ವಿಕ್ರಂ ಆಸ್ಪತ್ರೆಗೆ ರೆಫರ್​ ಮಾಡಿದ್ದೇ ತಪ್ಪಾಯ್ತಾ?..ಏನಂದ್ರು ಶಿವಣ್ಣ


ಬೆಂಗಳೂರು: ಅಪ್ಪುವಿನ ದಿಢೀರ್​ ಸಾವು ಯಾರಿದಂಲೂ ನಂಬಲೂ ಸಾದ್ಯವಾಗ್ತಿಲ್ಲ ಭೇಟಿ ಮಾಡಿದೋರೆಲ್ಲ ಹೀಗೆ ಆಗಲಿಕ್ಕೆ ಹೇಗೆ ಸಾದ್ಯ ಎಂದು ನೋವು ತೋಡಿಕೊಳ್ತಿದ್ದಾರೆ ಎಂದು ನಟ ಶಿವರಾಜ್​ ಕುಮಾರ್​ ಹೇಳಿದ್ದಾರೆ.

ವಿಕ್ರಂ ಆಸ್ಪತ್ರೆಗೆ ರೆಫರ್​ ಮಾಡಿದ್ದೆ ತಪ್ಪಾಯ್ತಾ?
ಇನ್ನು ಪಕ್ಕದಲ್ಲಿ ರಾಮಯ್ಯ ಆಸ್ಪತ್ರೆ ಸೇರಿದಂತೆ ಸಾಕಷ್ಟು ಸೌಲಭ್ಯವುಳ್ಳ ಹಲವಾರು ಆಸ್ಪತ್ರೆಗಳಿದ್ದವು ಆದರೆ ಅವೆಲ್ಲವನ್ನು ಬಿಟ್ಟು ವಿಕ್ರಂ ಆಸ್ಪತ್ರೆಗೆ ರೆಫರ್​ ಮಾಡಿದ್ದು ತಪ್ಪಾಯ್ತಾ ಎಂಬ ಮಾತುಗಳಿಗೆ ಉತ್ತರಿಸಿದ ಶಿವಣ್ಣ ಆ ಸಮಯದಲ್ಲಿ ಪಾಪ ಅವರಿಗೂ ಇದು ತಿಳಿದಿಲ್ಲ ಈ ಬಗ್ಗೆ ಏನು ಹೇಳಬೇಕು ತಿಳಿದಿಲ್ಲ ಎಂದಿದ್ದಾರೆ.

ವಿಧಿ ಅಪ್ಪುವಿನ ಜೀವನದಲ್ಲಿ ಆಟ ಆಡೀತು ಯಾವುದೇ ಮೂನ್ಸೂಚನೆ ಕೊಡದೇ ನನ್ನ ತಮ್ಮನನ್ನು ನಮ್ಮಿಂದ ದೂರ ಮಾಡಿಬಿಟ್ಟಿತು. ದೇವರು ಎಲ್ಲರಿಗೂ ಟೈಂ ಕೊಡ್ತಾನೆ ಆದರೆ ಪುನೀತ್​ ವಿಷಯದಲ್ಲಿ ಕೇವಲ 10 ನಿಮಿಷ ಟೈಂ ಕೊಟ್ಟಿದ್ದರೆ ಅಪ್ಪು ಇಂದಿಗೆ ನಮ್ ಜೊತೆ ಇರ್ತಿದ್ದ ಎಂದು ಶಿವಣ್ಣ ಭಾವುಕರಾಗಿದ್ದಾರೆ.

ಮರೆಯಾದ ಯುವರತ್ನ: ಅಪ್ಪುಗೆ ನ್ಯೂಸ್​ಫಸ್ಟ್​ಗೆ ಗೀತ ನಮನ

https://www.youtube.com/watch?v=4bxvqcmZw4o

News First Live Kannada


Leave a Reply

Your email address will not be published. Required fields are marked *