ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -3 ಹಾಗೂ ವಿಕ್ರಾಂತ್ ರೋಣ ಕಿಚ್ಚನ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿರೋ ಚಿತ್ರಗಳು.. ಅಂದು ಕೊಂಡಂತೆ ಆಗಿದ್ರೆ ಇಷ್ಟೊತ್ತಿಗೆ ಅಂದ್ರೆ ಕಳೆದ ಏಪ್ರಿಲ್ 29ಕ್ಕೆ ಕೋಟಿಗೊಬ್ಬ 3 ಚಿತ್ರ ರಿಲೀಸ್ ಆಗಿ ಅಭಿಮಾನಿ ದೇವರುಗಳನ್ನ ರಂಜಿಸಬೇಕಿತ್ತು. ಅಲ್ಲದೆ ವಿಕ್ರಾಂತ್ ರೋಣ ಚಿತ್ರತಂಡ ಆಗಸ್ಟ್ 19 ಕ್ಕೆ ಸಿನಿಮಾವನ್ನು ರಿಲೀಸ್ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳ ಬೇಕಿತ್ತು.. ಆದ್ರೆ ಕಿಲ್ಲರ್ ಕೊರೊನಾ ಈ ಎಲ್ಲಾ ಸಂಕಲನವನ್ನು ವ್ಯವಕಲನ ಮಾಡಿ ಬಿಟ್ಟಿದೆ.

ಕೊರೊನಾ ಲಾಕ್​​ಡೌನ್ ಕಾರಣ ಏಪ್ರಿಲ್ 29ಕ್ಕೆ ಕೋಟಿಗೊಬ್ಬ3 ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಈ ಗ್ಯಾಪ್​​ನಲ್ಲಿ ಲಾಕ್​ ಡೌನ್​ ಅಲ್​ ಲಾಕ್​ ಆಗ್ತಿದಂತೆ ಕಿಚ್ಚನ ಹುಡುಗರಲ್ಲಿ ಹಾಗೂ ಗಾಂಧಿನಗರದ ಗಲ್ಲಿಗಳಲ್ಲಿ ಒಂದು ಕನ್ಫ್ಯೂಷನ್ ಕ್ರಿಯೇಟ್ ಆಗಿದೆ.

ಅದೇನಪ್ಪ ಅಂದ್ರೆ ವಿಕ್ರಾಂತ್ ರೋಣ ಚಿತ್ರವನ್ನು ಆಗಸ್ಟ್ 19ಕ್ಕೆ ರಿಲೀಸ್ ಮಾಡುವುದಾಗಿ ಈಗಾಗಲೇ ವಿಕ್ರಾಂತ್ ರೋಣ ನಿರ್ಮಾಪಕ ಜಾಕ್​ ಮಂಜು ಅಫಿಶಿಯಲ್​ ಆಗಿ ಅನೌನ್ಸ್​ ಮಾಡಿದ್ದಾರೆ. ಆದ್ರೆ ಏಪ್ರಿಲ್ 29ಕ್ಕೆ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ 3 ಇನ್ನು ರಿಲೀಸ್​ ಆಗಿಲ್ಲ.. ಜೊತೆಗೆ ಥಿಯೇಟರ್​ಗಳ ಓಪನ್​ ಮಾಡಲು ಸರ್ಕಾರ ಕೂಡ ಅನುಮತಿ ನೀಡಿಲ್ಲ. ಒಂದು ವೇಳೆ ಜುಲೈ, ಇಲ್ಲ ಆಗಸ್ಟ್​ನಲ್ಲಿ ಸರ್ಕಾರ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಭರ್ತಿಗೆ ಅವಕಾಶ ಕೊಟ್ರೆ..? ಆಗಸ್ಟ್​ ನಲ್ಲಿ ಅಂದುಕೊಂಡಿರುವ ಡೇಟ್​​ಗೆ ವಿಕ್ರಾಂತ್​ ರೋಣ ಬರ್ತಾನಾ? ಇಲ್ಲ, ಕೋಟಿಗೊಬ್ಬ 3 ರಿಲೀಸ್ ಆಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.

