ವಿಚಾರಣೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ವಾರಂಟ್ ಜಾರಿಮಾಡಲು ಕೋರ್ಟ್ ಆದೇಶ; ಡಿಕೆ ಶಿವಕುಮಾರ್​ಗೆ ಸಮನ್ಸ್ | Court Summoned DK Shivakumar and Warrant sent to Congress Leaders


ವಿಚಾರಣೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ವಾರಂಟ್ ಜಾರಿಮಾಡಲು ಕೋರ್ಟ್ ಆದೇಶ; ಡಿಕೆ ಶಿವಕುಮಾರ್​ಗೆ ಸಮನ್ಸ್

ಡಿಕೆ ಶಿವಕುಮಾರ್​

ಬೆಂಗಳೂರು: ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ಆರೋಪ ಹಿನ್ನೆಲೆ ವಿಚಾರಣೆಗೆ ಗೈರಾದ ಕಾಂಗ್ರೆಸ್ ನಾಯಕರಿಗೆ ವಾರಂಟ್ ಜಾರಿಗೆ ಕೋರ್ಟ್ ಆದೇಶ ನೀಡಿದೆ. ಜಾಮೀನು ರಹಿತ ವಾರಂಟ್ ಜಾರಿಗೆ ಕೋರ್ಟ್ ಆದೇಶ ನೀಡಿದೆ. ಈಶ್ವರ್ ಖಂಡ್ರೆ ಹಾಗೂ ಎನ್.ಎಸ್.ಮಂಜುನಾಥ್, ಬಸನಗೌಡ ಬಾದರ್ಲಿಗೆ ವಾರಂಟ್ ಜಾರಿಗೆ ಆದೇಶ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರ ವಕೀಲರು ಹಾಜರಾಗಿದ್ದರು. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್​​ನಿಂದ ಸಮನ್ಸ್ ಜಾರಿ ಮಾಡಲಾಗಿದೆ. ಏಪ್ರಿಲ್​ 27ರಂದು ಖುದ್ದು ಹಾಜರಾಗುವಂತೆ ಸಮನ್ಸ್ ಕೊಡಲಾಗಿದೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ ಉಲ್ಲಂಘನೆ ಹಿನ್ನೆಲೆ ಉಪ್ಪಾರಪೇಟೆ ಠಾಣೆ ಪೊಲೀಸರು ಈ ಮೊದಲು ದೂರು ನೀಡಿದ್ದರು.

ಸಂತೋಷ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಲಿ; ಈಶ್ವರಪ್ಪರನ್ನು ಬಂಧಿಸಲಿ: ಡಿಕೆ ಶಿವಕುಮಾರ್

ಇತ್ತ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಂತೋಷ್ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ ಭೇಟಿಯಾಗಿ ಸಂತೋಷ್ ಪತ್ನಿ ಹಾಗೂ ತಾಯಿಗೆ ಸಾಂತ್ವನ ಹೇಳಿದ್ದಾರೆ. ಭೇಟಿ ಬಳಿಕ ಕೈ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಸಾವಿಗೆ ಕಾರಣವೇನು?, ಯಾರು ಕಾರಣವೆಂದೂ ಹೇಳಿದ್ದಾರೆ. ಸಂತೋಷ್‌ ತಾಯಿ, ಪತ್ನಿ ಈ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಮುಂದೆ ಇಂತಹ ಘಟನೆ ನಡೆಯಬಾರದು. ಪ್ರಧಾನಿಗೂ ದೂರು ನೀಡಿದ್ದರೂ ಸಂತೋಷ್‌ಗೆ ನ್ಯಾಯ ಸಿಕ್ಕಿಲ್ಲ. ನಿಮಗೆ ನ್ಯಾಯ ಕೊಡಿಸುವುದಾಗಿ ನಾವು ಭರವಸೆ ನೀಡಿದ್ದೇವೆ. ಕೂಡಲೇ ಸಚಿವ ಕೆ.ಎಸ್. ಈಶ್ವರಪ್ಪರನ್ನು ಬಂಧಿಸಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಭ್ರಷ್ಟಾಚಾರ ಕಾಯ್ದೆಯಡಿ ಕೇಸ್ ದಾಖಲಿಸಿ ಬಂಧಿಸಲು ಆಗ್ರಹ ವ್ಯಕ್ತಪಡಿಸಿದ್ದಾರೆ.

ಸಂತೋಷ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಲಿ. ಸಂತೋಷ್ ಪತ್ನಿ ಜಯಶ್ರೀಗೆ ಸರ್ಕಾರಿ ನೌಕರಿ ಕೊಡಲಿ. ತಾತ್ಕಾಲಿಕವಾಗಿ ನಾವು ಜಯಶ್ರೀಗೆ ನೌಕರಿ ನೀಡುತ್ತೇವೆ. ಕೆಪಿಸಿಸಿಯಿಂದ ಸಂತೋಷ್‌ ಕುಟುಂಬಕ್ಕೆ 11 ಲಕ್ಷ ರೂ. ನೀಡ್ತೇವೆ. ಕೂಡಲೇ ಸಂತೋಷ್‌ ಮಾಡಿಸಿದ್ದ ಕಾಮಗಾರಿ ಬಿಲ್‌ ಪಾವತಿಸಲಿ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ ಮಾಡಿದ್ದಾರೆ.

ಕಿರುಕುಳದಿಂದಲೇ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂತೋಷ್ ತುಂಬಾ ಧೈರ್ಯವಂತ, ಬಿಜೆಪಿಗೆ ಆಸ್ತಿಯಾಗಿದ್ದ. ಕಿರುಕುಳದಿಂದ ಬೇಸತ್ತು ಸಿಎಂ ಭೇಟಿಗೆ ಉಡುಪಿಗೂ ಹೋಗಿದ್ದ. ಕಿರುಕುಳದಿಂದಲೇ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿಕೆ ಸಾಕ್ಷಿ. ನಾವ್ಯಾರೂ ರಾಜಕೀಯ ಮಾಡುತ್ತಿಲ್ಲ, ಇದು ವಾಸ್ತವ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

TV9 Kannada


Leave a Reply

Your email address will not be published.