ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧಿ ಕಳವು ಮಾಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಸಂಗ್ರಹಿಸಲಾಗಿದ್ದ ಬ್ಲ್ಯಾಕ್ ಫಂಗಸ್ ಔಷಧಿಯನ್ನು ಕಳ್ಳತನ ಮಾಡಲಾಗಿದ್ದು, ಆಸ್ಪತ್ರೆಯ ಸಿಬ್ಬಂದಿಯ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ.

ಕೊರೊನಾ ಸೋಂಕಿನ 2ನೇ ಅಲೆಯ ತೀವ್ರತೆ ಬ್ಲ್ಯಾಕ್​ ಫಂಗಸ್ ಜನರ ನಿದ್ದೆಗೆಡಿಸಿದೆ. ಈ ಹಿನ್ನೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಬ್ಲ್ಯಾಕ್​ ಫಂಗಸ್ ರೋಗಿಗಳಿಗೂ ಉಚಿತ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ. ನಗರದ ಪ್ರಮುಖ ನಾಲ್ಕು ಆಸ್ಪತ್ರೆಗಳಲ್ಲಿ ಬ್ಲ್ಯಾಕ್​ ಫಂಗಸ್​ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್​ಗೆ ಚಿಕಿತ್ಸೆ ನೀಡಲು ಸಂಗ್ರಹಿಸಿಟ್ಟಿದ್ದ ಒಟ್ಟು 10 ವಯಲ್ಸ್ ಔಷಧಿ ನಾಪತ್ತೆಯಾಗಿದೆ.

ರೆಮ್ಡಿಸಿವರ್​ ರೀತಿಯಲ್ಲೇ ಬ್ಲಾಕ್ ಫಂಗಸ್ ಔಷಧಿ ಕಳ್ಳತನಕ್ಕೂ ದುಷ್ಕರ್ಮಿಗಳು ಸ್ಕೆಚ್ ಹಾಕಿದ್ರಾ ಎಂಬ ಅನುಮಾನ ಎದುರಾಗಿದ್ದು, ಕರ್ತವ್ಯದಲ್ಲಿದ್ದ ನಾಲ್ವರು ಡ್ಯೂಟಿ ವೈದ್ಯರ ಮೇಲೆ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ತನಿಖೆ ಮೊರೆ ಹೋಗಿರುವ ಪೊಲೀಸರು, ಆಸ್ಪತ್ರೆ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದಾರೆ. ವೈದ್ಯರ ಅನುಮತಿ ಇಲ್ಲದೆ ಔಷಧ ಹೊರ ತೆಗೆಯುವಂತಿಲ್ಲಾ ಎಂಬ ನಿಯಮವಿರುವುದರಿಂದ ವೈದ್ಯರ ಮೇಲೆಯೇ ಮೊದಲ ಅನುಮಾನ ಮೂಡಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ವಿವಿಪುರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

The post ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೆಮ್ಡಿಸಿವರ್​​​ ಬಳಿಕ ಈಗ ಬ್ಲ್ಯಾಕ್​ ಫಂಗಸ್ ಔಷಧಿ ಕಳವು appeared first on News First Kannada.

Source: newsfirstlive.com

Source link