ಬೆಂಗಳೂರು: ಬಿಟ್ ಕಾಯಿನ್ ಕೇಸ್ನ ಆರೋಪಿ ಶ್ರೀಕಿ ಜೊತೆ ಕಿರಿಕ್ ಮಾಡಿಕೊಂಡು ಅರೆಸ್ಟ್ ಆಗಿದ್ದ ಭೀಮಾ ಜುವೆಲ್ಲರ್ಸ್ ಮಾಲೀಕರ ಮಗ ವಿಷ್ಣುಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಪೊಲೀಸ್ರಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
NDPS ಕಾಯ್ದೆ ಅಡಿ ಬಂಧನಕ್ಕೊಳಗಾಗಿ ವಿಚಾರಣೆಗೊಳಗಾಗಿರುವ ವಿಷ್ಣುಭಟ್ ವಿದೇಶಿ ಪ್ರಜೆ ಜೊತೆ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ಎನ್ನಲಾಗಿದೆ. ಪೂರಕವೆಂಬಂತೆ ವಿಷ್ಣುಭಟ್ ಮನೆ ಮೇಲೆ ದಾಳಿ ನಡೆಸಿದಾಗ ಗಾಂಜಾ ಹಾಗೂ ಪೌಡರ್ ಮಾದರಿಯ ಡ್ರಗ್ಸ್ ಪತ್ತೆಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಕಿರಿಕ್ನಲ್ಲಿ ತಗ್ಲಾಕೊಂಡ ಶ್ರೀಕಿ.. ಭೀಮಾ ಜ್ಯುವೆಲ್ಸ್ ಮಾಲೀಕನ ಪುತ್ರ ವಿಷ್ಣುಭಟ್ ಅರೆಸ್ಟ್
ಆರೋಪಿ ಮೊಬೈಲ್ ಪರಿಶೀಲನೆ ಪರಿಶೀಲನೆ ವೇಳೆ ಮೊಬೈಲ್ ನಲ್ಲಿ ಸಾಕಷ್ಟು ಮಾಹಿತಿ ಲಭ್ಯವಾಗಿದ್ದು, ನೈಜೀರಿಯನ್ ಪ್ರಜೆ ಜೊತೆ ಸೇರಿ ಪೆಡ್ಲಿಂಗ್ ಮಾಡುತ್ತಿರುವ ಬಗ್ಗೆ ಸುಳಿವು ದೊರಕಿದೆಯಂತೆ. ಇನ್ನು ಆರೋಪಿಯ ಜೊತೆ ಹಲವರು ಪಾರ್ಟಿಯಲ್ಲಿ ಭಾಗವಹಿಸಿದ್ದು, ಸದ್ಯ ಆರೋಪಿ ಮತ್ತು ಆತನ ಜೊತೆ ಲಿಂಕ್ ಹೊಂದಿರುವವರ ಬಗ್ಗೆ ಪೊಲೀಸ್ರು ಮಾಹಿತಿ ಕಲೆ ಹಾಕುತ್ತಿದ್ದಾರೆ.