ಕಿಚ್ಚ ಸುದೀಪ್‌ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್‌ ರೋಣ’ಗಾಗಿ ಬಾಲಿವುಡ್‌ನ ಜಾಕ್ವೆಲಿನ್‌ ಫರ್ನಾಂಡಿಸ್‌ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಅವರ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ‘ವಿಕ್ರಾಂತ್‌ ರೋಣ’ ಚಿತ್ರದಲ್ಲಿ ಜಾಕ್ವೆಲಿನ್‌ ಹಾಡಿನಲ್ಲಿ ನೃತ್ಯ ಮಾತ್ರ ಮಾಡುತ್ತಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು.

ಇದೀಗ, ಜಾಕ್ವಲೀನ್​ ಫರ್ನಾಂಡಿಸ್​ ಸಾಮಾಜಿಕ ಜಾಲತಾಣದಲ್ಲಿ ವಿಕ್ರಾಂತ್​ ರೋಣ ಸೆಟ್​ನಲ್ಲಿ ಹೇಗೆಲ್ಲಾ ಎಂಜಾಯ್​ ಮಾಡಿದ್ರು ಅನ್ನೋದರ ಬಗ್ಗೆ ಬರೆದುಕೊಂಡಿದ್ದಾರೆ. ಅಲ್ಲದೇ, ಅವ್ರು ಸೆಟ್​ಗೆ ಬಂದಾಗ ವಿಕ್ರಾಂತ್​ ರೋಣ ಟೀಂ ಹೇಗೆಲ್ಲಾ ಅವ್ರನ್ನ ವೆಲ್ಕಂ ಮಾಡಿದ್ರು ಶೂಟಿಂಗ್​ ಹೇಗಾಯ್ತು ಇವೆಲ್ಲದರ ಬಗ್ಗೆಯೂ ಅವ್ರು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡು, ಒಂದಷ್ಟು ಅದ್ಭುತವಾದ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅಲ್ಲದೇ ಸೀ ಯೂ ಸೂನ್ ಎಂದು ಹೇಳುವ ಮೂಲಕ ಮತ್ತೊಮ್ಮೆ ಶೂಟಿಂಗ್​ನಲ್ಲಿ ಭಾಗಿಯಾಗ್ತಾರಾ ಅಥವಾ ಹೊಸದೊಂದು ಪ್ರಾಜೆಕ್ಟ್​​ನಲ್ಲಿ ನಟಿಸಲಿದ್ದಾರಾ ಎಂಬ ಕುತೂಹಲವನ್ನ ಜಾಕ್ವೆಲಿನ್ ಉಳಿಸಿಹೋಗಿದ್ದಾರೆ.

ಕಿಚ್ಚ ಸುದೀಪ್​ ಜೊತೆ ವಿಕ್ರಾಂತ್ ರೋಣ ಸಿನಿಮಾ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದು ತುಂಬಾ ಚೆನ್ನಾಗಿತ್ತು. ಶಾಲಿನಿ ಆರ್ಟ್ಸ್ ಮತ್ತು ಮಂಜುನಾಥಗೌಡ ಅವರಿಗೆ ನನ್ನನ್ನು ಸ್ವಾಗತಿಸಿಕೊಂಡಿದ್ದಕ್ಕೆ ಧನ್ಯವಾದ. ಕಿಚ್ಚ ಸುದೀಪ್ ಜೊತೆಗಿನ ಶೂಟಿಂಗ್ ಎಕ್ಸ್​ಪೀರಿಯನ್ಸ್ ಯಾವತ್ತೂ ಮರೆಯಲಾಗದ್ದು. ಮುಂದಿನ ಬಾರಿ ನಾವು ಭೇಟಿಯಾದಾಗ ಟಫ್ ಗೇಮ್ ಚೆಸ್​ಗೆ ತಯಾರಾಗಿ.. ಅನೂಪ್ ಭಂಡಾರಿಯವರೇ ನಿಮ್ಮ ಆಲೋಚನೆಗಳ ಸ್ಪಷ್ಟತೆ ಮತ್ತು ವಿಕ್ರಾಂತ್ ರೋಣ ಜಗತ್ತನ್ನು ನೀವು ಕಟ್ಟಿಕೊಟ್ಟಿರುವುದು ನಿಜಕ್ಕೂ ಅದ್ಭುತ. ಪೂರ್ತಿ ಟೀಮ್​ಗೆ ನನ್ನ ಧನ್ಯವಾದಗಳು. ಮತ್ತೆ ನಿಮ್ಮನ್ನ ಭೇಟಿಯಾಗುತ್ತೇನೆ. ವಿಕ್ರಾಂತ್ ರೋಣ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತರಲಿದೆ.- ಜಾಕ್ವೆಲಿನ್ ಫರ್ನಾಂಡೀಸ್, ನಟಿ

The post ವಿಕ್ರಾಂತ್​ ರೋಣ ಶೂಟಿಂಗ್​ಗೆ ಮತ್ತೆ ಬರ್ತಾರಾ ಜಾಕ್ವೆಲಿನ್? ಅವರ ಪೋಸ್ಟ್​ ಮರ್ಮವೇನು? appeared first on News First Kannada.

Source: newsfirstlive.com

Source link