ವಿಚಾರಣೆಗೆ ಹಂಸಲೇಖ ಆಗಮನ; ಠಾಣೆ ಬಳಿ ಬೆಂಬಲಿಗರೊಂದಿಗೆ ನಟ ಚೇತನ್ ಧರಣಿ


ಬೆಂಗಳೂರು: ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದಾಗ ಕೋಳಿ ತಿಂತಾರಾ? ಕುರಿ ರಕ್ತ ಹುರಿದು ಕೊಟ್ಟರೆ ತಿಂತಾರಾ? ಎಂದು ಪ್ರಶ್ನಿಸಿದ್ದ ಹಂಸಲೇಖಾ ಇಂದು ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇದ್ರ ಬೆನ್ನಲ್ಲೇ ಬೆಂಬಲಿಗರೊಂದಿಗೆ ಠಾಣೆಗೆ ಆಗಮಿಸಿದ ಚೇತನ್​ ಅವರನ್ನು ಇತರ ಪ್ರತಿಭಟನಾಕಾರರ ರೀತಿಯಲ್ಲೇ ತಡೆದಿದ್ದಾರೆ.  ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಚೇತನ್ ತಮ್ಮ ಬೆಂಬಲಿಗರೊಂದಿಗೆ ಧರಣಿಗೆ ಕುಳಿತಿದ್ದಾರೆ.

ಈಗಾಗಲೇ ಎರಡು ಬಾರಿ ವಿಚಾರಣೆ ತಪ್ಪಿಸಿಕೊಂಡಿದ್ದ ಹಂಸಲೇಖ, ಇಂದು ನಗರದ ಬಸವನಗುಡಿ ಪೊಲೀಸ್​ ಠಾಣೆಗೆ ವಿಚಾರಣೆಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಠಾಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಇನ್ನು ಹಂಸಲೇಖ ಪರ ಹಾಗೂ ವಿರೋಧ ಪ್ರತಿಭಟನೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ.

 

News First Live Kannada


Leave a Reply

Your email address will not be published. Required fields are marked *