ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣದ ಡಬ್ಬಿಂಗ್ ಕಾರ್ಯ ಶುರುವಾಗಿದೆ. ಬಹುದಿನಗಳ ನಂತರ ಸಿನಿಮಾ ಡಬ್ಬಿಂಗ್​​ಗಾಗಿ ಮೈಕ್ ಮುಂದೆ ನಿಂತಿರೋದಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ.

ಅನುಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾ ಕನ್ನಡದ ಜೊತೆಗೆ ತಮಿಳು , ತೆಲುಗು , ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಸುದೀಪ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಲಿದ್ದಾರೆ. ತ್ರಿಡಿ ಟೆಕ್ನಾಲಜಿಯಲ್ಲಿ ಜಾಕ್ ಮಂಜು ನಿರ್ಮಾಣದಲ್ಲಿ ಈ ಬಿಗ್ ಬಜೇಟ್ ಸಿನಿಮಾ ಮೂಡಿಬರುತ್ತಿದೆ.
ಸುದೀಪ್ ನಟನೆಯ ಮತ್ತೊಂದು ಸಿನಿಮಾ ಕೋಟಿಗೊಬ್ಬ-3 ಆಗಸ್ಟ್ ತಿಂಗಳು ತೆರೆಕಾಣುವ ಸಾಧ್ಯತೆ ಇದೆ. ಆಗಸ್ಟ್ ತಿಂಗಳು ವಿಕ್ರಾಂತ್ ರೋಣ ಸಿನಿಮಾ ತೆರೆಕಾಣುವ ದಿನಾಂಕ ನಿಗಧಿಯಾಗಿತ್ತು ಆದ್ರೆ ಲಾಕ್ ಡೌನ್ನಿಂದಾಗಿ ಹಾಗೂ ಕೊಟೀಗೊಬ್ಬ-3 ಚಿತ್ರದಿಂದಾಗಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಡೇಟ್ ಮುಂದುಡಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ..

The post ವಿಕ್ರಾಂತ್ ರೋಣ ಸಿನಿಮಾದ ಡಬ್ಬಿಂಗ್ ಶುರು ಮಾಡಿದ ಕಿಚ್ಚ ಸುದೀಪ್​ appeared first on News First Kannada.

Source: newsfirstlive.com

Source link