ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಟಾಲಿವುಡ್ ಮತ್ತೊಬ್ಬ ಸ್ಟಾರ್ ನಟನೊಂದಿಗೆ ನಟಿಸುತ್ತಿರೋ ವಿಚಾರವನ್ನ ಹೇಳಿದ್ದಾರೆ. ಈಗಾಗಲೇ ಗೊತ್ತಿರುವ ಹಾಗೆ ಸಲ್ಮಾನ್ ಖಾನ್ ಮೆಗಾಸ್ಟಾರ್ ಚಿರಂಜೀವಿ ಹೀರೋ ಆಗಿ ನಟಿಸುತ್ತಿರೋ ‘ಗಾಡ್ ಫಾದರ್” ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಗಾಡ್ ಫಾದರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಚಿರಂಜೀವಿ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ನಡುವೆ ಭಜರಂಗಿ ಭಾಯ್ಜಾನ್ ಟಾಲಿವುಡ್ ವಿಕ್ಟರಿ ವೆಂಕಟೇಶ್ ಜೊತೆ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಮಾತನಾಡಿರುವ ಸಲ್ಲು ಭಾಯ್, ನಾನು ಮತ್ತು ವೆಂಕಟೇಶ್ ಜೀ ಒಟ್ಟಿಗೆ ನಟಿಸುತ್ತಿದ್ದೇವೆ, ಅದರ ಸಂಪೂರ್ಣ ವಿಚಾರವನ್ನು ಅದಷ್ಟು ಬೇಗ ಚಿತ್ರ ತಂಡ ತಿಳಿಸಲಿದೆ ಎಂದು ಕತೂಹಲ ಕಾಯ್ದಿರಿಸಿದ್ದಾರೆ ಬೀಯಿಂಗ್ ಹ್ಯೂಮ್ಯಾನ್.
ಸಲ್ಮಾನ್ ಖಾನ್ ಮತ್ತು ವೆಂಕಟೇಶ್ ಸಾಕಷ್ಟು ವರ್ಷಗಳಿಂದ ಒಳ್ಳೆ ಸ್ನೇಹಿತರು. ಸಲ್ಮಾನ್ ಖಾನ್ ಸಿನಿಮಾಗಳು ತೆಲುಗಿನಲ್ಲಿ ರಿಲೀಸ್ ಆದಾಗ ವೆಂಕಟೇಶ್ ತುಂಬಾ ಸಪೋರ್ಟ್ ಮಾಡಿದ್ದಾರೆ. ಸದ್ಯ ವೆಂಕಿ ಸಿನಿಮಾದಲ್ಲಿ ಸಲ್ಮಾನ್ ಕಾಣಿಸೋ ಮೂಲಕ 2 ತೆಲುಗು ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.
The post ವಿಕ್ಟರಿ ವೆಂಕಟೇಶ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ತಾರಾ ಸಲ್ಲು ಭಾಯ್? appeared first on News First Kannada.