕಂಡೀಷನ್ಸ್-ಅಗ್ರೀಮೆಂಟ್​​​ನಿಂದ ಬೇಸತ್ತ ಅತಿಥಿಗಳು ​


ಬಾಲಿವುಡ್​​ ನಟಿ ಕತ್ರಿನಾ ಕೈಫ್‌ ಮತ್ತು ನಟ ವಿಕ್ಕಿ ಕೌಶಲ್​​​ ಕೊನೆಗೂ ಸಪ್ತಪದಿ ತುಳಿಯುತ್ತಿದ್ದಾರೆ. ಕತ್ರಿನಾ ಮದುವೆ ಆಗುತ್ತಿರೋದು ತನಗಿಂತ 5 ವರ್ಷ ಚಿಕ್ಕವರನ್ನು ಎಂಬುದು ವಿಶೇಷ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಈಗ ಮದುವೆ ಸಂಭ್ರಮ.
ಇಬ್ಬರು ರಾಜಸ್ಥಾನದ ಐಷಾರಾಮಿ ಹೋಟೆಲ್‌ವೊಂದರಲ್ಲಿ ಮದುವೆ ಆಗಲಿದ್ದಾರೆ.

ಇದೇ ಡಿಸೆಂಬರ್ 7ನೇ ತಾರೀಖಿನಿಂದ 9ವರೆಗೆ ಮದುವೆ ನಡೆಯಲಿದೆ. ಈ ಅದ್ದೂರಿ ಮದುವೆಯಲ್ಲಿ ಬಾಲಿವುಡ್​​ ಅನೇಕ ಗಣ್ಯರು ಹಾಜರಾಗಲಿದ್ದಾರೆ. ಆದರೀಗ, ಗೆಸ್ಟ್​ಗಳಿಗೆ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕಂಡೀಷನ್ಸ್​ ಹಾಕಿದ್ದಾರಂತೆ. ಅಲ್ಲದೇ ಅಗ್ರೀಮೆಂಟ್​​ ಮಾಡಿಕೊಂಡು ಮದುವೆಗೆ ಬನ್ನಿ ಎಂದು ಕರೆದಿದ್ದಾರಂತೆ.

ಇದನ್ನೂ ಓದಿ:  ವಿಕ್ಕಿ ಕೌಶಲ್​​​, ಕತ್ರಿನಾ ಕೈಫ್​​​​ ಮದ್ವೆಗೆ ಭರ್ಜರಿ ತಯಾರಿ; ಒಂದು ರಾತ್ರಿಗೆ ₹7 ಲಕ್ಷ ಖರ್ಚು..!

ಗೆಸ್ಟ್​ಗಳಿಗೆ ವಿಕ್ಕಿ-ಕತ್ರಿನಾ ಹಾಕಿದ ಕಂಡೀಷನ್ಸ್​ ಏನು?

  1. ಮದುವೆಗೆ ಹೋಗುತ್ತಿದ್ದೇನೆ ಎಂದು ಶೇರ್​​ ಮಾಡುವಂತಿಲ್ಲ
  2. ಮದವೆ ವೆನ್ಯೂ ಬಗ್ಗೆ ಯಾರಿಗೂ ಮಾಹಿತಿ ನೀಡುವಂತಿಲ್ಲ
  3. ಯಾವುದೇ ಕಾರಣಕ್ಕೂ ಮದುವೆಗೆ ಗಣ್ಯರು ಮೊಬೈಲ್​​ ತರುವಂತಿಲ್ಲ
  4. ಮದುವೆ ಫೋಟೋ ತೆಗೆದು ಸೋಷಿಯಲ್​​ ಮೀಡಿಯಾದಲ್ಲಿ ಹಾಕುವಂತಿಲ್ಲ
  5. ಮದುವೆ ವೇಳೆ ಫೋಟೋ ಮತ್ತು ವಿಡಿಯೋ ಮೊಬೈಲ್​​ನಲ್ಲಿ ಕ್ಲಿಕ್ಕಿಸಬಾರದು
  6. ಮದುವೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಶೇರ್​​ ಮಾಡುವಂತಿಲ್ಲ
  7. ವಧು-ವರರ ಡ್ರೆಸ್, ಆಹಾರ ಮುಂತಾದವುಗಳ ಮಾಹಿತಿಯನ್ನೂ ನೀಡುವಂತಿಲ್ಲ

ಈ ಎಲ್ಲ ಕಂಡೀಷನ್ಸ್​ಗಳಿಂದ ಅತಿಥಿಗಳು ತೀವ್ರ ಬೇಸತ್ತಿದ್ದಾರಂತೆ. ನಾವೇನು ಯಾವುದಾದ್ರೂ ದೇಶಕ್ಕೆ ಸಂಬಂಧಿಸಿದ ಸಿಕ್ರೇಟ್​ ಕೆಲಸ ಮಾಡುತ್ತಿದ್ದೇವೆಯೋ ಅಥವಾ ಮದುವೆಗೆ ಹೋಗುತ್ತಿದ್ದೆವೆಯೋ ಎಂದು ಅತಿಥಿಗಳು ಬೇಸರಿಸಿಕೊಂಡಿದ್ದಾರಂತೆ. ಅಷ್ಟೇ ಅಲ್ಲ… ಇಷ್ಟೆಲ್ಲ ಮಾಡಿ ನಾವ್ಯಾಕೆ ಮದುವೆಗೆ ಹೋಗಬೇಕು? ಎಂದೂ ಪ್ರಶ್ನಿಸುತ್ತಿದ್ದಾರಂತೆ. ಈ ಬಗ್ಗೆ ಅತಿಥಿಯೊಬ್ಬರನ್ನು ಮಾತನಾಡಿಸಿ ಹಿಂದಿಯ ಆಜ್​ತಕ್ ವಿಸ್ತೃತ ವರದಿ ಮಾಡಿದೆ.

ಇದನ್ನೂ ಓದಿ: ವಿಕ್ಕಿ​​, ಕತ್ರಿನಾ ಮದುವೆಗೂ ತಟ್ಟಿದ ಹೊಸ ವೈರಸ್​ ಬಿಸಿ; ಗೆಸ್ಟ್​ಗಳಲ್ಲಿ ಗಣನೀಯ ಇಳಿಕೆ

News First Live Kannada


Leave a Reply

Your email address will not be published. Required fields are marked *