ಇತ್ತ ಗಾಂಧಿನಗರದ ಮಂದಿ ಕೋಟಿಗೊಬ್ಬ 3 ಸದ್ಯಕ್ಕೆ ರಿಲೀಸ್ ಆಗಲ್ಲ.. ಆಗಸ್ಟ್​ 19ಕ್ಕೆ ವಿಕ್ರಾಂತ್ ರೋಣ ಥಿಯೇಟರ್​ಗೆ ಬರ್ತಾನೆ ಅನ್ನೋ ಗುಸು ಗುಸು ಎದ್ದಿದೆ. ಆದರೆ ಈ ಗುಸು ಗುಸು ಕೇವಲ ಗಾಳಿ ಸುದ್ದಿ.. ಸರ್ಕಾರ ಆಗಸ್ಟ್ ನಲ್ಲಿ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಭರ್ತಿಗೆ ಅವಕಾಶ ಕೊಟ್ರೆ .. ಏಪ್ರಿಲ್ 29ಕ್ಕೆ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ3 ಅದ್ದೂರಿಯಾಗಿ ಆಗಸ್ಟ್​ 19ಕ್ಕೆ ರಿಲೀಸ್ ಆಗಲಿದೆ.  ಯಾವುದೇ ಕಾರಣಕ್ಕೂ ಕೋಟಿಗೊಬ್ಬ 3 ಥಿಯೇಟರ್​ಗೆ ಬರೋತನಕ ವಿಕ್ರಾಂತ್ ರೋಣ ಗಾಂಧಿನಗರಕ್ಕೆ ಬರುವುದಿಲ್ಲ ಎಂಬ ಮಾಹಿತಿಯನ್ನು ನಿರ್ಮಾಪಕರ ಜಾಕ್​ ಮಂಜು ನ್ಯೂಸ್​ ಫಸ್ಟ್​ಗೆ ತಿಳಿಸಿದ್ದಾರೆ..

ಆಗಸ್ಟ್​ 19ಕ್ಕೆ ವಿಕ್ರಾಂತ್ ರೋಣ ರಿಲೀಸ್​ ಡೇಟ್ ಅನೌನ್ಸ್​ ಮಾಡಿದ್ವಿ.. ಅದರೆ ಕೊರೊನಾ ಎರಡನೇ ಅಲೆ ಎಫೆಕ್ಟ್​ನಿಂದ ಕೋಟಿಗೊಬ್ಬ 3 ರಿಲೀಸ್​ ಆಗಿಲ್ಲ. ಆದ್ದರಿಂದ ಕೆ-3 ನಿರ್ಮಾಪಕರಿಗೆ ಸಮಸ್ಯೆ ಆಗಿದೆ. ಆ ಕಾರಣದಿಂದ ಆಗಸ್ಟ್​ 19ಕ್ಕೆ ಕೋಟಿಗೊಬ್ಬ 3 ರಿಲೀಸ್ ಮಾಡುವಂತೆ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಹೇಳಿದ್ದೇವೆ..

ಆಗಸ್ಟ್​ನಲ್ಲಿ ಥಿಯೇಟರ್​ಗಳಲ್ಲಿ 100 ಭರ್ತಿಗೆ ಅವಕಾಶ ಸಿಕ್ಕರೆ ಖಂಡಿತವಾಗಿ ಆಗಸ್ಟ್​ 19ಕ್ಕೆ ವಿಕ್ರಾಂತ್ ರೋಣ ಜಾಗದಲ್ಲಿ ಕೋಟಿಗೊಬ್ಬ 3 ಅಭಿಮಾನಿಗಳ ಮುಂದೆ ಬರೋದು ಪಕ್ಕಾ.. ಇದಾದ ನಂತ್ರ ಒಂದೊಳ್ಳೆ ಡೇಟ್ ನೋಡಿ ವಿಕ್ರಾಂತ್ ರೋಣ ರಿಲೀಸ್ ಮಾಡ್ತಿವಿ.. ಈ ವಿಚಾರವಾಗಿ ಸೂರಪ್ಪ ಬಾಬು ಹಾಗೂ ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ ಎಂದು ನಿರ್ಮಾಪಕ ಜಾಕ್ ಮಂಜು ತಿಳಿಸಿದ್ದಾರೆ.. ಜೊತೆಗೆ ಕೋಟಿಗೊಬ್ಬನನ್ನು ನೋಡಲು ತುಂಬಾ ದಿನಗಳಿಂದ ಕಾಯ್ತಿದ್ದ ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.

ಇದನ್ನೂ ಓದಿ: ದೊಡ್ಡ ದೊಡ್ಡ ಸ್ಟಾರ್​ಗಳ ಚಿತ್ರಗಳಿಗೆ ಕೊರೊನಾ ಬ್ರೇಕ್​.. ಅಭಿಮಾನಿಗಳ ಆಸೆಗೆ ತಣ್ಣೀರು..

ವಿಶೇಷ ವರದಿ: ಸತೀಶ್ ಎಂಬಿ, ಫಿಲ್ಮ್​ ಬ್ಯೂರೋ, ನ್ಯೂಸ್​ಫಸ್ಟ್​

The post ವಿಕ್ರಾಂತ್ ರೋಣ ಮೊದಲೋ.. ಕೋಟಿಗೊಬ್ಬ 3 ಮೊದಲೋ..? ಅಭಿಮಾನಿಗಳ ಕನ್ಫ್ಯೂಷನ್​ಗೆ ಇಲ್ಲಿದೆ ಉತ್ತರ appeared first on News First Kannada.

Source: newsfirstlive.com

Source link